ಬೆಂಗಳೂರು(ಫೆ.  05)  ಸ್ಯಾಂಡಲ್ ವುಡ್ ಡ್ರಗ್ ಡೀಲ್  ಪ್ರಕರಣದ ಆರೋಪಿ  ಆದಿತ್ಯ ಆಳ್ವಾಗೆ ಜಾಮೀನು ಸಿಕ್ಕಿದೆ. ಇತರೆ  ನಾಲ್ವರು ಆರೋಪಿಗಳಿಗೂ  ಜಾಮೀನು ದೊರೆತಿದೆ.

ಎನ್ ಡಿಪಿಎಸ್ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ ಆದಿತ್ಯ ಆಳ್ವಾ, ಆದಿತ್ಯ ಅಗರ್ವಾಲ್, ರಾಹುಲ್ ಹಾಗೂ ರವಿಶಂಕರ್ ಗೆ ಬೇಲ್ ಸಿಕ್ಕಿದೆ ನಾಲ್ವರಿಗೂ ಷರತ್ತು ಬದ್ಧ ಜಾಮೀನು ನೀಡಲಾಗಿದೆ.

ಕೊನೆಗೂ ಆದಿತ್ಯ ಆಳ್ವಾ ಸಿಕ್ಕಿಬಿದ್ದಿದ್ದು ಹೇಗೆ?

ಕಾಟನ್ ಪೇಟೆ ಡ್ರಗ್ಸ್ ಕೇಸ್ ಪ್ರಕರಣದ  A6 ಆರೋಪಿ, ಕಳೆದ ನಾಲ್ಕು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾನನ್ನು ಕೊನೆಗೂ ಬಂಧಿಸಿ ಕರೆತರಲಾಗಿತ್ತು.

ಕಳೆದ ಎರಡು ತಿಂಗಳಿಂದ ಆದಿತ್ಯನಿಗಾಗಿ ಬಲೆ ಬೀಸಿದ ಸಿಸಿಬಿ ಪೊಲೀಸರು, ಲುಕ್ ಔಟ್ ನೋಟಿಸ್ ಕೂಡಾ ಹೊರಡಿಸಿದ್ದರು. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ನಟಿ ಸಂಜನಾ ಮತ್ತು ರಾಗಿಣಿಗೂ ಬೇಲ್ ಸಿಕ್ಕಿತ್ತು.   23 ದಿನಗಳ ಜೈಲುವಾಸದ ನಂತರ ಆಳ್ವಾಗೆ ಜಾಮೀನು ಸಿಕ್ಕಿದೆ.