Asianet Suvarna News Asianet Suvarna News

ಹಾಲು ತರುವ ನೆಪದಲ್ಲಿ ಸೊಸೆಯನ್ನು ಹೊರ ಹಾಕಿದ ಅತ್ತೆ..!

ಲಾಕ್‌ಡೌನ್‌ ಬೆನ್ನಲ್ಲೇ ದೇಶಾದ್ಯಂತ ಅತಿಹೆಚ್ಚುಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಹೀಗಿರುವಾಗಲೇ ಹಾಸನದಲ್ಲೊಂದು ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Daughter in law harassed by in laws for dowry during India Lockdown in Hassan
Author
Hassan, First Published May 1, 2020, 11:01 AM IST

ಹಾಸನ(ಮೇ.01): ಕೊರೋನಾ ಹೊಡೆತಕ್ಕೆ ಸಿಲುಕಿ ಈಡೀ ವಿಶ್ವವೇ ನಲುಗಿತ್ತಿದ್ದರೇ ಇಲ್ಲಿನ ಎಂ.ಜಿ. ರಸ್ತೆ, ಬಸಟ್ಟಿಕೊಪ್ಪಲು ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳ ನೀಡಿದ ಅತ್ತೆ, ಮಾವ ಸೊಸೆಯನ್ನು ಮನೆಯಿಂದ ಹೊರಹಾಕಿದ ಘಟನೆ ಗುರುವಾರ ನಡೆದಿದೆ. 

ಸೊಸೆ ಬಿಂದು ಅವರನ್ನು ಬೆಳಗ್ಗೆ ಹಾಲು ತರಲು ಕಳಿಸಿದ ಅತ್ತೆ ಸುಧಾ ಹಾಗೂ ಮಾವ ರೇವಣ್ಣ, ಮನೆಗೆ ಮರಳುವಷ್ಟರಲ್ಲಿ ಬೀಗ ಹಾಕಿಕೊಂಡು ಕಾರಿನಲ್ಲಿ ಹೊರ ಹೋಗಿದ್ದಾರೆ. ಈ ವೇಳೆ ಸೊಸೆ ಮಾಧ್ಯಮದವರೊಂದಿಗೆ ಮಾತನಾಡಿ, 2018ರಲ್ಲಿ ಮದುವೆಯಾಗಿದ್ದೇನೆ. ಪತಿ ಅಜಯ್‌ ಅವರ ಕುಟುಂಬದವರೆಲ್ಲಾ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಕಳೆದ ಒಂದುವರೆ ವರ್ಷದಿಂದಲೂ ಇದನ್ನು ಅನುಭವಿಸಿರುವುದಾಗಿ ಬಿಂದು ಆರೋಪಿಸಿದ್ದಾರೆ. 

ಅತ್ತೆ, ಮಾವ ಇಬ್ಬರು ಸೊಸೆಯ ಮೇಲೆ ಆರೋಪಿಸಿದ್ದಾರೆ. 1 ವರ್ಷದ ಹಿಂದೆ ಜಗಳ ಮಾಡಿಕೊಂಡು ಹೋದ ಸೊಸೆ ಈಗ ಮನೆಗೆ ಬಂದಿದ್ದಾಳೆ. ಸೊಸೆಗೆ ಯಾವುದೇ ಕಿರುಕುಳ ನೀಡಿಲ್ಲ ಎಂದು ಅಜಯ್‌ ಕುಟುಂಬ ಹೇಳಿದೆ.

ಕೌಟುಂಬಿಕ ದೌರ್ಜನ್ಯ: ಜನತೆಗೆ ಮಹತ್ವದ ಸಂದೇಶ ಸಾರಿದ ವಿರಾಟ್ ಕೊಹ್ಲಿ..!

ರಾಷ್ಟ್ರಾದ್ಯಂತ ಮಾರ್ಚ್ 24ರಿಂದ ಲಾಕ್‌ಡೌನ್ ಘೋಷಣೆಯಾದ ಬಳಿಕ ಏಪ್ರಿಲ್ 01ರವರೆಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ 257 ದೂರುಗಳು ಬಂದಿದ್ದವು. ಆ ಪೈಕಿ 69 ದೂರುಗಳು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದವಾಗಿದ್ದವು.ಲಾಕ್‌ಡೌನ್ ಬೆನ್ನಲ್ಲೇ ಕೌಟುಂಬಿಕ ದೌರ್ಜನ್ಯ ಹೆಚ್ಚುತಿರುವ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಸೆಲಿಬ್ರಿಟಿಗಳು ಧ್ವನಿ ಎತ್ತಿದ್ದರು. ಲಾಕ್‌ಡೌನ್ ಡೊಮೆಸ್ಟಿಕ್ ವೈಲೆನ್ಸ್ ಎನ್ನುವ ವಿಡಿಯೋದಲ್ಲಿ ಕೊಹ್ಲಿ-ಅನುಷ್ಕಾ ಶರ್ಮಾ, ರೋಹಿತ್ ಶರ್ಮಾ, ಬಾಲಿವುಡ್ ನಟ ಕರಣ್ ಜೋಹರ್ ಸೇರಿದಂತೆ ಹಲವರು, ನೀವು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದರೆ ದಯವಿಟ್ಟು ದೂರು ನೀಡಿ ಎನ್ನುವ ಸಂದೇಶ ನೀಡಿದ್ದರು.

Follow Us:
Download App:
  • android
  • ios