ರಮೇಶ್ ಜಾರಕಿಹೊಳಿ ಕಾಮಕಾಂಡ ಪ್ರಕರಣ/ ಕೊನೆಗೂ ರಮೇಶ್ ಜಾರಕಿಹೊಳಿ ವಿರುದ್ದ ದಾಖಲಾಯ್ತು ಕೇಸ್/ ರಮೇಶ್ ಜಾರಕಿಹೊಳಿ‌ ವಿರುದ್ದ ಸುವೊಮೊಟೋ‌ ಕೇಸ್  ದಾಖಲು/ ಕನ್ನಡ ರಕ್ಷಣಾ ವೇದಿಕೆ ದೂರು ಆಧರಿಸಿ ಸುವೊಮೊಟೋ‌ ಕೇಸ್/ ರಾಜ್ಯ ಮಹಿಳಾ ಆಯೋಗದ ಆಧ್ಯಕ್ಷೆ  ಪ್ರಮೀಳಾ ನಾಯ್ಡುರಿಂದ ಕೇಸ್ ದಾಖಲು

ಬೆಂಗಳೂರು(ಮಾ. 05) ರಮೇಶ್ ಜಾರಕಿಹೊಳಿ ಕಾಮಕಾಂಡ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ ದಾಖಲಾಗಿದೆ.

ರಮೇಶ್ ಜಾರಕಿಹೊಳಿ‌ ವಿರುದ್ದ ಸುವೊಮೊಟೋ‌ ಕೇಸ್ ದಾಖಲಾಗಿದೆ. ಕನ್ನಡ ರಕ್ಷಣಾ ವೇದಿಕೆ ದೂರು ಆಧರಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಯಾರು ಈ ದಿನೇಶ್.. ರಮೇಶ್ ಗೆ ಮಾತ್ರವಲ್ಲ ಡಿಕೆಶಿಗೂ ಕಾಡಿದ್ದರು!

ರಾಜ್ಯ ಮಹಿಳಾ ಆಯೋಗದ ಆಧ್ಯಕ್ಷೆ ಪ್ರಮೀಳಾ ನಾಯ್ಡು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ದೂರಿನ ಅನ್ವಯ ಸುವೊಮೊಟೋ‌ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಯುವತಿಯನ್ನು ಕರೆದು ಹೇಳಿಕೆ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ರಮೇಶ್ ಜಾರಕಿಹೊಳಿ ಅವರನ್ನು ಕರೆದು ಮಾತನಾಡಲು ಪೊಲೀಸ್ ತನಿಖೆ ಆಗುತ್ತಿದೆ ಪೊಲೀಸರು ತನಿಖೆ ನಡೆಸಲಿ ನಾವು ಪೊಲೀಸರಿಗೆ ಸಹಕಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸೆಕ್ಸ್ ಸಿಡಿಯೊಂದನ್ನು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಬಿಡುಗಡೆ ಮಾಡಿದ್ದರು. ದೇಶಾದ್ಯಂತ ಸುದ್ದಿಯಾದ ಪ್ರಕರಣ ರಮೇಶ್ ಅವರ ಸಚಿವ ಸ್ಥಾನವನ್ನು ಕಿತ್ತುಕೊಂಡಿತ್ತು. 

ದಿನೇಶ್ ಕಲ್ಲಹಳ್ಳಿ ಸಹ ಪೊಲೀಸರ ಮುಂದೆ ಹಾಜರಾಗಿ ಇನ್ನು ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ. ಸದ್ಯಕ್ಕೆ ರಾಜಕಾರಣ ವಲಯದಲ್ಲಿ ಜೋರಾಗಿ ಮಳೆ ಬಂದು ನಿಂತ ವಾತಾವರಣ ಇದೆ. 

"