ಸಹಶಿಕ್ಷಕಿಯನ್ನ ಮಂಚಕ್ಕೆ ಕರೆದಿದ್ದ ಕಾಮುಕ ಶಿಕ್ಷಕ ಮೆಹಬೂಬ್ ಅಲಿ ಅಮಾನತು

ತರಬೇತಿಗೆ ಬಂದಿದ್ದ ಸಹ ಶಿಕ್ಷಕಿ ಜೊತೆಗೆ ಪ್ರಭಾರ ಪ್ರಾಚಾರ್ಯರೊಬ್ಬರು ಅನುಚಿತವಾಗಿ ವರ್ತಿಸಿ ಧರ್ಮದೇಟು ತಿಂದಿರುವ ಘಟನೆ ಸೋಮವಾರ ನಡೆದಿದ್ದು,  ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಶಿಕ್ಷಕ ಮೆಹಬೂಬ್ ಅಲಿಯನ್ನ ರಾಯಚೂರು ಡಿಡಿಪಿಐ ಕೆಡಿ ಬಡಿಗೇರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Sexual Harassment Headmaster Mahbub Ali suspended at raichur rav

ರಾಯಚೂರು (ಆ.14): ತರಬೇತಿಗೆ ಬಂದಿದ್ದ ಸಹ ಶಿಕ್ಷಕಿ ಜೊತೆಗೆ ಪ್ರಭಾರ ಪ್ರಾಚಾರ್ಯರೊಬ್ಬರು ಅನುಚಿತವಾಗಿ ವರ್ತಿಸಿ ಧರ್ಮದೇಟು ತಿಂದಿರುವ ಘಟನೆ ಸೋಮವಾರ ನಡೆದಿದ್ದು,  ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಶಿಕ್ಷಕ ಮೆಹಬೂಬ್ ಅಲಿಯನ್ನ ರಾಯಚೂರು ಡಿಡಿಪಿಐ ಕೆಡಿ ಬಡಿಗೇರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ನಗರದ ಹೊರವಲಯದ ಯರಮರಸ್ ಸಮೀಪದಲ್ಲಿನ ಆದರ್ಶ ವಿದ್ಯಾಲಯದಲ್ಲಿ ನಡೆದಿದ್ದ ಘಟನೆ. ಪ್ರಭಾರಿ ಪ್ರಾಚಾರ್ಯರಾಗಿರುವ ಮೆಹಬೂಬ್ ಅಲಿ. ತರಬೇತಿಗೆ ಬಂದಿದ್ದ ಸಹ ಶಿಕ್ಷಕಿ ಜೊತೆಗೆ ಅನುಚಿತವಾಗಿ ವರ್ತಿಸಿದ್ದ ಕಾಮುಕ. ಶಿಕ್ಷಕಿ ಮೊಬೈಲ್‌ಗೆ ಕೆಟ್ಟದಾದ ಸಂದೇಶ ಕಳುಹಿಸುತ್ತಿದ್ದನು. ಇದರಿಂದ ರೋಸಿಹೋದ ಶಿಕ್ಷಕಿ ತಮ್ಮವರಿಗೆ ಮಾಹಿತಿ ತಿಳಿಸಿದ್ದರು.  ಶಾಲೆಗೆ ಬಂದ ಶಿಕ್ಷಕಿ ಬಂಧುಗಳು, ಜನರು ಪ್ರಾಚಾರ್ಯನಿಗೆ ಮೈಮೇಲಿದ್ದ ಬಟ್ಟೆ ಹರಿದು ಹಿಗ್ಗಾಮುಗ್ಗಾ ಥಳಿಸಿದ್ದರು. ಹೊಡೆತ ತಾಳದೇ ತಾನು ಮಾಡಿರುವುದು ತಪ್ಪಾಗಿದೆ ಕ್ಷಮಿಸಿ ಎಂದು ಸಹ ಶಿಕ್ಷಕಿಯ ಕಾಲಿಗೆ ಬಿದ್ದಿದ್ದ ಕಾಮುಕ., ಇನ್ನು ಮುಂದೆ ಈ ರೀತಿಯಾಗಿ ಮಾಡುವುದಿಲ್ಲ ಎನ್ನುವ ಮುಚ್ಚಳಿಕೆ ಬರೆಯಿಸಿಕೊಂಡಿದ್ದ ಶಿಕ್ಷಕಿ. 

ರಾಯಚೂರು : ಸಹ ಶಿಕ್ಷಕಿಗೆ ರಾತ್ರಿ ಮಲಗಲಿಕ್ಕೆ ಬಾ ಎಂದು ಕರೆದ ಮುಖ್ಯಶಿಕ್ಷಕ ಮೆಹಬೂಬ್ ಅಲಿ

ಸಹ ಶಿಕ್ಷಕಿಯ ಕುಟುಂಬಸ್ಥರು ಥಳಿಸುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಶಿಕ್ಷಣ ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
 

Latest Videos
Follow Us:
Download App:
  • android
  • ios