Asianet Suvarna News Asianet Suvarna News

'ಸಿಡಿ ಪ್ರಕರಣದಲ್ಲಿ ಹಣದ ವ್ಯವಹಾರ ನಡೆದಿದೆ' JDS ನಾಯಕ ಸ್ಫೋಟ!

ಸಿಡಿ ಪ್ರಕರಣದಲ್ಲಿ  ಹಣದ ವ್ಯವಹಾರ ನಡೆದಿದೆ/ ಸರ್ಕಾರದ ಮೇಲೆ ರಮೇಶ್ ಜಾರಕಿಹೋಳಿ ಹಿಡಿತ ಇನ್ನು ಇದೆ/ ಎಸ್ ಐ ಟಿ ಪೊಲೀಸ್ ತನಿಖೆಯಲ್ಲಿ ವಿಫಲರಾಗಿದ್ದಾರೆ/ ಯುವತಿ ಪೋಷಕರಿಗೆ ರಮೇಶ್ ಜಾರಕಿಹೋಳಿ ಹಣ ಕೊಟ್ಟಿರಬಹುದು / ಯುವತಿಗೆ ಡಿ ಕೆ ಶಿವಕುಮಾರ್ ಹಣ ಕೊಟ್ಟಿರಬಹುದು / ಯುವತಿ ಇಂತಹ ರಾಕೆಟ್ನನಲ್ಲಿ ಒಳಗಾಗಲು ಹಣ ಆಮಿಷವೇ ಕಾರಣವಿರಬಹುದು.

Sex Scandal Ramesh jarkiholi  CD Case  JDS Leader SL Bhojegowda Reaction Chikkamagaluru mah
Author
Bengaluru, First Published Mar 27, 2021, 7:33 PM IST

ಚಿಕ್ಕಮಗಳೂರು (ಮಾ. 27)  ಸಿಡಿ ಪ್ರಕರಣದಲ್ಲಿ  ಹಣದ ವ್ಯವಹಾರ ನಡೆದಿದೆ. ಸರ್ಕಾರದ ಮೇಲೆ ರಮೇಶ್ ಜಾರಕಿಹೋಳಿ ಹಿಡಿತ ಇನ್ನು ಇದೆ. ಎಸ್ ಐ ಟಿ  ಮತ್ತು ಪೊಲೀಸ್ ತನಿಖೆಯಲ್ಲಿ ವಿಫಲರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಜೆಡಿಎಸ್ ವಕ್ತಾರ ಎಸ್ ಎಲ್ ಭೋಜೇಗೌಡ  ಹೇಳಿದ್ದಾರೆ.

ಯುವತಿ ಪೋಷಕರಿಗೆ ರಮೇಶ್ ಜಾರಕಿಹೋಳಿ ಹಣ ಕೊಟ್ಟಿರಬಹುದು. ಯುವತಿಗೆ ಡಿ ಕೆ ಶಿವಕುಮಾರ್ ಹಣ ಕೊಟ್ಟಿರಬಹುದು. ಯುವತಿ ಇಂತಹ ರಾಕೆಟ್ನನಲ್ಲಿ ಒಳಗಾಗಲು ಹಣ ಆಮಿಷವೇ ಕಾರಣವಿರಬಹುದು. ಕಾರಣವಿಲ್ಲದೆ ಇಂತಹ ಜಾಲದಲ್ಲಿ ಯುವತಿ ಸಿಲುಕಿಕೊಳ್ಳಲು ಸಾಧ್ಯವಿಲ್ಲ,. ಈ ಪ್ರಕರಣದಲ್ಲಿ ಯುವತಿ ಹೇಳಕೆ ಮುಖ್ಯ ಎಂದು ಜೆಡಿಎಸ್ ವಕ್ತಾರ ಎಸ್ ಎಲ್ ಭೋಜೇಗೌಡ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಸಿಡಿ ಲೇಡಿ ಯಾವಾಗ ಹಾಜರ್‌ ಆಗ್ತಾರೆ? ವಕೀಲರು  ಕೊಟ್ಟ ಮಾಹಿತಿ

ಸಿಡಿ ಸ್ಫೋಟವಾದ ನಂತರ ದಿನಕ್ಕೊಂದು, ಗಂಟೆಗೊಂದು ತಿರುವು ಪಡೆದುಕೊಳ್ಳುತ್ತಿದೆ. ಅಂತಿಮವಾಗಿ ಮಹಾನ್ ನಾಯಕ ಎನ್ನುತ್ತಿದ್ದ ರಮೇಶ್ ಡಿಕೆಶಿ ಹೆಸರನ್ನು ಹೇಳಿದ್ದಾರೆ. ಇನ್ನೊಂದು ಕಡೆ ಯುವತಿ ಪೋಷಕರು ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡಿದ್ದಾರೆ. ನಮ್ಮ ಮಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದೆಲ್ಲದರ ಜತೆಗೆ ಕಮಿಷನರ್ ಕಚೇರಿಗೆ ಸಿಡಿ ಲೇಡಿ ಪರ ವಕೀಲರು ಭೇಟಿ ಕೊಟ್ಟು ಮನವಿ ಮಾಡಿಕೊಂಡಿದ್ದಾರೆ. ಸೂಕ್ತ ಭದ್ರತೆ ಕೊಟ್ಟರೆ ಸಿಡಿ ಲೇಡಿ  ಹಾಜರ್ ಆಗುತ್ತಾರೆಯೇ ?  ಎಂಬುದಕ್ಕೂ ಉತ್ತರ ಕೊಟ್ಟಿಲ್ಲ. ಸಿಡಿ ಲೇಡಿ ಹಾಜರಾಗಿ ಬಹಿರಂಗ ಹೇಳಿಕೆ ನೀಡುವವರೆಗೂ ಇದು  ಮುಂದುವರಿಯುತ್ತಲೆ ಇರುತ್ತದೆ. 

 

Follow Us:
Download App:
  • android
  • ios