Asianet Suvarna News Asianet Suvarna News

ಕಿತ್ತೂರಿನಲ್ಲಿ ವಿನಯ ಕುಲಕರ್ಣಿ ಜನ್ಮದಿನ; ಬೃಹತ್ ಸೇಬಿನಹಾರಕ್ಕೆ ಮುಗಿಬಿದ್ದ ಅಭಿಮಾನಿಗಳು!

ಇಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರ 54ನೇ ಜನ್ಮದಿನ ನಿಮಿತ್ತ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿನಲ್ಲಿ ಆಯೋಜನೆಗೊಂಡಿದ್ದ 'ಜನ ನಮನ' ವಿಶೇಷ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಧಾರವಾಡ ಪ್ರವೇಶ ನಿಷೇಧ ಹಿನ್ನೆಲೆ ಕಿತ್ತೂರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಅಭಿಮಾನಿಗಳು

Lingayat leader Former minister Vinay kulkarni birthday today in kittur at belagavi rav
Author
First Published Nov 7, 2023, 8:02 PM IST

ಧಾರವಾಡ (ನ.7): ಇಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರ 54ನೇ ಜನ್ಮದಿನ ನಿಮಿತ್ತ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿನಲ್ಲಿ ಆಯೋಜನೆಗೊಂಡಿದ್ದ 'ಜನ ನಮನ' ವಿಶೇಷ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಧಾರವಾಡ ಪ್ರವೇಶ ನಿಷೇಧ ಹಿನ್ನೆಲೆ ಕಿತ್ತೂರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಅಭಿಮಾನಿಗಳು. ಕಾರ್ಯಕ್ರಮದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ನೂರಾರು ಅಭಿಮಾನಿಗಳು ಭಾಗಿಯಾಗಿದ್ದರು. ವಿನಯ ಕುಲಕರ್ಣಿಗೆ ಬೃಹತ್ ಸೇಬಿನ ಹಾರ ಹಾಕಿ ಸಂಭ್ರಮಿಸಿದ ಅಭಿಮಾನಿಗಳು. ಈ ವೇಳೆ ಸೇಬು ಕಿತ್ತುಕೊಳ್ಳಲು ವೇದಿಕೆ ಬಳಿ ಅಭಿಮಾನಿಗಳಿಂದ ಕೆಲಹೊತ್ತು ನೂಕುನುಗ್ಗಲು ಉಂಟಾಯಿತು. 

'ಜೈನಮುನಿಗಳನ್ನು ಹತ್ಯೆ ಮಾಡಬೇಕು'! ಬಿಜೆಪಿ ಮಾಜಿ ಸಂಸದನೊಬ್ಬನ ಬಾಯಲ್ಲಿ ಬರುವ ಮಾತಾ ಇದು? ಜೈನ ಮುನಿ ಖಂಡನೆ

ಬರಗಾಲದ ಮಧ್ಯೆಯೂ ಅದ್ದೂರಿ ಜನ್ಮದಿನ ಆಚರಿಸುವುದು ಬೇಡ ಎಂದಿದ್ದ ಕುಲಕರ್ಣಿ ಆದರೂ ಅಭಿಮಾನಿಗಳಿಂದ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಳೆದ ಸಲವೂ ಕಿತ್ತೂರನಲ್ಲಿ ನಡೆದಿದ್ದ ಜನ್ಮದಿನ ಕಾರ್ಯಕ್ರಮ. ಜನ್ಮದಿನ ವೇದಿಕೆ ಮೂಲಕ ಚುನಾವಣೆ ಕಹಳೆ ಮೊಳಗಿಸಿದ್ದ ಕುಲಕರ್ಣಿ.  ಈ ಹಿನ್ನೆಲೆ ಈ ವರ್ಷವೂ ಅದೇ ಸ್ಥಳದಲ್ಲಿ ಜನ್ಮದಿನ ಆಯೋಜನೆ ಮಾಡಿರುವ ಅಭಿಮಾನಿಗಳು.

ಕಾರ್ಯಕ್ರಮದಲ್ಲಿ ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ನಯಾನಗರ ಅಭಿನಯ ಸಿದ್ಧಲಿಂಗ ಸ್ವಾಮೀಜಿ, ಶ್ರೀ ನಿಜಗುಣಾನಂದ ಸ್ವಾಮೀಜಿ, ಭಾಗಿಯಾದರು.

'ಗಣಪತಿ ನಮ್ಮ ಸಂಸ್ಕೃತಿ ಅಲ್ಲ' ಮತ್ತೆ ಪುನರುಚ್ಚರಿಸಿದ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು!

Follow Us:
Download App:
  • android
  • ios