Shivamogga: ಉದ್ಯಮಿ ಕುಟುಂಬದಲ್ಲಿ ಕಲಹ: ಅಡಿಕೆ ಮಂಡಿ ವರ್ತಕನ ಪತ್ನಿ ನೇಣಿಗೆ ಶರಣು

ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಅಡಿಕೆ ಮಂಡಿ ವರ್ತಕ ಪ್ರಶಾಂತ್‌ ಎನ್ನುವವರ ಪತ್ನಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

Shivamogga Family Feud Nut Mandi Trader Wife Surrenders to Hanging sat

ಶಿವಮೊಗ್ಗ (ಫೆ.28): ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಅಡಿಕೆ ಮಂಡಿ ವರ್ತಕ ಪ್ರಶಾಂತ್‌ ಎನ್ನುವವರ ಪತ್ನಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಪತಿ ಮಾಡಿಕೊಂಡಿದ್ದ ಸಾಲ ಹಾಗೂ ಜಮೀನು ಮಾರಾಟದಿಂದ ಮನನೊಂದಿದ್ದರು ಎಂದು ಹೇಳಲಾಗುತ್ತಿದ್ದು, ಪೊಲೀಸ್‌ ತನಿಖೆಯ ನಂತರವೇ ಸತ್ಯ ಹೊರಬರಬೇಕಿದೆ.

ನೆಮ್ಮದಿಯಾಗಿ ಜೀವನ ಮಾಡಲು ಹಣವೊಂದಿದ್ದರೆ ಸಾಲದು. ಕುಟುಂಬದ ಎಲ್ಲ ಸದಸ್ಯರ ನಡುವೆ ಪ್ರೀತಿ, ಸ್ನೇಹ, ವಿಶ್ವಾಸ, ಬಾಂಧವ್ಯ ಮತ್ತು ನಂಬಿಕೆ ಇರಬೇಕು. ಇಲ್ಲವಾದರೆ, ಎತ್ತು ಏರಿಗೆ- ಕೋಣ ನೀರಿಗೆ ಎಂಬ ಗಾದೆಯಂತೆ ಸಂಸಾರದ ಬಂಡಿ ಯಶಸ್ವಿಯಾಗಿ ಸಾಗುವುದಿಲ್ಲ. ಅದರಂತೆ ಇಲ್ಲಿ ಸುಂದರವಾದ ಹೆಂಡತಿ, ಜೀವನದಲ್ಲಿ ದುಡಿಮೆಗೆ ಅಡಿಕೆ ಮಂಡಿ ಇದ್ದು ಆರ್ಥಿಕ ಆದಾಯವೂ ಇದೆ. ನೋಡುಗರಿಗೆ ಎಲ್ಲವೂ ಸರಿಯಾಗಿದೆ ಎಂದು ಕಾಣಿಸುತ್ತದೆ. ಆದರೆ, ಕುಟುಂಬದಲ್ಲಿ ಇರುವ ವೈಯಕ್ತಿಕ ಸಮಸ್ಯೆಗಳು ಸಮಾಜಕ್ಕೆ ಅದು ತಿಳಿಯುವುದೇ ಇಲ್ಲ. ಇಲ್ಲಿಯೂ ಕೂಡ ನೋಡಲು ಸುಖವಾಗಿದೆ ಎಂದು ಕಾಣುವ ಸಂಸಾರದಲ್ಲಿ ಅದೇನು ಕಲಹವಿತ್ತೋ ಗೊತ್ತಿಲ್ಲ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಅಂತರ್ಜಾತಿ ವಿವಾಹ ಆಗಿದ್ದ ಯುವತಿ ನೇಣಿಗೆ ಶರಣು: ಕುಟುಂಬಸ್ಥರಿಂದ ಭಾರೀ ಕಿರುಕುಳ

