Kidnap: ಕದಿಯಲು ಬಂದ ಆಸಾಮಿ ಎಸ್ಕೇಪ್ ಆಗಲು ಮಗು ಎತ್ತಿಕೊಂಡು ಪರಾರಿ!
* ಜೈಲಿಗೆ ಹೋಗಿ ಬಂದಿದ್ದರೂ ಹಳೆ ಚಾಳಿ ಬಿಟ್ಟಿರಲಿಲ್ಲ
* ಕಳ್ಳತನ ಮಾಡಲು ಬಂದು ಎಸ್ಕೇಪ್ ಆಗಲು ಮಗು ಎತ್ತಿಕೊಂಡು ಪರಾರಿಯಾಗಿದ್ದ
* ಬಾಲಕಿ ರಕ್ಷಣೆ ಮಾಡಿ ಕರೆತಂದ ಪೊಲೀಸರು
* ಆರೋಪಿ ಮತ್ತ ತನ್ನ ಸ್ವಸ್ಥಾನ ಜೈಲಿಗೆ
ವರದಿ: ಮುಷ್ತಾಕ್ ಪೀರಜಾದೇ. ಏಷ್ಯಾನೆಟ್ ಸುವರ್ಣನ್ಯೂಸ್,
ಚಿಕ್ಕೋಡಿ(ಏ. 05) ಆತ ಹೇಳಿ ಕೇಳಿ ಖತರ್ ನಾಕ್ ಕಳ್ಳ (Robber) ಲವು ಬಾರಿ ಕಳ್ಳತನ ಮಾಡಿ ಪೊಲೀಸರ (Belagavi Police) ಅತಿಥಿಯಾಗಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ. ಜೈಲು ಶಿಕ್ಷೆ ಬಳಿಕ ತಾನಾಯ್ತ ತನ್ನ ಕೆಲಸ ಆಯ್ತು ಅಂತ ಸುಮ್ಮನಿರ್ತಿದ್ರೆ ಇವತ್ತು ಮತ್ತೆ ಆತ ಪೊಲೀಸರ ಅತಿಥಿ ಆಗುತ್ತಿರಲ್ಲಿ ಸದ್ಯ ಕಳ್ಳತನ ಮಾಡಲು ಹೋಗಿ ಪುಟ್ಟ ಬಾಲಕಿಯನ್ನೆ ಅಪಹರಣ (Kidnap) ಮಾಡಿ ಈ ಮತ್ತೆ ಈಗ ಖದೀಮ ಕಳ್ಳ ಪೊಲೀಸರ ಅತಿಥಿಯಾಗಿದ್ದಾನೆ.
ಕದಿಯಲು ಬಂದು 11 ವರ್ಷದ ಬಾಲಕಿಯನ್ನೆ ಅಪಹರಣ ಮಾಡಿರುವ ಪ್ರಕರಣ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ(Chikkodi) ತಾಲೂಕಿನ ಮಾಂಜರಿವಾಡಿ ಗ್ರಾಮದಲ್ಲಿ ನಡೆದಿದೆ. ಇದೆ ತಾಲೂಕಿನ ಮಾಂಜರಿ ಗ್ರಾಮದ ಅನೀಲ್ ಲಂಬುಗೋಳ ಎಂಬಾತ ಕಳೆದ ತಡ ರಾತ್ರಿ 1 ಗಂಟೆ ಸುಮಾರು ಕಳ್ಳತನಕ್ಕೆ ಅಂತ ಸುರೇಶ್ ಕಾಂಬಳೆ ಎಂಬುವವರ ಮನೆಗೆ ನುಗ್ಗಿದ್ದ ರಾತ್ರಿ ಮನೆ ಬಾಗಿಲು ಮುರಿದು ಮನೆಯೊಳಕ್ಕೆ ನುಗ್ಗಿದ್ದ ಅನೀಲ್ ಟ್ರೇಸರಿ ಬಾಗಿಲು ಮುರಿಯುವ ಸಂದರ್ಭದಲ್ಲಿ ಮನೆಯವರು ಎಚ್ಚೆತ್ತುಕೊಂಡಿದ್ದಾರೆ. ಎಚ್ಚೆತ್ತು ಜೋರಾಗಿ ಕಿರಿಚಾಡುತ್ತಲೆ ಮನೆಯಿಂದ ಆಚೆ ಬಂದು ಕಳ್ಳ ಕಳ್ಳ ಎಂದು ಕಿರುಚಿದ ಪರಿಣಾಮ ಓಣಿಯ ಜನ ಸೇರ ತೋಡಗಿದ್ದಾರೆ.
