Asianet Suvarna News Asianet Suvarna News

ಬೆಂಗಳೂರಲ್ಲಿ ಹಾಡಹಗಲೇ ಝಳಪಿಸಿದ ಲಾಂಗು-ಮಚ್ಚು: ರೌಡಿಶೀಟರ್ ಮೇಲೆ ಮಾರಣಾಂತಿಕ ದಾಳಿ

Bengaluru Rowdy sheeter Attack: ಸ್ಕೂಟರ್​ನಲ್ಲಿ ಹೋಗುತ್ತಿದ್ದ ಹಳೆ ರೌಡಿ ಶೀಟರ್ ಮೇಲೆ ಹಾಡಹಗಲೇ ಮುಸುಕುಧಾರಿಗಳಿಂದ ದಾಳಿ ನಡೆದಿದೆ  

Rowdy sheeter seriously injured in attack by miscreants in Bengaluru mnj
Author
First Published Sep 13, 2022, 5:22 PM IST

ವರದಿ : ಚೇತನ್ ಮಹಾದೇವ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಸೆ. 13): ಬೆಳ್ಳಂಬೆಳ್ಳಿಗ್ಗೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಲಾಂಗ್​-ಮಚ್ಚು ಝಳಪಿಸಿವೆ. ಸ್ಕೂಟರ್​ನಲ್ಲಿ ಹೋಗುತ್ತಿದ್ದ ಹಳೆ ರೌಡಿ ಶೀಟರ್ ಮೇಲೆ ಹಾಡಹಗಲೇ ಮುಸುಕುಧಾರಿಗಳಿಂದ ದಾಳಿ ನಡೆದಿದೆ. ಮಾಡಿದ ಪಾಪ ಬೆನ್ನು ಬಿಡೋದಿಲ್ಲ ಅನ್ನೋದಕ್ಕೆ ಇಂದು ನಗರದಲ್ಲಿ ನಡೆದ ಈ ಕೃತ್ಯ ಸಾಕ್ಷಿಯಾಗಿದೆ. ಬೆಳಗ್ಗೆ 8-30ರ ಸುಮಾರಿನಲ್ಲಿ ಜನರು ಬೆಚ್ಚಿ ಬೀಳುವ ಘಟನೆಯೊಂದು ನಡೆದು ಹೋಗಿದೆ. ಮಂತ್ರಿಮಾಲ್ ಬಳಿ ಇರುವ ನಟರಾಜ ಟಾಕೀಸ್ ಪಕ್ಕದ ರಸ್ತೆಯಲ್ಲಿ ಸ್ಕೂಟರ್​ನಲ್ಲಿ ಬರುತ್ತಿದ್ದ ಗಣೇಶ ಎಂಬಾತನನ್ನ ಹಾಡುಹಗಲೇ ದುಷ್ಕರ್ಮಿಗಳು ಕೊಚ್ಚಿ ಹಾಕಿದ್ದಾರೆ. 

ಆಟೋ ಹಾಗೂ ದ್ವಿಚಕ್ರವಾಹನದಲ್ಲಿ ಬಂದಿದ್ದ ಮುಸುಕುಧಾರಿಗಳು ಸ್ಕೂಟರ್​ ಮೇಲಿದ್ದ ಗಣೇಶನ ಮೇಲೆರಗಿದ್ದಾರೆ. ನಡುರಸ್ತೆಯಲ್ಲೇ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಗಣೇಶ್​ ಮೇಲೆ ಮನ ಬಂದಂತೆ ಬೀಸಿದ್ದಾರೆ. ಬೆಳಂ ಬೆಳಿಗ್ಗೆ ಈ ಭೀಕರ ದೃಶ್ಯವನ್ನು ಕಂಡ ಸ್ಥಳೀಯರು ಭಯಭೀತರಾಗಿದ್ರು. 

ಮಾರಣಾಂತಿಕ ದಾಳಿ ಮಾಡಿದ ನಂತ್ರ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗ್ತಾರೆ. ಬಳಿಕ ಸ್ಥಳೀಯರು  ಪೊಲೀಸರಿಗೆ ಕರೆ ಮಾಡಿ‌ ಮಾಹಿತಿ ನೀಡಿದ್ದರು. ಇನ್ನು, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ನಡು ರಸ್ತೆಯಲ್ಲಿ ನರಳುತ್ತಿದ್ದ ಗಣೇಶ್​ನನ್ನ ಪಕ್ಕದಲ್ಲಿಯೇ ಇದ್ದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Bengaluru Crime ತಡೆಯಲು ಕೇಂದ್ರದ ಪ್ಲಾನ್: ಪೊಲೀಸರ ಕೈಸೇರಿದೆ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌

ದಾಳಿಗೆ ಕಾರಣವಾಯ್ತಾ ಕುಟುಂಬಗಳ ನಡುವಿನ ವೈರತ್ವ..?: ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಣೇಶ ಅಲಿಯಾಸ್​ ಕುಂದಾಪ್ರಿ ವೃತ್ತಿಯಲ್ಲಿ ಸ್ಕ್ರ್ಯಾಪ್ ಬಿಸಿನೆಸ್ ಮಾಡ್ತಿದ್ದ. ಫ್ರೀಡಂ ಪಾರ್ಕ್​ ಬಳಿ ಗುಜುರಿ ಅಂಗಡಿ ಇಟ್ಟುಕೊಂಡಿದ್ದವನು ಈ ಹಿಂದೆ ಯೂತ್ ಕಾಂಗ್ರೆಸ್​ನಲ್ಲೂ ಸಕ್ರಿಯನಾಗಿದ್ದ. 

ಕಳೆದ ಕೋವಿಡ್ ಸಂದರ್ಭದಲ್ಲಿ ಅಣ್ಣ ತಮ್ಮಂದಿರ ನಡುವೆ ಕಿರಿಕ್ ಆಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೆರಿತ್ತು. ಹಾಗೆ 2020 ರ ಸಂಧರ್ಭದಲ್ಲಿ ಹಾಲು ಹಾಕುವ ವಿಚಾರದಲ್ಲಿ ಕಿನೋ ಥಿಯೇಟರ್ ಬಳಿ ಯುವಕನನ್ನ ಕೊಚ್ಚಿ ಹಾಕಿದ ಕೇಸಲ್ಲಿ ಈತನೂ ಇದ್ದ ಎನ್ನಲಾಗಿದೆ. ಇನ್ನು ಇದೇ ದ್ವೇಷಕ್ಕೆ ಗಣೇಶನಿಗೆ ಸ್ಕೆಚ್ ಹಾಕಿದ್ರಾ ಎಂಬ ಅನುಮಾನ ಕೂಡ ವ್ಯಕ್ತವಾಗ್ತಿದೆ. 

Bengaluru Crime News: 'ಏನೋ‌ ಮಗ, ನೀರು ಕೊಡೋ' ಅಂದಿದ್ದಕ್ಕೆ ಯುವಕನ ಕೊಲೆ!

ಸ್ಕ್ರ್ಯಾಪ್ ಗಣೇಶನ ಮುಖ ಸಂಪೂರ್ಣವಾಗಿ ಸ್ಕ್ರ್ಯಾಪ್ ಆಗಿದೆ‌.‌ ಈ ಹಿಂದೆ ನಡೆಸಿದ್ದ ಕೃತ್ಯಗಳ ದ್ವೇಷದಿಂದಾಗಿ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಗಾಯಗೊಂಡಿರುವ ಗಣೇಶ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಶೇಷಾದ್ರಿಪುರಂ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Follow Us:
Download App:
  • android
  • ios