Mangaluru: ಕೆಲಸ ಕೊಡಿಸುವ ನೆಪದಲ್ಲಿ ಉದ್ಯಮಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ: ದೂರು ದಾಖಲು
ಕೆಲಸ ಕೊಡಿಸುವ ನೆಪದಲ್ಲಿ ಉದ್ಯಮಿಯು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಕಾರಿನಲ್ಲಿ ಕಿರುಕುಳ ನೀಡುವಾಗ ಕಿರುಚಾಡಿ ಕಾರಿನಿಂದ ಹೊರಬಂದ ಮಹಿಳೆಯನ್ನು ಬೈಕ್‌ನಲ್ಲಿ ಬಂದ ಯುವಕರು ರಕ್ಷಣೆ ಮಾಡಿದ್ದಾರೆ.
ಮಂಗಳೂರು (ಮೇ.14): ಕೆಲಸ ಕೊಡಿಸುವ ನೆಪದಲ್ಲಿ ಉದ್ಯಮಿಯು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಕಾರಿನಲ್ಲಿ ಕಿರುಕುಳ ನೀಡುವಾಗ ಕಿರುಚಾಡಿ ಕಾರಿನಿಂದ ಹೊರಬಂದ ಮಹಿಳೆಯನ್ನು ಬೈಕ್‌ನಲ್ಲಿ ಬಂದ ಯುವಕರು ರಕ್ಷಣೆ ಮಾಡಿದ್ದಾರೆ. ಮಹಾವೀರ ಟೆಕ್ಸ್ ಟೈಲ್ಸ್ ಹಾಗೂ ಮಹಾವೀರ ಸೂಪರ್ ಮಾರ್ಕೆಟ್ ಮಾಲೀಕ ಪ್ರಭಾಕರ ಹೆಗ್ಡೆ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಲಾಗಿದ್ದು, 20 ವರ್ಷದ ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳವನ್ನು ನೀಡಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಮತ್ತು ಆಕೆಯ ಗಂಡ ದೂರು ನೀಡಿದ್ದಾರೆ. ಇನ್ನು ದೂರು ದಾಖಲಾದ ಬಳಿಕ ಆರೋಪಿಯು ಪರಾರಿಯಾಗಿದ್ದಾನೆ. ಸದ್ಯ ಆರೋಪಿಯು ತನ್ನನ್ನು ಸೂಪರ್ ಮಾರ್ಕೇಟ್‌ನ ಬಿಲ್ಲಿಂಗ್ ತೋರಿಸೋದಾಗಿ ಕಾರಿನಲ್ಲಿ ಕರೆದೊಯ್ದು ಕಿಡ್ನಾಪ್ ಮಾಡಿದ್ದು, ಕಾರಿನಲ್ಲಿ ಮೈಗೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆಂಬ ಆರೋಪವನ್ನು ದೂರಿನಲ್ಲಿ ದಾಖಲಿಸಲಾಗಿದೆ.
Chikkamagaluru Election Results 2023: ಸಿ.ಟಿ.ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ: ಎಸ್.ಎಲ್.ಭೋಜೇಗೌಡ
ಮಾನಭಂಗಕ್ಕೆ ಯತ್ನ, ದೂರು: ದ್ವಿಚಕ್ರ ವಾಹನ ಒಂದರಲ್ಲಿ ಬಂದ ಯುವಕನೋರ್ವ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೋರ್ವರ ಮೈಗೆ ಕೈ ಹಾಕಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಮೇ 13ರಂದು ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬನ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಕಸಬ ಗ್ರಾಮದ ಕಡಂಬು ನಿವಾಸಿ ಯುವತಿಯೋರ್ವರು ಮೇ 13ರಂದು ಮಧ್ಯಾಹ್ನದ ವೇಳೆ ತನ್ನ ಮನೆಯಿಂದ ತರವಾಡು ಮನೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬನ ಎಂಬಲ್ಲಿಗೆ ತಲುಪಿದಾಗ ಅನಿಲಕಟ್ಟೆಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಯುವಕನೋರ್ವ ಯುವತಿಯಲ್ಲಿ ವಿಟ್ಲಕ್ಕೆ ಹೋಗುವ ರಸ್ತೆಯ ಬಗ್ಗೆ ವಿಚಾರಿಸಿ ಬಳಿಕ ಯುವತಿಯ ಮೈಗೆ ಕೈ ಹಾಕಿ ಮಾನ ಭಂಗಕ್ಕೆ ಪ್ರಯತ್ನಿಸಿ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಯುವತಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿರ್ಮಾಪಕನಿಂದ ಲೈಂಗಿಕ ಕಿರುಕುಳ: ಹೆಸರಾಂತ ಹಾಸ್ಯ ಹಿಂದಿ ಧಾರಾವಾಹಿ ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ದಲ್ಲಿ ನಟಿಸುತ್ತಿದ್ದ ನಟಿ ಜೆನ್ನಿಫರ್ ಮಿಸ್ತ್ರಿ ಬೇನಿವಾಲ್ ಅವರು ಚಿತ್ರ ನಿರ್ಮಾಪಕ ಅಸಿತ್ ಕುಮಾರ್ ಮೋದಿ ಹಾಗೂ ಇತರ ಇಬ್ಬರು ಚಿತ್ರತಂಡದವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ. ಆದರೆ ಇದನ್ನು ಮೋದಿ ನಿರಾಕರಿಸಿದ್ದು, ‘ಅಸಭ್ಯ ವರ್ತನೆ ತೋರಿದ ಕಾರಣ ಧಾರಾವಾಹಿ ತಂಡದಿಂದ ಜೆನ್ನಿಫರ್‌ರನ್ನು ಕೈಬಿಡಲಾಗಿತ್ತು.
Kapu Election Results 2023: ಇದು ದೇವ ದುರ್ಲಭ ಕಾರ್ಯಕರ್ತರ ಗೆಲುವು: ಸುರೇಶ್ ಶೆಟ್ಟಿ ಗುರ್ಮೆ
ಹೀಗಾಗಿ ಸೇಡಿನಿಂದ ಈ ಆರೋಪ ಮಾಡಿದ್ದಾರೆ. ಆಕೆಯ ವಿರುದ್ಧ ಮಾನಹಾನಿ ದಾವೆ ಹೂಡುವೆ’ ಎಂದಿದ್ದಾರೆ. ಮುಂಬೈನ ಪೊವೈ ಪೊಲೀಸರಿಗೆ ನೀಡಿದ ದೂರಿನಲ್ಲಿ ನಟಿ, ‘2019ರಲ್ಲಿ ಸಿಂಗಾಪುರಕ್ಕೆ ತೆರಳಿದಾಗ ನನ್ನನ್ನು ನಿರ್ಮಾಪಕ ಕೋಣೆಗೆ ಕರೆದರು. ವಿಸ್ಕಿ ಸೇವಿಸೋಣ ಎಂದು ಆಹ್ವಾನಿಸಿದರು. ಇದಕ್ಕೆ ನಾನು ಒಪ್ಪಲಿಲ್ಲ. ಆಗಾಗ ನನಗೆ ಅವರು ಅಶ್ಲೀಲ ಸಂದೇಶ ಕಳಿಸಿ ಅಸಭ್ಯವಾಗಿ ವರ್ತಿಸುತ್ತಿದ್ದರು’ ಎಂದು ದೂರಿದ್ದಾರೆ.