ಶಿವಮೊಗ್ಗ(ಮಾ. 08) ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದ ಭೀಕರ ಅಪಘಾತ ರಾಯಚೂರು ಮೂಲದ ಮೂವರನ್ನು ಬಲಿಪಡೆದಿದೆ. ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕಾಸ್ಪಾಡಿ ಗ್ರಾಮದ ಬಳಿ ಬೆಳಗ್ಗಿನ ಜಾವ  ನಡೆದ ರಸ್ತೆ ಅಪಘಾತದಲ್ಲಿ ರಾಯಚೂರಿನ ಶಕ್ತಿ ನಗರದ ಕೆಪಿಸಿ ಉದ್ಯೋಗಿಗಳಾದ  ವೆಂಕಟೇಶ್ (55), ತಿಪ್ಪಣ್ಣ (60), ಸಿದ್ದಪ್ಪ (40) ಸಾವನ್ನಪ್ಪಿದ್ದಾರೆ. ನಾಗರಾಜ್  ಗಾಯಾಳುವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಲೆನಾಡಿನಲ್ಲಿ ಮಂಗನ ಕಾಯಿಲೆ ಆರ್ಭಟ!

 ಕಾರ್ಗಲ್ ನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಕಾಸ್ಪಾಡಿ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಸಾಗರ ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.