ಜಮೀನು ದಾರಿ ವಿವಾದ: ಪರಿಶೀಲನೆ ತೆರಳಿದ್ದ ಕಂದಾಯ ನಿರೀಕ್ಷಕನ ಮೇಲೆ ಹಲ್ಲೆ!

ಜಮೀನು ದಾರಿ ವಿವಾದ ಹಿನ್ನೆಲೆ ಪರಿಶೀಲನೆಗೆ ತೆರಳಿದ್ದ ಕಂದಾಯ ನಿರೀಕ್ಷಕರ ಮೇಲೆಯೇ ರೈತನೋರ್ವ ಹಲ್ಲೆ ನಡೆಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.

Revenue Inspector assaulted by farmers infront of chitradurga tahsildar at mallapur village rav

ಚಿತ್ರದುರ್ಗ (ಜು.30): ಜಮೀನು ದಾರಿ ವಿವಾದ ಹಿನ್ನೆಲೆ ಪರಿಶೀಲನೆಗೆ ತೆರಳಿದ್ದ ಕಂದಾಯ ನಿರೀಕ್ಷಕರ ಮೇಲೆಯೇ ರೈತನೋರ್ವ ಹಲ್ಲೆ ನಡೆಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಕಂದಾಯ ನಿರೀಕ್ಷಕ ಪ್ರಾಣೇಶ್, ಹಲ್ಲೆಗೊಳಗಾದ ಅಧಿಕಾರಿ. ಶಿವಶಂಕರರೆಡ್ಡಿ, ವಿದ್ಯಾಶಂಕರರೆಡ್ಡಿ ಹಲ್ಲೆ ನಡೆಸಿದ ಆರೋಪಿಗಳು. ಆರೋಪಿಗಳನ್ನ ಬಂಧಿಸಿದ ಪೊಲೀಸರು.

ಘಟನೆ ಹಿನ್ನೆಲೆ:

ಜಮೀನಿನ ರಸ್ತೆಗೆ ಅಡ್ಡಲಾಗಿ ಕಟ್ಟಡ ಕಟ್ಟಿಕೊಂಡಿರುವ ಆರೋಪಿ ಶಿವಶಂಕರ್ ರೆಡ್ಡಿ, ವಿದ್ಯಾಶಂಕರ್ ರೆಡ್ಡಿ. ಜಮೀನಿಗೆ ದಾರಿಬಿಟ್ಟುಕೊಡುವಂತೆ ಕೇಳಿದ್ದ ರೈತ ಹೇಮಣ್ಣ. ಈ ವೇಳೆ ಹೇಮಣ್ಣನೊಂದಿಗೆ ಗಲಾಟೆ ಮಾಡಿದ್ದ ಆರೋಪಿಗಳು. ಜಮೀನಿಗೆ ಹೋಗಲು ದಿನನಿತ್ಯ ತೊಂದರೆಯಾಗುತ್ತಿದ್ದ ಹಿನ್ನೆಲೆ ದೂರು ನೀಡಿದ್ದ ಹೇಮಣ್ಣ. ದೂರು ಆಧರಿಸಿ ಚಿತ್ರದುರ್ಗ ತಹಸೀಲ್ದಾರ್ ನಾಗವೇಣಿ, ಮಲ್ಲಾಪುರ ಗ್ರಾಮದ ಕಂದಾಯ ನಿರೀಕ್ಷಕ ಪ್ರಾಣೇಶ ಗ್ರಾಮಕ್ಕೆ ಆಗಮಿಸಿ ಜಮೀನು ಪರಿಶೀಲನೆಗೆ ತೆರಳಿದ್ದರು.

ಕೊಡಲಿಯಿಂದ ತಾಯಿ ಮೇಲೆಯೇ ಮಗನಿಂದ ಹಲ್ಲೆ! ಮಾನಸಿಕ ಅಸ್ವಸ್ಥನ ಹಿಡಿಯಲು ಪೊಲೀಸರು ಹರಸಾಹಸ!

ಪರಿಶೀಲನೆ ನಡೆಸಿ ಬಳಿಕ ರೈತರಿಗೆ ಜಮೀನು ಬಿಟ್ಟುಕೊಡುವಂತೆ ಸೂಚಿಸಿದ್ದಕ್ಕೆ ಕಂದಾಯ ನಿರೀಕ್ಷಕ ಪ್ರಾಣೇಶ್ ಮೇಲೆಯೇ ಹಲ್ಲೆ ನಡೆಸಿದ ಆರೋಪಿಗಳು. ತಹಸೀಲ್ದಾರ್ ನಾಗವೇಣಿ ಮುಂದೆಯೇ ಹಲ್ಲೆ ನಡೆಸಲಾಗಿದೆ.  ಸದ್ಯ ಪ್ರಕರಣ ಸಂಬಂಧ ಆರೋಪಿಗಳನ್ನ ಬಂಧಿಸಿರುವ ಪೊಲೀಸರು. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios