Mandya: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಮಂಡ್ಯದ ಕಾಮುಕ ಶಿಕ್ಷಕ ಅಮಾನತು

ಮಂಡ್ಯ ಜಿಲ್ಲೆಯ ಕಟ್ಟೇರಿ ಗ್ರಾಮದಲ್ಲಿ ಪ್ರೌಢಶಾಲೆಯ ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಸಿಕ್ಕಿಬಿದ್ದು ಒದೆ ತಿಂದಿದ್ದ ಶಿಕ್ಷಕನನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಅಮಾನತು ಮಾಡಿದೆ.

sexually harassing to girl students given teacher has been suspended sat

ಮಂಡ್ಯ (ಡಿ.17):  ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದ ಆರ್‌ಎಂಎಸ್‌ವಿ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ಹಾಸ್ಟೆಲ್‌ನಲ್ಲಿ ಮುಖ್ಯ ಶಿಕ್ಷಕ ಹಾಗೂ ಹಾಸ್ಟೆಲ್ ಮೇಲ್ವಿಚಾರಕ ಚಿನ್ಮಯಾನಂದ ಮೂರ್ತಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ‌ ಸಿಕ್ಕಿಬಿದ್ದಿದ್ದ ಘಟನೆ ರಾಜ್ಯಾದ್ಯಂತ ತೀವ್ರ ಸುದ್ದಿಯಾಗಿತ್ತು. ವಿದ್ಯಾರ್ಥಿನಿಯರೇ ಮುಖ್ಯ ಶಿಕ್ಷನಿಗೆ ಥಳಿಸಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ನಂತರ ಕಾಮುಕ ಶಿಕ್ಷಕನನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಅಮಾನತು ಮಾಡಿದ್ದಾರೆ.

ಪಾಂಡವುಪರ ತಾಲೂಕಿನ ಕಟ್ಟೇರಿ ಪ್ರೌಢಶಾಲೆ ಮುಖ್ಯ ಶಿಕ್ಷಕನಾಗಿದ್ದ ಚಿನ್ಮಯಾನಂದ ಮೂರ್ತಿ RMSV ಹಾಸ್ಟೆಲ್ ನ ವಿದ್ಯಾರ್ಥಿನಿಯರಿಗೆ ಹಲವು ತಿಂಗಳಿಂದ ಲೈಂಗಿಕ ಕಿರುಕುಳ ಕೊಡುತ್ತಿದ್ದನು. ಕಳೆದ 4-5 ವರ್ಷಗಳಿಂದ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡ್ತಿರುವ ಈತ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನಿತ್ಯ ಲೈಂಗಿಕ ಹಿಂಸೆ ನೀಡುತ್ತಿದ್ದನು. ತರಗತಿ ಮುಗಿದ ಬಳಿಕ ಹಾಸ್ಟೆಲ್‌ನಲ್ಲಿ ಠಿಕಾಣಿ ಹೂಡುತ್ತಿದ್ದ ಈ ಕಾಮುಕ. ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಒಬ್ಬೊಬ್ಬ ವಿದ್ಯಾರ್ಥಿನಿಯನ್ನ ತನ್ನ ಕೊಠಡಿಗೆ ಕರೆಸಿಕೊಳ್ಳುತ್ತಿದ್ದನು. ಆ ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ ನೋಡುವಂತೆ ಹೇಳಿದ್ದ ಚಿನ್ಮಯಾನಂದ ಅವರ ಅಂಗಾಂಗ ಮುಟ್ಟಿ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದನು. ವಿಚಾರ ಬಹಿರಂಗ ಪಡಿಸಿದರೆ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವುದಾಗಿ ಹೆಸರಿಸಿದ್ದಾನೆ. ಶಿಕ್ಷಕ ಭಯದಿಂದ ಪೋಷಕರು ಬಳಿಯೂ ಹೇಳಿಕೊಳ್ಳದ ಮಕ್ಕಳು, ತಮ್ಮನ್ನು ಶಾಲೆಯಿಂದ ಬಿಡಿಸುವಂತೆ ಪೋಷಕರಿಗೆ ಒತ್ತಾಯಿಸುತ್ತಿದ್ದರಂತೆ.

