Asianet Suvarna News Asianet Suvarna News

ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಫ್ಲೈ ಓವರ್ ಮೇಲಿಂದ ಬಿದ್ದು ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವು

ನಕಲಿ ದಾಖಲೆಗಳನ್ನು ಸೃಷ್ಟಿಸಿ 3  ನಿವೇಶನಗಳನ್ನು ಅಕ್ರಮವಾಗಿ ರಿಜಿಸ್ಟರ್ ಮಾಡಿಸಿಕೊಂಡ ಆರೋಪದಲ್ಲಿ ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿಯನ್ನು ಕಳೆದ ರಾತ್ರಿ ಪೊಲೀಸರು ಬಂಧಿಸಿ  ಕರೆತರುವಾಗ ತಪ್ಪಿಸಿಕೊಳ್ಳುವ ಯತ್ನದಲ್ಲಿ ಫ್ಲೈ ಓವರ್ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. 

RTI activist Harish Halli died after falling from a flyover while trying to escape from the police gvd
Author
First Published May 28, 2023, 9:27 AM IST

ದಾವಣಗೆರೆ (ಮೇ.28): ನಕಲಿ ದಾಖಲೆಗಳನ್ನು ಸೃಷ್ಟಿಸಿ 3  ನಿವೇಶನಗಳನ್ನು ಅಕ್ರಮವಾಗಿ ರಿಜಿಸ್ಟರ್ ಮಾಡಿಸಿಕೊಂಡ ಆರೋಪದಲ್ಲಿ ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿಯನ್ನು ಕಳೆದ ರಾತ್ರಿ ಪೊಲೀಸರು ಬಂಧಿಸಿ  ಕರೆತರುವಾಗ ತಪ್ಪಿಸಿಕೊಳ್ಳುವ ಯತ್ನದಲ್ಲಿ ಫ್ಲೈ ಓವರ್ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹರೀಶ್ ಹಳ್ಳಿ ಮೇಲೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಹರೀಶ್ ಹಳ್ಳಿ ಮೇಲೆ ವಂಚನೆ  ಪ್ರಕರಣ ದಾಖಲಾಗಿತ್ತು. 

ಕಳೆದ ರಾತ್ರಿ ಬಂಧಿಸಿ ಕರೆತರುವಾಗ ತಪ್ಪಿಸಿಕೊಳ್ಳುವ ಯತ್ನದಲ್ಲಿ ತೋಳಹುಣಸೆ ಸಮೀಪ ಫ್ಲೈ ಓವರ್ ಮೇಲಿಂದ ಬಿದ್ದು ಗಾಯವಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದು ದಾವಣಗೆರೆ ಖಾಸಗಿ ಆಸ್ಪತ್ರೆ ಸೇರಿದ್ದ ಹರೀಶ್ ಹಳ್ಳಿ  (40) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ. ಇನ್ನು ಕುಟುಂಬಸ್ಥರಿಂದ ಗಾಂಧಿನಗರ ಪಿಎಸ್ಐ ಹಾಗು ಇಬ್ಬರ ಸಿಬ್ಬಂದಿಗಳ ಮೇಲೆ 302 ಪ್ರಕರಣ ದಾಖಲಿಸಿದ್ದಾರೆ.

ಟಿಕೆಟ್‌ ರಹಿತ ಪ್ರಯಾಣಿಕರಿಂದ 5.5 ಲಕ್ಷ ದಂಡ ವಸೂಲಿ ಮಾಡಿದ ಕೆಎಸ್‌ಆರ್‌ಟಿಸಿ

ಆನೆ ದಾಳಿಗೆ ಕಾಡಿನಲ್ಲಿ ಹಸು ಮೇಯುತ್ತಿದ್ದ ಮಹಿಳೆ ಬಲಿ: ಮಹಿಳೆಯೋರ್ವರು ಸಮೀಪದ ಕಾದಂಚಿನಲ್ಲಿ ಹಸು ಮೆಯಿಸುತ್ತಿದ್ದ ವೇಳೆ ಕಾಡಾನೆಯೊಂದು ಹಠಾತ್‌ ದಾಳಿ ನಡೆಸಿ ಕೊಂದಿರುವ ಘಟನೆ ಬೆಂಗಳೂರು ದಕ್ಷಿಣ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನ ವನಕ್ಕೆ ಹೊಂದಿಕೊಂಡಿರುವ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ. ಮಹದೇವಮ್ಮ(48) ಕಾಡಾನೆ ದಾಳಿಯಿಂದ ಮೃತಪಟ್ಟಮಹಿಳೆ. ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬ ಸದಸ್ಯರು ಘಟನಾ ಸ್ಥಳಕ್ಕೆ ಧಾವಿಸಿ ಬಂದರು. ಮೃತ ಮಹಿಳೆ ಅನಧಿಕೃತವಾಗಿ ಕಾಡು ಪ್ರವೇಶಿಸಿದರು. 

