ಮಂಗಳೂರು/ ಬೆಂಗಳೂರು(ಸೆ. 30) ಇಡೀ ಮಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ನೈಜೀರಿಯನ್ ಪ್ರಜೆಯನ್ನು ಬಂಧಿಸಿರುವ ವರದಿ ಒಂದು ಕಡೆ ಬರುತ್ತಿದ್ದರೆ ಇನ್ನೊಂದು ಕಡೆ ಮತ್ತೊಬ್ಬ ಕೊರಿಯೋಗ್ರಾಫರ್  ಬಂಧಿಸಲಾಗಿದೆ.

ಬೆಂಗಳೂರು ಮೂಲದ ಕೊರಿಯೋಗ್ರಾಫರ್ ನನ್ನು ಬಂಧಿಸಲಾಗಿದೆ. ಮಂಗಳೂರು ಸಿಸಿಬಿ ಪೊಲೀಸರಿಂದ ಕೋರಿಯೋಗ್ರಫರ್ ಕಂ ಡ್ಯಾನ್ಸರ್  ನನ್ನು ವಶಕ್ಕೆ ಪಡೆಯಲಾಗಿದೆ.  ವಿಚಾರಣೆ ವೇಳೆ ಡ್ಯಾನ್ಸರ್ ಹಲವು ನಟಿಯರ ಹೆಸರನ್ನು ಈತ  ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.

ಅನುಶ್ರೀಗೆ ಡ್ರಗ್ಸ್ ಶೆಟ್ಟಿ ತಂದ ಸಂಕಟ

ಇನ್ನೊಂದು ಕಡೆ ಸೆರೆ ಸಿಕ್ಕಿರುವ ನೈಜಿರಿಯನ್ ಡ್ರಗ್ಸ್ ಪೆಡ್ಲರ್ ಗೂ  ಮಾತಿನ ಮಲ್ಲಿ ನಿರೂಪಕಿ ಅನುಶ್ರೀ ಗೊತ್ತು. ಪಾರ್ಟಿಗಳಲ್ಲಿ ಅನುಶ್ರೀಯನ್ನು ನೋಡಿದ್ದಾಗಿ ನೈಜೀರಿಯಾ ಪ್ರಜೆ ಹೇಳಿದ್ದ.

ಒಟ್ಟಿನಲ್ಲಿ ಸ್ಯಾಂಡಲ್ ವುಡ್  ಡ್ರಗ್ಸ್ ನಶಾ ಒಂದಾದ ಮೇಲೆ ಒಂದು ತಿರುವು ಪಡೆದುಕೊಳ್ಳುತ್ತಿದ್ದು ಹೊಸ ಹೊಸ ಹೆಸರುಗಳು ಸೇರ್ಪಡೆಯಾಗುತ್ತಲೆ ಇವೆ. ಈ ಪ್ರಕರಣವನ್ನು ಸಿಸಿಬಿ ಗಂಭೀರವಾಗಿ ತೆಗೆದುಕೊಂಡಿದ್ದು ಮೂಲಗಳನ್ನು ಒಂದೊಂದಾಗಿ  ಹೆಕ್ಕಿ ತೆಗೆಯುತ್ತಿದೆ.