ಜಗಳ ಬಿಡಿಸಲು ಹೋದ ವ್ಯಕ್ತಿಗೆ  ಮಾನಸಿಕ ಅಸ್ವಸ್ಥ ಬಾಲಕನೋರ್ವ ಕತ್ತರಿಯಿಂದ ಇರಿದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗಿಹಳ್ಳಿಯಲ್ಲಿ ನಡೆದಿದೆ. ಅಣ್ಣಯ್ಯ ಇರಿತಕ್ಕೊಳಗಾದ ವ್ಯಕ್ತಿ.

ಆನೇಕಲ್ (ನ.7): ಜಗಳ ಬಿಡಿಸಲು ಹೋದ ವ್ಯಕ್ತಿಗೆ ಮಾನಸಿಕ ಅಸ್ವಸ್ಥ ಬಾಲಕನೋರ್ವ ಕತ್ತರಿಯಿಂದ ಇರಿದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗಿಹಳ್ಳಿಯಲ್ಲಿ ನಡೆದಿದೆ.

ಅಣ್ಣಯ್ಯ ಇರಿತಕ್ಕೊಳಗಾದ ವ್ಯಕ್ತಿ. ಬೆಂಗಳೂರಿನ ವಿಜಯನಗರದ 14 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕ ಮೂರು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ. ಬನ್ನೇರುಘಟ್ಟ ಸಮೀಪದ ಬೇಗಿಹಳ್ಳಿ ಸಮೀಪ ಕತ್ತರಿಯನ್ನ ಕೈನಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದ. ಈ ವೇಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಬಾಲಕಿ ಕುತ್ತಿಗೆಗೆ ಕತ್ತರಿ ಇಟ್ಟು ಹಣ ನೀಡುವಂತೆ ಹೆದರಿಸುತ್ತಿದ್ದ. ಇದನ್ನು ಕಂಡು ಬಾಲಕಿಯ ರಕ್ಷಣೆಗೆ ಮುಂದಾಗಿ ಅಣ್ಣಯ್ಯ. 

ಕಿತ್ತೂರಿನಲ್ಲಿ ವಿನಯ ಕುಲಕರ್ಣಿ ಜನ್ಮದಿನ; ಬೃಹತ್ ಸೇಬಿನಹಾರಕ್ಕೆ ಮುಗಿಬಿದ್ದ ಅಭಿಮಾನಿಗಳು!

ಅಣ್ಣಯ್ಯ ರಕ್ಷಣೆಗೆ ಬಂದಿದ್ದಕ್ಕೆ ಮಾನಸಿಕ ಅಸ್ವಸ್ಥ ಬಾಲಕ ಕುತ್ತಿಗೆಗೆ ಕತ್ತರಿಯಿಂದ ಇರಿದಿದ್ದಾನೆ. ಗಾಯಗೊಂಡಿದ್ದ ಅಣ್ಣಯ್ಯ ಎಂಬಾತನನ್ನ ಆಸ್ಪತ್ರೆಗೆ ರವಾನೆ ಮಾಡಿದ ಸ್ಥಳೀಯರು, ಮಾನಸಿಕ ಅಸ್ವಸ್ಥ ಬಾಲಕನನ್ನ ಹಿಡಿದು ಬನ್ನೇರುಘಟ್ಟ ಪೊಲೀಸರಿಗೆ ಒಪ್ಪಿಸಿದ್ದಾರೆ. 

ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಾಲಕ ವಿಜಯನಗರದ ನಿವಾಸಿಯಾಗಿದ್ದು, ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ. ಮೂರು ದಿನಗಳ ಹಿಂದೆ ಕಾಣೆಯಾಗಿರುವ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

'ಜೈನಮುನಿಗಳನ್ನು ಹತ್ಯೆ ಮಾಡಬೇಕು'! ಬಿಜೆಪಿ ಮಾಜಿ ಸಂಸದನೊಬ್ಬನ ಬಾಯಲ್ಲಿ ಬರುವ ಮಾತಾ ಇದು? ಜೈನ ಮುನಿ ಖಂಡನೆ

ಘಟನೆ ಸಂಬಂಧ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.