Asianet Suvarna News Asianet Suvarna News

ಬೆಂಗಳೂರು: ಹಾಡುಹಗಲೇ‌ ಸಿಗರೇಟ್ ಡಿಸ್ಟ್ರಿಬ್ಯೂಟರ್ ಮೇಲೆ ಮಚ್ಚು ಬೀಸಿ ₹15 ಲಕ್ಷ ದರೋಡೆ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಗನ್, ಲಾಂಗ್, ಪೆಪ್ಪರ್ ಸ್ಪ್ರೇ ದಾಳಿ ನಡೆಸಿ ವ್ಯಾಪಾರಿಯೊಬ್ಬನಿಂದ 15 ಲಕ್ಷರೂ. ದರೋಡೆ ಮಾಡಿ ಪರಾರಿಯಾದ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Robbers attacked a cigarette distributor and robbed 15 lakhs in daylights at bengaluru rav
Author
First Published Feb 2, 2024, 10:32 AM IST

ಬೆಂಗಳೂರು (ಫೆ.2) :ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಗನ್, ಲಾಂಗ್, ಪೆಪ್ಪರ್ ಸ್ಪ್ರೇ ದಾಳಿ ನಡೆಸಿ ವ್ಯಾಪಾರಿಯೊಬ್ಬನಿಂದ 15 ಲಕ್ಷರೂ. ದರೋಡೆ ಮಾಡಿ ಪರಾರಿಯಾದ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಿಗರೇಟ್ ಡಿಸ್ಟ್ರಿಬ್ಯೂಟರ್ ಗೋಪಾಲ್ ಹಣ ಕಳೆದುಕೊಂಡ ವ್ಯಕ್ತಿ. ಸಿಗರೇಟ್ ಡಿಸ್ಟ್ರಿಬ್ಯೂಟರ್ ಆಗಿರುವ ಗೋಪಾಲ್ ಟಾಟಾ ಏಸ್ ವಾಹನದಲ್ಲಿ ಅಂಗಡಿಗಳಿಂದ ಸಿಗರೇಟ್ ಬಿಲ್ ಕಲೆಕ್ಟ್ ಮಾಡಿದ್ದ ವೇಳೆ ಹಿಂಬಾಲಿಸಿರುವ ಖದೀಮರು. ಕೆಂಗೇರಿಯಿಂದ ಅಂಗಡಿಗಳಲ್ಲಿ ಸಿಗರೇಟ್ ಬಿಲ್ ಕಲೆಕ್ಟ್ ಮಾಡಿಕೊಂಡು ಬರ್ತಾ ಇದ್ರು. ಈ ವೇಳೆ ಡಿಯೋ ಬೈಕ್‌ನಲ್ಲಿ  ಹಿಂಬಾಲಿಸಿಕೊಂಡು ಬಂದಿದ್ದಕ ಮೂವರು ರಾಬರ್ಸ್. ನಾಗರಭಾವಿ ಪಾಪರೆಡ್ಡಿ ಪಾಳ್ಯಕ್ಕೆ ಬಂದಿದ್ದ ಗೋಪಾಲ್. ಈ ವೇಳೆ ನಾತೂರಾಮ್ ಎಂಬುವವರ ಅಂಗಡಿ ಬಳಿ ವಾಹನ ನಿಲ್ಲಿಸಿ ಬಿಲ್ ಕಲೆಕ್ಟ್ ಮಾಡಲು ಇಳಿದಿದ್ದ ವೇಳೆ ಅಟ್ಯಾಕ್ ಮಾಡಿರುವ ಖದೀಮರು.

ಚಿತ್ರದುರ್ಗದಲ್ಲಿ ₹1.50 ಕೋಟಿ ರಾಬರಿ ಕೇಸ್; 10 ಆರೋಪಿಗಳನ್ನು ಬಂಧಿಸಿದ ಪೊಲೀಸರು!

ಅಂಗಡಿಯೊಳಗೆ ನುಗ್ಗಿ ದಾಳಿ:

ರಾಬರ್ಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಾವಿಜನ್ ಸ್ಟೋರ್ ಒಳಗೆ ಹೋಗಿರುವ ಗೋಪಾಲ್. ಆದರೆ ಖದೀಮರು ಪ್ರಾವಿಜನ್ ಸ್ಟೋರ್ ಒಳಗೆ ನುಗ್ಗಿ ಅಟ್ಟಾಡಿಸಿಕೊಂಡು ದಾಳಿ ನಡೆಸಿದ್ದಾರೆ. ಮೂವರ ಪೈಕಿ ಇಬ್ಬರು ಪೆಪ್ಪರ್ ಸ್ಪ್ರೇ ಹಾಕಿ ಗನ್ ತೋರಿಸಿ ಲಾಂಗ್ ಬೀಸಿದ್ದಾರೆ. ಲಾಂಗ್ ಬೀಸಿದ ರಭಸಕ್ಕೆ ಹಣವಿದ್ದ ಬ್ಯಾಗ್ ಕತ್ತರಿಸಿದೆ. ಕೂಡಲೇ ಹಣವಿದ್ದ ಬ್ಯಾಗ್ ಎತ್ತಿಕೊಂಡು ಹೋಗಿರೋ ಆರೋಪಿಗಳು. ಘಟನೆ ಬಳಿಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಗೋಪಾಲ್. ಸದ್ಯ ಪ್ರಕರಣ ದಾಖಲಿಸಿಕೊಂಡು ರಾಬರ್ಸ್ ಚಲನವಲನ ಪತ್ತೆ ಹಚ್ಚುತ್ತಿರುವ ಪೊಲೀಸರು.

ಮಗಳನ್ನ ಮದುವೆ ಮಾಡಿಕೊಡುವುದಾಗಿ ನಂಬಿಸಿ ಯುವಕನಿಗೆ ಬರೋಬ್ಬರಿ 25 ಲಕ್ಷ ರೂ. ಉಂಡೇನಾಮ ಹಾಕಿದ ಕುಟುಂಬ!

Follow Us:
Download App:
  • android
  • ios