ಬೆಂಗಳೂರು(ಅ. 09) ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಅವರ ನ್ಯಾಯಾಂಗ ಬಂಧನ ಅ.23 ರವರೆಗೆ  ವಿಸ್ತರಣೆಯಾಗಿದೆ.

ಅನಿಕಾ ಡಿ ಎಂಬಾಕೆಯ ಬಂಧನದ ನಂತರ ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು ನಿಧಾನಕ್ಕೆ ತೆರೆದುಕೊಂಡಿತು. ಒಬ್ಬರಾದ ಮೇಲೆ ಒಬ್ಬರ ಹೆಸರು ಬರತೊಡಗಿತು.  ನಟಿ ರಾಗಿಣಿ ಮತ್ತು ಸಂಜನಾ ಮನೆಯ ಮೇಲೆಯೂ ದಾಳಿ ಮಾಡಿದ್ದ ಸಿಸಿಬಿ ಅನೇಕ ಸಾಕ್ಷ್ಯಗಳನ್ನು ವಶಕ್ಕೆ ಪಡೆದುಕೊಂಡಿತ್ತು.  ಇನ್ನೊಂದು ಕಡೆ  ಐಂದ್ರಿತಾ-ದಿಗಂತ್ ದಂಪತಿ, ಕಿರುತೆರೆ ನಿರೂಪಕ ಅಕುಲ್ ಬಾಲಾಜಿ, ಅನುಶ್ರೀಯವರ ವಿಚಾರಣೆಯನ್ನು ಸಿಸಿಬಿ ನಡೆಸಿದೆ. 

ಪ್ರಭಾವಿಗಳ ಒತ್ತಡಕ್ಕೆ ಮಣಿದು ಅನುಶ್ರೀ ವಿಚಾರಣೆ ಕ್ಲೋಸ್

ಇನ್ನು ಬಾಣಸವಾಡಿ ಕೇಸ್ ಸಂಬಂಧ ಬಂದಿಲ್ಪಟ್ಟಿದ್ದ ರವಿಶಂಕರ್ ನನ್ನು ಮತ್ತೆ  ಬಾಡಿ ವಾರೆಂಟ್ ಮುಖಾಂತರ ಸಿಸಿಬಿ ವಿಚಾರಣೆಗೆಂದು ವಶಕ್ಕೆ ಪಡೆದಿದೆ. ಕಾಟನ್ ಪೇಟೆ ಕೇಸ್ ನಲ್ಲೂ ಸಹ ರವಿಶಂಕರ್ ಹೆಸರು ಕೇಳಿ ಬಂದಿತ್ತು. ಹಲವು ಪಾರ್ಟಿಗಳಲ್ಲಿ ರವಿಶಂಕರ್ ಭಾಗಿಯಾಗಿದ್ದಾಗಿ ಉಲ್ಲೇಖಿಸಲಾಗಿತ್ತು. ಸದ್ಯ ರವಿಶಂಕರ್ ವಿಚಾರಣೆ ಬಳಿಕ ಮತ್ತಷ್ಟು ವಿಚಾರ ಬಯಲಾಗೋ ಸಾಧ್ಯತೆ ಇದೆ. 

ಇದೆಲ್ಲದರ ನಡುವೆ  ಜಾಮೀನು ಕೋರಿ ಸಂಜನಾ ಗರ್ಲಾನಿ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಹಿಂದೆ ಸಲ್ಲಿಕೆಯಾಗಿದ್ದ ನಟಿಮಣಿಯರ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತ್ತು. ಅತ್ತ ಮುಂಬೈನಲ್ಲಿ ಡ್ರಗ್ಸ್ ಕೇಸಿನಲ್ಲೇ ಬಂಧನಕ್ಕೆ ಒಳಗಾಗಿದ್ದ ನಟಿ ರಿಯಾ ಚಕ್ರವರ್ತಿಗೆ ಜಾಮೀನು ಸಿಕ್ಕಿದೆ.