ಇನ್ನೂ ರಹಸ್ಯ ಸ್ಥಳದಲ್ಲೇ ಇರುವ ರಮೇಶ್ ಜಾರಕಿಹೊಳಿ/ ರಮೇಶ್ ಜಾರಕಿಹೊಳಿ ಸಿಡಿ ಸ್ಪೋಟಕ್ಕೆ ಕ್ಷಣಗಣನೆ/ ರಹಸ್ಯ ಸ್ಥಳದಲ್ಲಿ ಕೂತು ದಾಖಲೆ ಪರಿಶೀಲನೆಯಲ್ಲಿ ತೊಡಗಿರೋ ರಮೇಶ್/ ದೇವರ ಪೂಜೆಯ ನಂತರ ಮಾಧ್ಯಮದ ಮುಂದೆ ಬರಲಿರುವ ಜಾರಕಿಹೊಳಿ/ ಹಂತ ಹಂತವಾಗಿ ದಾಖಲೆ ಬಿಡುಗಡೆ ಮಾಡಲು ಜಾರಕಿಹೊಳಿ ಸಿದ್ದತೆ

ಬೆಂಗಳೂರು(ಮಾ. 27) ಎಲ್ಲರ ದೃಷ್ಟಿ ರಮೇಶ್ ಜಾರಕಿಹೊಳಿ ಅವರ ಸದಾಶಿವ ನಗರದ ನಿವಾಸದ ಕಡೆ ನೆಟ್ಟಿದೆ. ಇನ್ನು ಕೆಲವೇ ಕ್ಷಣದಲ್ಲಿ ಪ್ರೆಸ್ ಮೀಟ್ ನಡೆಸಿ ಸ್ಫೋಟಕ ಮಾಹಿತಿ ನೀಡಲಿದ್ದಾರೆ.

Add Asianetnews Kannada as a Preferred SourcegooglePreferred

ಇನ್ನೂ ರಹಸ್ಯ ಸ್ಥಳದಲ್ಲೇ ಇರುವ ರಮೇಶ್ ಜಾರಕಿಹೊಳಿ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ದೇವರ ಪೂಜೆಯ ನಂತರ ಮಾಧ್ಯಮದ ಮುಂದೆ ಬರಲಿರುವ ಜಾರಕಿಹೊಳಿ ಹಂತ ಹಂತವಾಗಿ ದಾಖಲೆ ಬಿಡುಗಡೆ ಮಾಡಲಿದ್ದಾರೆ.

ರಮೇಶ್ ಗೆ ಇಷ್ಟೊಂದು ಕಾನ್ಫಿಡೆನ್ಸ್ ಬಂದಿದ್ದು ಹೇಗೆ?

ಈಗಾಗಲೇ ವಕೀಲರಿಂದಲೂ ಸಲಹೆ ಪಡೆದುಕೊಂಡಿರುವ ರಮೇಶ್, ಮೊದಲು ಆಡಿಯೋ ಬಿಡುಗಡೆ ಮಾಡಲಿದ್ದಾರೆ. ಆಡಿಯೋ ನಂತರ ಒಂದು ವೀಡಿಯೋ ಸಹ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗಿದೆ ಆ 'ಮಹಾನಾಯಕ'ನ ಗುಟ್ಟು ರಟ್ಟು ಮಾಡಲಿದ್ದಾರೆ ರಮೇಶ್ ಜಾರಕಿಹೊಳಿ ಎಂಬ ಮಾಹಿತಿಯೂ ಇದೆ. 

ಸಿಡಿ ಲೀಕ್ ಮಾಡಿದ್ದು ಯಾರು? ಅದನ್ನ ಅಪ್ ಲೋಡ್ ಮಾಡಿದ್ದು ಯಾರು? ಎಲ್ಲಿಂದ ಅಪ್ ಲೋಡ್ ಆಯ್ತು ..? ಎಂಬ ಎಲ್ಲ ದಾಖಲೆಗಳು ಜಾರಕಿಹೊಳಿ ಕೈ ಸೇರಿದೆಯಾ? ರಮೇಶ್ ಜಾರಕಿಹೊಳಿ ಬಳಿ ಬಳಿ ಇದೆಯಾ ಸಿಡಿ ಜಾಲದ ಪಿನ್ ಟು ಪಿನ್ ಮಾಹಿತಿ? ಎಂಬ ಪ್ರಶ್ನೆಗಳು ಎದ್ದಿವೆ.

ಎಸ್ ಐ ಟಿ ರಚನೆ ಆಗೋ ಮುನ್ನವೇ ಬೆಳಗಾವಿ ನಾಯಕನ ಕೈಗೆ ದಾಖಲಾತಿಗಳು ಸಿಕ್ಕಿದ್ದು ಇದೇ ಮಾಜಿ ಸಚಿವರ ಕಾನ್ಫಿಡೆನ್ಸ್ ಲೆವಲ್ ಹೆಚ್ಚಿಸಲು ಕಾರಣವಾಗಿದೆ ಎಂಬ ಮಾತಿದೆ. ತಮ್ಮ ಬತ್ತಳಿಕೆಯ ಯಾವ ಅಸ್ತ್ರ ಬಳಿಸ್ತಾರೆ ಅನ್ನೋದೆ ಕುತೂಹಲ ಮನೆ ಮಾಡಿದೆ. ಈಗ ಸಿಡಿಸುವ ಬಾಂಬ್ ಗೆ ಹಳೆಯ ಎಲ್ಲ ಕೇಸ್ ಗಳು ಪುಡಿ ಪುಡಿಯಾಗಲಿವೆಯಾ? ಕಾದು ನೋಡಬೇಕಿದೆ.