Chikkaballapur Crime; ಕಾರಿನಲ್ಲಿದ್ದ ವೈದ್ಯ ಕುಟುಂಬವನ್ನು ಬೆದರಿಸಿ ನಗದು, ಚಿನ್ನಾಭರಣ ಲೂಟಿ!

  ರಾಜ್ಯದ ವಿವಿಧ ಧಾರ್ಮಿಕ ಸ್ಥಳಗಳ ವೀಕ್ಷಣೆಗೆ ಆಗಮಿಸಿ ವೈದ್ಯ ಕುಟುಂಬದ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಅವರಿಂದ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

Robbers robbed gold and cash by threatening doctor family in Chikkaballapur gow

ಚಿಕ್ಕಬಳ್ಳಾಪುರ (ಜು.29):  ರಾಜ್ಯದ ವಿವಿಧ ಧಾರ್ಮಿಕ ಸ್ಥಳಗಳ ವೀಕ್ಷಣೆಗೆ ಆಗಮಿಸಿ ಬಳಿಕ ಸ್ವಗ್ರಾಮಕ್ಕೆ ವಾಪಸ್‌ ತೆರಳುತ್ತಿದ್ದ ಆಂಧ್ರದ ಮದನಪಲ್ಲಿಯ ವೈದ್ಯ ಕುಟುಂಬದ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಅವರಿಂದ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿ ಆಗಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಜಿ.ವೆಂಕಟಾಪುರ ಗ್ರಾಮದ ಬಳಿ ನಡೆದಿದೆ. ಬುಧವಾರ ಆಂಧ್ರದ ಮದನಪಲ್ಲಿಯ ಆರ್‌ಆರ್‌ಎನ್‌ ಕಾಲೋನಿಯ ನಿವಾಸಿ ಡಾ.ವೆಂಕಟಸುಬ್ಬಾರೆಡ್ಡಿ ಹಾಗೂ ಆತನ ಪತ್ನಿ ಮಾಧವಿ ಹಾಗೂ ಪುತ್ರ ನಿಶ್ವಲ್‌ ವರುಣ್‌ರೆಡ್ಡಿ ಕಾರಿನಲ್ಲಿ ಮೈಸೂರಿನ ಚಾಮುಂಡೇಶ್ವರಿ ಹಾಗೂ ದತ್ತಪೀಠಕ್ಕೆ ಹೋಗಿ ವಾಪಸ್‌ ಮದನಪಲ್ಲಿಗೆ ಹಿಂತಿರುಗುತ್ತಿರುವಾಗ ವೆಂಕಟಾಪುರ ಬಳಿ ರಾತ್ರಿ ಸುಮಾರು 12.40 ಗಂಟೆ ಸಮಯವಾಗಿತ್ತು. ಈ ವೇಳೆ ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಹೋಗೋಣ ಅಂತ ಕಾರಿನಲ್ಲಿಯೆ ಮಲಗಿದ್ದಾರೆ. ಆಗ ದುಷ್ಕರ್ಮಿಗಳು ಕಾರಿನ ಗ್ಲಾಸ್‌ಗಳನ್ನು ಕಲ್ಲು ಮತ್ತು ದೊಣ್ಣೆಯಿಂದ ಒಡೆದು ಕಾರಿನಲ್ಲಿದ್ದವರಿಗೆ ಚಾಕು ತೋರಿಸಿ ಕೊಲೆ ಬೆದರಿಕೆಯೊಡ್ಡಿ ಅವರ ಬಳಿ ಇದ್ದ 18,000, ಅವರ ಪತ್ನಿ ಬಳಿ ಇದ್ದ 2000 ಹಾಗೂ ಪತ್ನಿ ಬಳಿ ಇದ್ದ 35 ಸಾವಿರ ರು, ಬೆಲೆ ಬಾಳುವ ಚಿನ್ನಾಭರಣ ಕಸಿದುಕೊಂಡು ಪರಾರಿ ಆಗಿದ್ದಾರೆ. ಈ ಬಗ್ಗೆ ಶಿಡ್ಲಘಟ್ಟಠಾಣೆ ಪೊಲೀಸರಿಗೆ ವೆಂಕಟಸುಬ್ಬಾರೆಡ್ಡಿ ದೂರು ನೀಡಿದ್ದಾರೆ.

ಕೈ ತೋರಿದ ಕಾರು ಚಾಲಕಗೆ ಕೀನಿಂದ ಚುಚ್ಚಿದ ಸವಾರ, ಓವರ್‌ ಟೇಕ್‌ ಮಾಡದಂತೆ ಸೂಚಿಸಿದ್ದಕ್ಕೆ ಹಲ್ಲೆ!
ಕೆ.ಆರ್‌.ಪುರ: ಕಾರು ಚಾಲಕ ಕೈ ತೋರಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ದ್ವಿಚಕ್ರ ವಾಹನ ಸವಾರನೊಬ್ಬ ಕಾರು ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೂಡಿ ಕೆರೆ ಬಳಿ ನಡೆದಿದೆ.