ಗಂಡನ ಸಾಲದ ಹೊರೆಯಿಂದ ಬೇಸತ್ತಿದ್ದ ಪತ್ನಿ: ಶಿವಮೊಗ್ಗ ನರದ ಶ್ವೇತಾ (40) ನೇಣಿಗೆ ಶರಣಾದ ಮಹಿಳೆ ಆಗಿದ್ದಾರೆ. ಅಡಿಕೆ ಮಂಡಿ ವರ್ತಕ ಪ್ರಶಾಂತ್ ಎಂಬುವವರ ಪತ್ನಿ ಆಗಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಡಿಯ ಕೋಣೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ಇನ್ನು ಸಾವಿಗೆ ಪತಿಯ ಸಾಲ ಹಾಗೂ ಜಮೀನು ಮಾರಾಟದ ವಿಷಯವೇ ಕಾರಣ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಕೌಟುಂಬಿಕ ಕಿರುಕುಳ: ತುಮಕೂರು (ಫೆ.27): ಕಳೆದ ಮೂರು ವರ್ಷಗಳ ಹಿಂದೆ ತುಮಕೂರು ಮೂಲದ ಯುವಕ ಅಭಿರಾಮ್ ಎಂಬಾತನನ್ನ ಪ್ರೀತಿಸಿ ವಿವಾಹವಾಗಿದ್ದ ಮೋನಿಕಾ ಕುಟುಂಬ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತುಮಕೂರು ನಗರದ ಹನುಮಂತಪುರದಲ್ಲಿ ನಡೆದಿದೆ. ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸುಂದರ ಜೋಡಿಯೊಂದು ಕುಟುಂಬಸ್ಥರ ವಿರೋಧದ ನಡುವೆಯೂ ಬೇರೆಡೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿತ್ತು. ಆದರೆ, ಅಲ್ಲಿಯೂ ಕಿರುಕುಳ ನೀಡಲಾರಂಭಿಸಿದ್ದರಿಂದ ಮನನೊಂದು ಮದುವೆಯಾಗಿದ್ದ ಯುವತಿ ಸಾವಿಗೆ ಶರಣಾಗಿದ್ದಾಳೆ.

ಗಂಡಂದಿರ ಗೋಳು ಕೇಳೋರು ಯಾರು?: ಪುರುಷ ಸಮಾಜಕ್ಕಿನ್ನು ಉಳಿಗಾಲವಿಲ್ಲ

ಖಾಸಗಿ ಕಾಲೇಜಿನಲ್ಲಿ ಬಿಸಿಎ ಅಭ್ಯಾಸ: ಮೊನಿಕಾ (21) ಕೌಟಂಭಿಕ‌ ಕಲಹಕ್ಕೆ ಮನನೊಂದು, ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಮಕೂರು ನಗರದ ಹನುಮಂತಪುರ 4 ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ. ಗುಬ್ಬಿ ತಾಲೂಕಿನ ಮದನಘಟ್ಟ ಗ್ರಾಮದ ನಿವಾಸಿಯಾಗಿದ್ದ ಮೊನಿಕಾ, ಕಳೆದ ಮೂರು ವರ್ಷಗಳ ಹಿಂದೆ ತುಮಕೂರು ಮೂಲದ ಯುವಕ ಅಭಿರಾಮ್ ಎಂಬಾತನನ್ನ ಪ್ರೀತಿಸಿದ್ದಳು. ಇನ್ನು ಪ್ರೀತಿಸಿದ ಜೋಡಿ ಅಂತರ್ಜಾತಿ ಆಗಿದ್ದರಿಂದ ಮನೆಯವರ ವಿರೋಧ ವ್ಯಕ್ತವಾಗಿತ್ತು. ಅದನ್ನು ಲೆಕ್ಕಿಸದೇ ಬೇರೆಡೆ ಹೋಗಿ ಮದುವೆ ಮಾಡಿಕೊಂಡು ಜೀವನ ಮಾಡುತ್ತಿದ್ದರು. ತುಮಕೂರಿನ ಖಾಸಗಿ ಕಾಲೇಜಿನಲ್ಲಿ ಮೋನಿಕಾ ಬಿಸಿಎ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ, ಮೊನ್ನೆ ತಡರಾತ್ರಿ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

Latest Videos
Follow Us:
Download App:
  • android
  • ios