ಹಾಗಾಗಿ ಸಾವು ಸಂಭವಿಸಿದ್ದು, ಅರಣ್ಯಾಧಿಕಾರಿಗಳು ನೊಂದ ಕುಟುಂಬದ ಸದಸ್ಯರಿಗೆ ಕೂಡಲೇ ಶವವನ್ನ ತೆಗೆದುಕೊಂಡು ಹೋಗುವಂತೆ ತಾಕೀತು ಮಾಡಿದ್ದರೆಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಮೃತಳ ಕುಟುಂಬಸ್ಥರು, ಅರಣ್ಯಾಧಿಕಾರಿಗಳ ಬೇಜವಾಬ್ದಾರಿತನವೇ ಘಟನೆಗೆ ಕಾರಣವೆಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಮೃತಳ ಕುಟುಂಬಕ್ಕೆ ಪರಿಹಾರ ನೀಡಬೇಕು. ಕುಟುಂಬ ಸದಸ್ಯ ರೊಬ್ಬರಿಗೆ ಉದ್ಯೋಗ ನೀಡಬೇಕೆಂದು ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರು. ಬನ್ನೇರುಘಟ್ಟಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಶವವನ್ನು ವಾರಸುದಾರರ ವಶಕ್ಕೆ ನೀಡಿದ್ದಾರೆ.

ಬಸ್‌- ಕಾರಿನ ನಡುವೆ ಭೀಕರ ಅಪಘಾತ: ಬಸ್‌ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಕಾರ್‌ ಚಾಲಕ ಸ್ಥಳದಲ್ಲೇ ಮೃತಪಟ್ಟಘಟನೆ ತಾಲೂಕಿನ ಮಂಕಿ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಖಾಸಗಿ ಬಸ್‌ ಮಂಗಳೂರಿನಿಂದ ಮುಂಬೈಗೆ ತೆರಳುತ್ತಿತ್ತು. ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗುತ್ತಿರುವಾಗ ಮಂಕಿ ಸಮೀಪ ಬಸ್‌ ಕಾರ್‌ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿದ್ದರಿಂದ ಬಸ್‌ ಹೆದ್ದಾರಿ ಪಕ್ಕದಲ್ಲಿಯೇ ಪಲ್ಟಿಯಾಗಿದೆ. ಅಪಘಾತದಲ್ಲಿ ಕಾರು ಚಾಲಕ ಮಂಕಿ ಬೊಳೆಬಸ್ತಿ ನಿವಾಸಿ ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದ ಮೋಹನ್‌ ವಿಷ್ಣು ನಾಯ್ಕ(45) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಆರೋಪಿತ ಬಸ್‌ ಚಾಲಕ ವಿಜಯಪುರದ ಪುರು ರಾಮಸಿಂಗ್‌ ಚವ್ಹಾಣ ಎಂದು ಗುರುತಿಸಲಾಗಿದೆ.

ಎಷ್ಟೇ ಹಿರಿಯರಾದರೂ ಹೈಕಮಾಂಡ್‌ ನಿರ್ಧಾರ ಫೈನಲ್‌: ವೀರಪ್ಪ ಮೊಯ್ಲಿ

ಬಸ್‌ನಲ್ಲಿ ಸುಮಾರು 36 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಬಸ್‌ನಲ್ಲಿದ್ದ ಮಣಿಪಾಲದ ಪ್ರವೀಣ್‌ ಕುಮಾರ್‌ ಬಿ.ಪಿ. ಸಿಂಗ್‌, ಮಂಗಳೂರು ತಲಪಾಡಿಯ ಅಹ್ಮದ್‌ ಆಸಿಕ್‌ ಮುಸಾ, ಉಡುಪಿ ಜಿಲ್ಲೆ ಕಾರ್ಕಳದ ರವೀಂದ್ರ ಮಹಾಬಲ ಶೆಟ್ಟಿ, ಬಾಂಬೆಯ ನಿಶಾ ಶೆಟ್ಟಿಸೇರಿದಂತೆ ಇನ್ನೂ ಹಲವಾರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೊನ್ನಾವರ ಮತ್ತು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow Us:
Download App:
  • android
  • ios