ಹೂಡಿ ಕೆರೆ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಕಾರನ್ನು ದ್ವಿಚಕ್ರ ವಾಹನ ಸವಾರ ಓವರ್‌ ಟೇಕ್‌ ಮಾಡಲು ಮುಂದಾಗಿದ್ದಾನೆ. ಮುಂಬದಿಯಿಂದ ಕ್ಯಾಂಟರ್‌ ಬರುತ್ತಿದೆ ಎಂದು ಕಾರಿನ ಚಾಲಕ ಕೈ ಸನ್ನೆ ಮಾಡಿದ ಎನ್ನಲಾಗಿದೆ. ‘ನನಗೆ ಕೈ ತೋರಿಸ್ತಿಯಾ’ ಎಂದು ಕಾರು ಅಡ್ಡಗಟ್ಟಿಸಿ ದ್ವಿಚಕ್ರ ವಾಹನ ಸವಾರ ಮಿಥುನ್‌ ವಾಹನದ ಕೀಯಿಂದ ಕಾರು ಚಾಲಕ ಆನಂದ್‌ ಮೇಲೆ ಗಲಾಟೆ ಮಾಡಿ ಮುಖ, ತಲೆಗೆ ನಾಲ್ಕು ಬಾರಿ ಚುಚ್ಚಿದ್ದಾನೆ. ಇವರ ಗಲಾಟೆಯಿಂದ ಕೆ.ಆರ್‌.ಪುರದ ಅಯ್ಯಪ್ಪ ನಗರ ಹೂಡಿ ಮುಖ್ಯ ರಸ್ತೆಯಲ್ಲಿ ಒಂದು ತಾಸು ಸಂಚಾರ ದಟ್ಟಣೆ ಆಗಿತ್ತು. ಹಲ್ಲೆ ಮಾಡಿದ ಮಿಥುನ್‌ ಗರುಡಾಚಾರ್ಯ ಪಾಳ್ಯದ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದಾನೆ.

Bengaluru Crime; ಹಿಟ್‌ ಆ್ಯಂಡ್‌ ರನ್‌ ಅಪಘಾತ, ಕಾರ್ಮಿಕ ದಂಪತಿ ಬಲಿ!

ರಸ್ತೆ ಬಳಕೆಗೆ ಆಕ್ಷೇಪಣೆ: ಮಾರಣಾಂತಿಕ ಹಲ್ಲೆ
ಹುಬ್ಬಳ್ಳಿ (ಜು.29): ಜಮೀನಿಗೆ ಹೋಗುವ ಸಾಮೂಹಿಕ ರಸ್ತೆ ಬಳಕೆಗೆ ಆಕ್ಷೇಪಣೆ ವ್ಯಕ್ತಪಡಿಸಿ ಸಹೋದರ ಸಂಬಂಧಿಗಳೇ ಜಗಳವಾಡಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ಚೂರಿಯಿಂದ ಇರಿದು ಮಾರಣಾಂತಿಕವಾಗಿ ಗಾಯಗೊಳಿಸಿದ ಘಟನೆ ತಾಲೂಕಿನ ತಡಸ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.

VIJAYANAGARA CRIME; ಕುತ್ತಿಗೆಗೆ ಹಗ್ಗ ಬಿಗಿದು ಯುವಕನ ಹತ್ಯೆ ಶಂಕೆ, ಘಟನಾ ಸ್ಥಳಕ್ಕೆ ಶ್ವಾನದಳ ಭೇಟಿ

ಕಡಳ್ಳಿ ಗ್ರಾಮದ ರಹವಾಸಿ ಫಕ್ಕೀರಪ್ಪ ಈರಪ್ಪ ಹಿಂದಿನಮನಿ ತೀವ್ರವಾಗಿ ಗೊಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳಾದ ಹನುಮಂತಪ್ಪ ಫಕ್ಕೀರಪ್ಪ ಮುಂದಿನಮನಿ ಹಾಗೂ ಅವರ ಇಬ್ಬರು ಪುತ್ರರಾದ ಬಸವರಾಜ ಮತ್ತು ಈಶ್ವರಪ್ಪ ಎಂಬುವವರು ಜಮೀನು ಭಾಗಕ್ಕೆ ಓಡಾಡಲು ರಸ್ತೆ ಕುರಿತು ತಕರಾರು ವ್ಯಕ್ತಪಡಿಸುತ್ತಿದ್ದರು. ಈ ಹಿಂದೆಯೂ ಹಲ್ಲೆಗೆ ಯತ್ನ ನಡೆಸಿದ್ದರು. ಈಚೆಗೆ ಗಲಾಟೆ ವಿಕೋಪಕ್ಕೆ ತಿರುಗಿ ಕಲ್ಲು ಚಾಕೂ ಬಳಸಿ ಫಕ್ಕೀರಪ್ಪ ಈರಪ್ಪ ಹಿಂದಿನಮನಿ ಎಂಬುವವರನ್ನು ಗಾಯಗೊಳಿಸಿದ್ದು, ಮೂವರ ವಿರುದ್ಧ ಶಿವಪ್ಪ ಹಿಂದಿನಮನಿ ತಡಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಕುರಿತು ತನಿಖೆ ಮುಂದುವರೆದಿದೆ.

Latest Videos
Follow Us:
Download App:
  • android
  • ios