ರೋಜ್‌ ಗಾರ್ಡನ್‌ನ ಮುನೇಶ್ವರ ಸ್ವಾಮಿ ದೇವಾಲಯ ಸಮೀಪ ನಡೆದ ಘಟನೆ| ರಾತ್ರಿ 10ರ ಸುಮಾರಿಗೆ  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾದ ಏಳೆಂಟು ಜನರ ತಂಡ| 

ಬೆಂಗಳೂರು(ಏ.22): ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹನ್ನೆರಡು ದಿನಗಳ ಹಿಂದಷ್ಟೆ ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್‌ವೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಅಶೋಕನಗರ ಠಾಣಾ ವ್ಯಾಪ್ತಿಯ ರೋಜ್‌ ಗಾರ್ಡನ್‌ ಸಮೀಪ ನಡೆದಿದೆ.

ಈಜಿಪುರದ ನಿವಾಸಿ ರವಿವರ್ಮ ಅಲಿಯಾಸ್‌ ಅಪ್ಪು (23) ಕೊಲೆಯಾದ ವ್ಯಕ್ತಿ. ರೋಜ್‌ ಗಾರ್ಡನ್‌ನ ಮುನೇಶ್ವರ ಸ್ವಾಮಿ ದೇವಾಲಯ ಸಮೀಪ ರವಿ ಮೇಲೆ ಮಂಗಳವಾರ ರಾತ್ರಿ 10ರ ಸುಮಾರಿಗೆ ಏಳೆಂಟು ಜನರ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ. 

ಡ್ರಗ್ಸ್ ಕೊಳ್ಳಲು 500 ರೂ. ದೋಚಿದವ ಭಯಾನಕವಾಗಿ ಕೊಲೆಯಾದ!

ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ರವಿ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.