Mandya: ಶಿಕ್ಷಕನಿಂದ ಲೈಂಗಿಕ ಕಿರುಕುಳ, ಬೇಸತ್ತ ವಿದ್ಯಾರ್ಥಿನಿಯರಿಂದ ಧರ್ಮದೇಟು

ದೊಣ್ಣೆ ಹಿಡಿದು ಬಡಿದ ವಿದ್ಯಾರ್ಥಿಗಳು:  ಅದೇ ರೀತಿ ಬುಧವಾರ ರಾತ್ರಿ ಕೂಡ ಓರ್ವ ವಿದ್ಯಾರ್ಥಿನಿಯನ್ನು ತನ್ನ‌‌ ಕೊಠಡಿಗೆ ಕರೆಸಿಕೊಂಡಿದ್ದ ಶಿಕ್ಷಕ ಅಂಗಾಂಗ ಮುಟ್ಟಲು ಪ್ರಯತ್ನಿಸಿದ್ದಾನೆ. ಈ ವೇಳೆ ಕೂಗಿಕೊಂಡ ವಿದ್ಯಾರ್ಥಿನಿ ನೆರವಿಗೆ ಧಾವಿಸಿದ ಇತರೆ ವಿದ್ಯಾರ್ಥಿಗಳು ಕಾಮುಕ ಶಿಕ್ಷಕನ ವರ್ತನೆಗೆ ಬೇಸತ್ತು ಆತನನ್ನು ಮನಬಂದಂತೆ ಥಳಿಸಿದ್ದರು.‌ ದೊಣ್ಣೆ ಹಿಡಿದು ಶಿಕ್ಷಕ ಚಿನ್ಮಯಾನಂದ ಮೂರ್ತಿಗೆ ಬಡಿದ ವಿದ್ಯಾರ್ಥಿಗಳು ಆತನಿಗೆ ತಕ್ಕಪಾಠ ಕಲಿಸುವ ಮೂಲಕ ತಮ್ಮ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು, ಆತನನ್ನು ಹಿಡಿದು ಕೆಆರ್‌ಎಸ್ ಪೊಲೀಸರ‌ ವಶಕ್ಕೆ ಒಪ್ಪಿಸಿದರು. ಈ ಬಗ್ಗೆ ವಿದ್ಯಾರ್ಥಿನಿಯರು ಲಿಖಿತ ದೂರು ಕೂಡ ನೀಡಿದ್ದರು. ವಿದ್ಯಾರ್ಥಿನಿಯರ ಲಿಖಿತ ದೂರು ಮತ್ತು ಡಿಡಿಪಿಐ ಅವರು ಸಲ್ಲಿಸಿದ ಪ್ರಾಥಮಿಕ ವರದಿಯನ್ನು ಆಧರಿಸಿ ವಿಚಾರಣೆ ಕಾಯ್ದಿರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್. ವಿಶಾಲ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕತ್ತರಿಯಿಂದ ಹಲ್ಲೆ ಮಾಡಿ ಬಾಲಕಿಯನ್ನು ಮೊದಲ ಮಹಡಿಯಿಂದ ಎಸೆದ ಶಿಕ್ಷಕಿ

2018ರಲ್ಲೇ ದೂರು, ಆಗದ ಕ್ರಮ: ಕಾಮುಕ ಶಿಕ್ಷಕ ಚಿನ್ಮಯಾನಂದ ಮೂರ್ತಿ ಕುಚಿಷ್ಠೆ ಇದೆ ಮೊದಲಲ್ಲ‌. ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲೇ ಶಿಕ್ಷಕ ಚಿನ್ಮಯಾನಂದ ಮೂರ್ತಿ ವಿರುದ್ಧ ದೂರು ನೀಡಲಾಗಿತ್ತು. ನಾಲ್ಕು ವರ್ಷಗಳ ಹಿಂದೆಯೇ ಕಾಮುಕನ ವಿರುದ್ದ ಅಂದಿನ ಎಸ್‌ಡಿಎಂಸಿ ಸಮಿತಿಯಿಂದ ದೂರು ದಾಖಲಿಸಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದೆ ಮೌನವಹಿಸಿದ ಶಿಕ್ಷಣ ಇಲಾಖೆಯೇ ಇಂದಿನ ಘಟನೆಗೆ ಹೊಣೆ ಎಂದು ಪೋಷಕರು ಆರೋಪಿಸಿದ್ದಾರೆ. ದೂರು ಕೊಟ್ಟಾಗಲೇ ಕ್ರಮವಹಿಸಿದ್ರೆ ಆತನ ನೀಚ ಬುದ್ದಿಯನ್ನು ತಡೆಗಟ್ಟಬಹುದಿತ್ತು. ನಾಲ್ಕು ವರ್ಷಗಳಿಂಸ ಸಾಕಷ್ಟು ವಿದ್ಯಾರ್ಥಿನಿಯರು ನೊಂದಿದ್ದಾರೆ‌ ಎಂದು ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಗ್ರಾಮಸ್ಥರು ಆಕ್ರೋಶ‌ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios