ಹೊಸಕೋಟೆ: ಓವಂ ಆಸ್ಪತ್ರೆಯಲ್ಲಿ ಗರ್ಭಪಾತ, ಸ್ಕ್ಯಾನಿಂಗ್ ರೂಂಗೆ ಬೀಗ

ನಾವು ಕಾಲ ಕಾಲಕ್ಕೆ ಲೈಸೆನ್ಸ್ ರಿನೀವಲ್ ಗೆ ಅಧಿಕಾರಿಗಳಿಗೆ ಮನವಿ ನೀಡಿದರೂ ಅಧಿಕಾರಿಗಳು ಮಾಡಿಕೊಟ್ಟಿಲ್ಲ. ನಾವು ಅಕ್ರಮವಾಗಿ ಯಾವುದೇ ಗರ್ಭಪಾತಗಳನ್ನು ಮಾಡಿಲ್ಲ, ಇದೆಲ್ಲ ಸುಳ್ಳು, ಎಲ್ಲಾ ದಾಖಲೆಗಳನ್ನು ಅಧಿಕಾರಿಗಳಿಗೆ ಕೊಡುತ್ತೇವೆ: ಓವಂ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಅರುಣ್‌ಕುಮಾರ್  

Scanning Room Siezed For Miscarriage at Ovam Hospital in Hosakote grg

ಹೊಸಕೋಟೆ(ಮಾ.22): ನಗರದ ಓವಂ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿರುವ ಬಗ್ಗೆ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ವರದಿ ನೀಡಿದ ಹಿನ್ನೆಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನಿಲ್ ಕುಮಾರ್ ನೇತೃತ್ವದ ತಂಡ ಆಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸಿ ಆಸ್ಪತ್ರೆಯೆ ಸ್ಕ್ಯಾನಿಂಗ್ ಮಿಷನ್ ಸೀಜ್ ಮಾಡಿ ಕೊಠಡಿಗೆ ಸೀಲ್ ಹಾಕಿದ್ದಾರೆ.

ಓವಂ ಆಸ್ವತ್ರೆಯ ಗರ್ಭಪಾತದ ಬಗ್ಗೆ ಡಿಎಚ್‌ಒ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಅಧಿಕಾರಿಗಳಿಗೆ ದಾಖಲೆ ಸಮೇತ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ದೂರು ನೀಡಿದ್ದು, ಅಧಿಕಾರಿಗಳು ರಾಜ್ಯದಿಂದ ಮಾ.೧೮ ರಂದು ಬಂದು ಓವಂ ಆಸ್ವತ್ರೆಯಲ್ಲಿ ತನಿಖೆ ನಡೆಸಿ 373 ಗರ್ಭಪಾತಗಳನ್ನು ಮಾಡಿರುವ ಬಗ್ಗೆ ವರದಿ ಸಿದ್ಧಪಡಿಸಿದ್ದರು. ಬಳಿಕ ಡಿಎಚ್‌ಒ ಮಾ.21ರಂದು ಆಸ್ಪತ್ರೆಗೆ ಆಗಮಿಸಿ ದಾಖಲಾತಿಗಳ ಪರಿಶೀಲನೆ ನಡೆಸಿ ನಂತರ ಆಸ್ವತ್ರೆಯ ಸ್ಯಾನಿಂಗ್ ರೂಂ ಮತ್ತು ಮಿಷನನ್ನು ಸೀಜ್ ಮಾಡಿದ್ದಾರೆ. ಜೊತೆಗೆ ಈ ಬಗ್ಗೆ ಹಲವು ದಾಖಲೆಗಳನ್ನು ಪಡೆದು ತನಿಖೆ ನಡೆಸುತ್ತಿದ್ದು 370 ಗರ್ಭಪಾತಗಳ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ದೂರು ದಾಖಲಿಸುವುದಾಗಿ ತಿಳಿಸಿದರು.

Pocso case: ಶೌಚಾಲಯದಲ್ಲೇ ಗರ್ಭಪಾತ, ಶೌಚ ಗುಂಡಿಯಲ್ಲೇ ಭ್ರೂಣ ವಿಲೇವಾರಿ!