ಇತ್ತ ಕಳ್ಳತನಕ್ಕೆ ಬಂದಿದ್ದ ಅನೀಲ್ ಲಂಬುಗೋಳ ಕೂಡಲೆ ಜೋರಾಗಿ ಕಿರುಚುತ್ತಿದ್ದ ಮಹಿಳೆಗೆ 'ಸುಮ್ಮನಿರು ಇಲ್ಲದಿದ್ದರೆ ನಿನ್ನ ಮಗಳನ್ನ ಸುಮ್ಮನೆ ಬಿಡಲ್ಲ' ಎಂದು ಧಮ್ಕಿ ಹಾಕಿದ್ದ. ಆದರೆ ಆಷ್ಟೊತ್ತಿಗಾಲೆ ಒಂದೆರಡು ಅಕ್ಕಪಕ್ಕದ ಮನೆಯವರು ಸುರೇಶ್ ಕಾಂಬಳೆ ಅವರ ಮನೆಯ ಹತ್ತಿರ ಬರುತ್ತಿರುವುದನ್ನ ಗಮನಿಸಿದ ಕಳ್ಳ ಅನೀಲ್ ಮನೆಯಲ್ಲಿ ಮನೆಯಲ್ಲಿ ಮಲಗಿದ್ದ 11 ವರ್ಷದ ಬಾಲಕಿಯನ್ನ ತನ್ನೊಡನೆ ಎತ್ತಿಕೊಂಡು ಪರಾರಿಯಾಗಿದ್ದ ಕೂಡಲೆ ಜನ ಇಡಿ ಗ್ರಾಮವನ್ನ ಹುಡುಕಿದರು ರಾತ್ರಿ ಅನಿಲ್ ಪತ್ತೆಯಾಗಿರಲಿಲ್ಲ. ರಾತ್ರಿಯೆ ಅಂಕಲಿ ಪೊಲೀಸ್ ಠಾಣೆಗೆ ತೆರಳಿದ್ದ ಸುರೇಶ್ ಕುಟುಂಬ ಅನೀಲ್ ವಿರುದ್ದ ದೂರು ದಾಖಲಿಸಿದ್ದರು.
ಇನ್ನು ದೂರು ದಾಖಲಿಸಿಕೊಂಡು ರಾತ್ರಿಯೆ ಕಾರ್ಯಾಚರಣೆ ಇಳಿದಿದ್ದ ಅಂಕಲಿ ಪೊಲೀಸರು ಎರಡು ತಂಡಗಳನ್ನ ರಚಿಸಿಕೊಂಡು ಕಳ್ಳ ಅನಿಲ್ ಗಾಗಿ ಹುಡುಕಾಟ ನಡೆಸಿದ್ದಾರೆ.. ಪ್ರಕರಣ ನಡೆದ ಎಂಟು ತಾಸಿನಲ್ಲಿಯೆ ಆರೋಪಿಯ ಹೆಡೆ ಮುರಿ ಕಟ್ಟಿದ್ದಾರೆ.
ಮೆಸೇಜ್ ಮಾಡಿ ಕಿರಿಕಿರಿ ಕೊಡ್ತಿದ್ದ ಮಾಜಿ ಲವರ್ ಹತ್ಯೆಗೆ ಯತ್ನ
ಇನ್ನು ರಾತ್ರಿ ಅಪಹರಣ ಮಾಡಿದ್ದ ಬಾಲಕಿಯೊಡನೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮಕ್ಕೆ ತಮ್ಮ ಪರಿಚಯಸ್ತರ ಮನೆಯಲ್ಲಿ ಅವಿತು ಕುಳಿತಿದ್ದ. ನಂತರ ಕಾರದಗಾ ಗ್ರಾಮಕ್ಕೆ ತೆರಳಿದ್ದ. ಪೊಲೀಸರ 11 ವರ್ಷದ ಬಾಲಕಿಯ ರಕ್ಷಣೆ ಮಾಡಿ ಹಾಗೂ ಕಳ್ಳ ಅನಿಲ್ ಲಂಬುಗೋಳನ್ನು ಬಂಧಿಸಿದ್ದು ಬಾಲಕಿಯನ್ನು ಚೆಕ್ ಅಪ್ ಗೆ ಕಳುಹಿಸಲಾಗಿದೆ.
ಜೈಲಿನಿಂದಲೆ ಪರಾರಿಯಾಗಿದ್ದ ಭೂಪ : ಇನ್ನು ಆರೋಪಿ ಅನೀಲ್ ಲಂಬುಗೋಳ ಅತಿಂತಾ ಕಳ್ಳ ಅಲ್ಲ. ಈತ ಖತರನಾಕ ಅಂತರರಾಜ್ಯ ಕಳ್ಳನಾಗಿದ್ದಾನೆ. ಈ ಹಿಂದೆಯೂ ಹಲವು ಕಳ್ಳತನ ಪ್ರಕರಣಗಳಲ್ಲಿ ಪೊಲೀಸರ ಅತಿಥಿಯಾಗಿ ಜೈಲುವಾಸವನ್ನು ಅನುಭವಿದ್ದಾನೆ. ಜೈಲಿನಲ್ಲಿ ಈರಬೇಕಾದ್ರೆ ಎರಡು ಬಾರಿ ಜೈಲಿನಿಂದಲೆ ಪರಾರಿಯಾಗಿ ಮತ್ತೆ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದ. ಒಂದು ಚಿಕ್ಕೋಡಿಯ ಸಬ್ ಜೈಲಿನಿಂದ ಪರಾರಿಯಾಗಿದ್ರೆ ಮತ್ತೊಮ್ಮೆ ಹುಕ್ಕೇರಿಯ ಸಬ್ ಜೈಲಿನಿಂದ ಪರಾರಿಯಾಗಿದ್ದ. ಇನ್ನು ಇತ್ತಿಚ್ಚಿಗಷ್ಟೆ ಜೈಲಿನಿಂದ ಬಿಡಗಡೆಯಾಗಿ ಬಂದಿದ್ದ ಅನಿಲ್ ಮತ್ತೆ ತನ್ನ ಹಳೆ ಚಾಳಿಯನ್ನೆ ಮುಂದುವರಿಸಿದ್ದ. ಸದ್ಯ ಅಂಕಲಿ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು ಅರೋಪಿ ಅನಿಲ್ ಬಂಧಿಸಿ ತನಿಖೆಯನ್ನ ಕೈಕೊಂಡಿದ್ದಾರೆ.