ಕ್ರಿಶ್ಚಿಯನ್ ಮಿಶನರಿಯಲ್ಲಿ ಸನ್ಯಾಸಿನಿಯಾಗಲು ಅಪಹರಣ ನಾಟಕವಾಡಿದ ಶಿವಮೊಗ್ಗದ ಯುವತಿ!

 ಶಿವಮೊಗ್ಗದ ಯುವತಿಯ ನಕಲಿ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.  ಕ್ರಿಶ್ಚಿಯನ್ ಮಿಶನರಿಯಲ್ಲಿ ಸನ್ಯಾಸಿನಿಯಾಗಲು ಅಪಹರಣ ನಾಟಕವಾಡಿ ಸಿಕ್ಕಿಬಿದ್ದಿದ್ದಾಳೆ.

Shivamogga police traced girl who concocted kidnap story for service Christian missionaries gow

ಶಿವಮೊಗ್ಗ (ಮೇ.16):  ಶಿವಮೊಗ್ಗದ ಯುವತಿಯ ನಕಲಿ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.  ಕ್ರಿಶ್ಚಿಯನ್ ಮಿಶನರಿಯಲ್ಲಿ ಕೆಲಸ ಮಾಡಲು ಹೊರಟಿದ್ದ ಯುವತಿ ಸೃಷ್ಟಿಸಿದ ನಕಲಿ ಅಪರಣ ಪ್ರಕರಣ ವಿವಾದವೀಗ ಶಮನವಾಗಿದೆ. ಯುವತಿ ತಂದೆಯ ಮೊಬೈಲಿಗೆ ತನ್ನದೇ ಮೊಬೈಲ್ ನಿಂದಲೇ 20 ಲಕ್ಷ ರೂ ಒತ್ತೆ ಹಣ ಕೊಡುವಂತೆ ಎಸ್ಎಂಎಸ್ ಕಳಿಸಿದ್ದಳು. ಈ ಹಿನ್ನೆಲೆಯಲ್ಲಿ ಯುವತಿಯ ತಂದೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಿವಮೊಗ್ಗದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಫಿಜಿಯೋಥೆರಪಿ ಮಾಡುತ್ತಿದ್ದ 20 ವರ್ಷದ ಯುವತಿ  ರಂಜಿತ ಎಂಬಾಕೆ ತನ್ನ ತಂದೆ  ಮುಂಬೈಗೆ ತೆರಳಲು ಹಣ ನೀಡುವುದಿಲ್ಲ ಎಂದು ಸುಳ್ಳು ಕಥೆ ಸೃಷ್ಟಿಸಿ, ಅಪಹರಣದ ನಾಟಕ ಮಾಡಿದ್ದಳು.

ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ, ಹಿಂದೂ ಪರ ಸಂಘಟನೆ ಪ್ರತಿಭಟನೆ

ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಾಸ್ಟೆಲ್‌ನಿಂದ ಯುವತಿ ನಾಪತ್ತೆಯಾಗಿದ್ದಳು. ಮಗಳ ಮೊಬೈಲ್ ನಿಂದ ಮೆಸೇಜ್ ಬರುತ್ತಿದ್ದ ಹಾಗೆ ತಂದೆ ಬಸವರಾಜ್ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆಯ ಸಮಯದಲ್ಲಿ ಯುವತಿಯು ತಾನೇ ಖುದ್ದಾಗಿ ಎ.ಟಿ.ಎಂ ನಿಂದ ರೂ 5,000/- ಹಣವನ್ನು ಎಫ್ ಡ್ರಾ ಮಾಡಿಕೊಂಡು ಹೋಗಿರುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿತ್ತು.

BENGALURU: ಮ್ಯಾಟ್ರಿಮೋನಿ ಸೈಟ್‌ ನಲ್ಲಿ ಪರಿಚಯವಾಗಿ ಯುವತಿಗೆ 43.51 ಲಕ್ಷ ವಂಚಿಸಿದ ಆನ್‌ಲೈನ್ ಮದುವೆ ಗಂಡು!

ಯುವತಿ ಮೊಬೈಲ್ ನಂಬರ್ ನ ಜಾಡು ಹಿಡಿದ ತನಿಖಾ ತಂಡವು ಯುವತಿಯನ್ನು ಹುಬ್ಬಳ್ಳಿಯ ವಿ.ಆರ್.ಎಲ್ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ. ಮುಂಬೈನ ಕ್ಯಾಥೊಲಿಕ್‌ ಚರ್ಚ್‌ಗೆ ಹೋಗಿ ಅಲ್ಲಿ ಕ್ರಿಶ್ಚಿಯನ್ ಸನ್ಯಾಸಿನಿಯಾಗಿ ಸೇರಿಕೊಂಡು ಸಮಾಜ ಸೇವೆ ಮಾಡುವ ಉದ್ದೇಶದಿಂದ ಹೀಗೆ ಕಥೆ ಕಟ್ಟಿದ್ದಾಗಿ  ಯುವತಿ ಹೇಳಿದ್ದಾಳೆ. ಯುವತಿಯ ಹೇಳಿಕೆ ನಂತರ ಆಕೆಗೆ ಆಪ್ತ ಸಮಾಲೋಚನೆಗೊಳಪಡಿಸಿ, ಪೊಲೀಸರು ಆಕೆಯ ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ.

Latest Videos
Follow Us:
Download App:
  • android
  • ios