ಘಟನೆ ಬಗ್ಗೆ ಓವಂ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಅರುಣ್‌ಕುಮಾರ್ ಪ್ರತಿಕ್ರಿಯಿಸಿ, ನಾವು ಕಾಲ ಕಾಲಕ್ಕೆ ಲೈಸೆನ್ಸ್ ರಿನೀವಲ್ ಗೆ ಅಧಿಕಾರಿಗಳಿಗೆ ಮನವಿ ನೀಡಿದರೂ ಅಧಿಕಾರಿಗಳು ಮಾಡಿಕೊಟ್ಟಿಲ್ಲ. ನಾವು ಅಕ್ರಮವಾಗಿ ಯಾವುದೇ ಗರ್ಭಪಾತಗಳನ್ನು ಮಾಡಿಲ್ಲ, ಇದೆಲ್ಲ ಸುಳ್ಳು, ಎಲ್ಲಾ ದಾಖಲೆಗಳನ್ನು ಅಧಿಕಾರಿಗಳಿಗೆ ಕೊಡುತ್ತೇವೆ ಎಂದರು.

ಗರ್ಭಪಾತದ ವರದಿ ಬಿಡುಗಡೆ ಮಾಡದಂತೆ ಡಿಎಚ್‌ಒ ಕಿರುಕುಳ ಆರೋಪ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಎಚ್‌ಒ ಸುನಿಲ್ ಕುಮಾರ್ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಂಜುನಾಥ್ ಅವರು ಹೊಸಕೋಟೆ ನೆಲಮಂಗಲದ ಆಸ್ವತ್ರೆಗಳ ಮೇಲೆ ದಾಳಿ ಮಾಡಿ ಗರ್ಭಪಾತದ ಬಗ್ಗೆ ವರದಿ ಮಾಡಿದರು. ಅಷ್ಟೇ ಅಲ್ಲದೆ ಇತ್ತೀಚೆಗೆ ಜಿಲ್ಲೆಯ ಖಾಸಗಿ ಆಸ್ವತ್ರೆಗಳ ಮೇಲೆ ದಾಳಿ ನಡೆಸಿ ಭ್ರೂಣಹತ್ಯೆ ಬಗ್ಗೆ ಕೇಸ್ ದಾಖಲು ಮಾಡಿದ್ದರು. ಆದರೆ ಡಿಎಚ್‌ಒ ಸುನಿಲ್ ಕುಮಾರ್ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಂಜುನಾಥ್‌ಗೆ ಗರ್ಭಪಾತದ ವರದಿ ಬಿಡುಗಡೆ ಮಾಡದಂತೆ ತಾಕಿತು ಮಾಡಿದ್ದರಂತೆ. ಜೊತೆಗೆ ವರದಿ ಮಾಡಲು ಹೋದರೆ ಪದೇ ಪದೇ ನೋಟೀಸ್ಗಳನ್ನು ನೀಡಿ ಅಧಿಕಾರಿಗೆ ಮಾನಸಿಕವಾಗಿ ಕಿರಕುಳ ನೀಡುತ್ತಿದ್ದಾರೆ. ಆದ್ದರಿಂದ ನನಗೆ ನ್ಯಾಯ ಕೊಡಿಸಿ ಅಂತ ಆರೋಗ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಹೊಸಕೋಟೆ ನಗರದ ಓವಂ ಆಸ್ವತ್ರೆಯಲ್ಲಿ ಲೈಸನ್ಸ್ ರಿನೀವಲ್ ಮಾಡದೆ ಅನುಮತಿಯಿಲ್ಲದೆ 373 ಗರ್ಭಪಾತಗಳನ್ನ ಮಾಡಿದ್ದ ವರದಿ ಬಹಿರಂಗ ಪಡಿಸದಂತೆ ಅಧಿಕಾರಿಗೆ ಒತ್ತಡ ಹಾಕಿದ್ದರಂತೆ. ಹೀಗಾಗಿ ಹಿರಿಯ ಅಧಿಕಾರಿಗಳ ಒತ್ತಡದಿಂದ ಮನನೊಂದ ಅಧಿಕಾರಿ ಆಯುಕ್ತರಿಗೆ ಪತ್ರ ಬರೆದು ತನ್ನ ನೋವು ತೋಡಿಕೊಂಡಿದ್ದು ಮಾನಸಿಕ ಸ್ಥಿಮಿತ ಕಳೆದುಕೊಂಡು ಪ್ರಾಣಹಾನಿ ಮಾಡಿಕೊಂಡರೆ ಅದಕ್ಕೆ ಡಿಎಚ್‌ಒ ನೇರ ಕಾರಣ ಎಂದಿದ್ದಾರೆ.

Latest Videos
Follow Us:
Download App:
  • android
  • ios