ಬೆಂಗಳೂರು(ಮೇ.06): ಕೆಲಸಕ್ಕಿದ್ದ ಕಂಪನಿಯ 42 ವರ್ಷ ಒಡತಿಗೆ ಒತ್ತಾಯ ಪೂರ್ವಕವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ 22 ವರ್ಷದ ಪುಂಡನೊಬ್ಬ ಜೈಲು ಪಾಲಾದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ರಾಜರಾಜೇಶ್ವರಿ ನಗರ ನಿವಾಸಿ ರಾಕೇಶ್‌ (26) ಬಂಧಿತ. ಸಂತ್ರಸ್ತ ಮಹಿಳೆ ಜೆ.ಪಿ.ನಗರದ 9ನೇ ಹಂತದಲ್ಲಿ ಎಚ್‌.ಆರ್‌.ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ಮಹಿಳೆ 2016ರಲ್ಲಿ ಪತಿಯಿಂದ ವಿಚ್ಛೇದನ ಪಡೆದಿದ್ದರು. ಸಂಬಂಧಿಯೊಬ್ಬರ ಮೂಲಕ ರಾಕೇಶ್‌ ತಂದೆ ಪರಿಚಯವಾಗಿದ್ದರು. ಅವರ ಕೋರಿಕೆಯಂತೆ ರಾಕೇಶ್‌ಗೆ ಕಂಪನಿಯಲ್ಲಿ ಸಂತ್ರಸ್ತೆ 2017ರಲ್ಲಿ ಕಚೇರಿ ಸಹಾಯಕನಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದರು.

ಲಾಕ್‌ಡೌನ್ ನಡುವೆ ನೆರೆಮನೆ ಯುವಕನಿಂದ ಲೈಂಗಿಕ ಕಿರುಕುಳ!

ಏ.22ರಂದು ರಾಕೇಶ್‌ ನನಗೆ ಭೇಟಿಯಾಗುವಂತೆ ಒತ್ತಾಯ ಮಾಡಿದ್ದ. ಆರ್‌.ಆರ್‌.ನಗರದ ಇಂದ್ರಪ್ರಸ್ಥ ಹೋಟೆಲ್‌ ಬಳಿ ಹತ್ತಿರ ಬಂದಾಗ ರಾಕೇಶ್‌ ಬಂದು ನನ್ನ ಕಾರಿನಲ್ಲಿ ಕುಳಿತುಕೊಂಡ. ಕಾರಿನಲ್ಲಿ ಮದ್ಯಪಾನ ಮಾಡುತ್ತಾ ಕಚೇರಿಗೆ ಬಂದ. ರಾತ್ರಿ 11ರ ಸುಮಾರಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ದೈಹಿಕ ಸಂಪರ್ಕ ಸಾಧಿಸಿದ. ನಗ್ನ ಫೋಟೋವನ್ನು ಏ.23ರಂದು ವಾಟ್ಸಪ್‌ ಮಾಡಿದ್ದ. ಬೆದರಿಕೆ ಹಾಕಿದ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.