Asianet Suvarna News Asianet Suvarna News

ಆದರ್‌ ಫೂನಾವಾಲಾ ಹೆಸರಿನಲ್ಲಿ 1 ಕೋಟಿ ವಂಚನೆ, 7 ಮಂದಿಯ ಬಂಧನ!

ಆದರ್‌ ಫೂನಾವಾಲಾ ಅವರ ವಾಟ್ಸ್‌ಆಪ್‌ ಮೆಸೇಜ್‌ ಎಂದು ಕೊಂಡ ಸೀರಮ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾದ ನಿರ್ದೇಶಕ ಸತೀಶ್‌ ದೇಶಪಾಂಡೆ, ಅಂದಾಜು 1 ಕೋಟಿ ರೂಪಾಯಿ ಮೊತ್ತವನ್ನು 7 ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಬಳಿಕ ಅವರಿಗೆ ತಾವು ಮೋಸ ಹೋಗಿರುವುದು ತಿಳಿದುಬಂದಿತ್ತು.

scammers Loot Serum Institute Of 1 crore Posing As Adar Poonawalla  7 members Arrested san
Author
First Published Nov 26, 2022, 5:35 PM IST

ಪುಣೆ (ನ.26): ಮಹತ್ವದ ಬೆಳವಣಿಗೆಯಲ್ಲಿ ಕರೋನಾದ ಕೋವಿಶೀಲ್ಡ್‌ ಲಸಿಕೆಯ ಮೂಲಕ ದೊಡ್ಡ ಮಟ್ಟದ ಹೆಸರು ಸಂಪಾದನೆ ಮಾಡಿದ್ದ ಸೀರಮ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾಕ್ಕೆ 1 ಕೋಟಿ ರೂಪಾಯಿ ವಂಚನೆ ಮಾಡಿದ್ದ 7 ಮಂದಿ ಕಳ್ಳರನ್ನು ಪುಣೆ ಪೊಲೀಸ್‌ ಶುಕ್ರವಾರ ಬಂಧಿಸಿದೆ. ಸೀರಮ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾದ ನಿರ್ದೇಶಕರಿಗೆ ಮೋಸ ಎಸಗಿದ್ದ ವ್ಯಕ್ತಿಗಳು 1.01 ಕೋಟಿ ರೂಪಾಯಿ ವಂಚನೆ ಮಾಡಿದ್ದರು. ದೂರಿನ ಪ್ರಕಾರ, ಸೀರಮ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ ಅಥವಾ ಎಸ್‌ಐಐ ನಿರ್ದೇಶ ಸತೀಶ್‌ ದೇಶಪಾಂಡೆ, 2022ರ ಸೆಪ್ಟೆಂಬರ್‌ನಲ್ಲಿ ತಮ್ಮ ನಂಬರ್‌ಗೆ ಒಂದು ವಾಟ್ಸ್‌ಆಪ್‌ ಮೆಸೇಜ್‌ ಅನ್ನು ಸ್ವೀಕರಿಸಿದ್ದರು. ಕಂಪನಿಯ ಸಿಇಓ ಆದರ್‌ ಫೂನಾವಾಲಾ ಹೆಸರಿನಲ್ಲಿ ಮೆಸೇಜ್‌ ಮಾಡಿದ್ದ ವ್ಯಕ್ತಿ, ತಾವು ಹೇಳುವ ಏಳು ಅಕೌಂಟ್‌ಗಳಿಗೆ ಇಷ್ಟಿಷ್ಟು ಹಣವನ್ನು ಪಾವತಿ ಮಾಡುವಂತೆ ಸೂಚನೆ ನೀಡಿದ್ದರು. ಇದನ್ನು ಸ್ವತಃ ಆದರ್‌ ಫೂನಾವಾಲಾ ಅವರು ಕಳಿಸಿರುವ ಮೆಸೇಜ್‌ ಎಂದುಕೊಂಡ ಸತೀಶ್‌ ದೇಶಪಾಂಡೆ ಒಟ್ಟು 1.01 ಕೋಟಿ ರೂಪಾಯಿ ಮೊತ್ತವನ್ನು ಈ ಏಳು ಅಂಕೌಟ್‌ಗೆ ವರ್ಗಾವಣೆ ಮಾಡಿದ್ದರು. ಅದಾದ ಬಳಿಕ ಅವರಿಗೆ ತಾವು ಮೋಸ ಹೋಗಿರುವುದು ತಿಳಿದುಬಂದಿತ್ತು. ಈ ನಿಟ್ಟಿನಲ್ಲಿ ಅವರು ಪುಣೆ ಪೊಲೀಸ್‌ನಲ್ಲಿ ದೂರು ಕೂಡ ದಾಖಲು ಮಾಡಿದ್ದರು.

ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ವೇಳೆ ಪೊಲೀಸರು ಹಣ ವರ್ಗಾವಣೆ ಮಾಡಿರುವ ಎಂಟು ಖಾತೆಗಳ ಬಗ್ಗೆ ಪೊಲೀಸರು ಪರಿಶೀಲನೆ ಆರಂಭಿಸಿದ್ದರು. "ಈಗ ದೇಶದ ವಿವಿಧ ಭಾಗಗಳಿಂದ ಬಂಧಿಸಲ್ಪಟ್ಟಿರುವ ಈ ಏಳು ಜನರ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಪ್ರಮುಖ ಆರೋಪಿ ಇನ್ನೂ ನಾಪತ್ತೆಯಾಗಿದ್ದಾನೆ" ಎಂದು ಪೊಲೀಸ್ ಉಪ ಆಯುಕ್ತ (ಡಿಸಿಪಿ) ಸ್ಮಾರ್ತನ ಪಾಟೀಲ್ (ವಲಯ II) ಹೇಳಿದ್ದಾರೆ.

WhatsApp: ಸಿಇಒ ಪೂನಾವಾಲ ಹೆಸರಿನಲ್ಲಿ ಸೀರಂಗೆ 1 ಕೋಟಿ ವಂಚನೆ!

ಪ್ರಧಾನವಾಗಿ ಹಣ ವರ್ಗಾವಣೆಯಾದ ಏಳು ಅಕೌಂಟ್‌ಗಳೊಂದಿಗೆ, ಈ ಏಳು ಅಕೌಂಟ್‌ಗಳಿಂದ 40 ಇತರ ಅಕೌಂಟ್‌ಗಳಿಗೆ ಹಣ ವರ್ಗಾವಣೆ ಆಗಿತ್ತು. ಈ ಎಲ್ಲಾ ಅಕೌಂಟ್‌ಗಳನ್ನು ಪೊಲೀಸರು ಸೀಜ್‌ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆ ಈ ಅಕೌಂಟ್‌ಗಳಿಂದ 13 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುಣೆ ಸಿಟಿ ಪೊಲೀಸ್‌ ಶುಕ್ರವಾರ, ಮೂರು ಜನರನ್ನು ಬಂಧನ ಮಾಡಿದೆ. "ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಸಿಇಒ ಆದರ್‌ ಫೂನಾವಾಲಾ ಎಂದು ಬಿಂಬಿಸಿ ವಂಚಿಸಿದ ಪ್ರಕರಣದಲ್ಲಿ ಭಾಗಿಯಾಗಿರುವ 3 ಆರೋಪಿಗಳನ್ನು ಪುಣೆ ಸಿಟಿ ಪೊಲೀಸರ ಸೈಬರ್ ಘಟಕ ಬಂಧಿಸಿದೆ. ಇದುವರೆಗೆ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ನಾಪತ್ತೆಯಾಗಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.

Elon Musk:ಟ್ವಿಟರ್ ಒಪ್ಪಂದ ಯಶಸ್ವಿಯಾಗದಿದ್ರೆ ಚಿಂತೆ ಬೇಡ, ಆ ಹಣವನ್ನು ಭಾರತದಲ್ಲಿ ಹೂಡಿಕೆ ಮಾಡಿ; ಮಸ್ಕ್ ಗೆ ಪೂನಾವಾಲಾ ಸಲಹೆ

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತೀಯ ಜೈವಿಕ ತಂತ್ರಜ್ಞಾನ ಮತ್ತು ಬಯೋಫಾರ್ಮಾಸ್ಯುಟಿಕಲ್ಸ್ ಕಂಪನಿಯಾಗಿದ್ದು, ಇದು ಪುಣೆ ಬಳಿ ಸ್ಥಾವರವನ್ನು ಹೊಂದಿದೆ. ಕಂಪನಿಯು ಇತರ ಲಸಿಕೆಗಳ ನಡುವೆ ಕೊರೊನಾವೈರಸ್ ವಿರುದ್ಧ ಬಳಸುವ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತದೆ.

Follow Us:
Download App:
  • android
  • ios