Asianet Suvarna News Asianet Suvarna News

ರೇಣುಕಾಸ್ವಾಮಿ ಕೊಲೆ ಆರೋಪಿಗಳು 13ರಲ್ಲ 17 ಮಂದಿ, ನಾಪತ್ತೆಯಾದವರಿಗೆ ಶೋಧ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 13 ಅಲ್ಲ 17 ಮಂದಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ನಾಲ್ವರು ತಲೆ ಮರೆಸಿಕೊಂಡಿದ್ದು ಹುಡುಕಾಟ ತೀವ್ರ ಗೊಂಡಿದೆ.

Renuka swamy murder case total seventeen accused include actor darshan and pavithra gowda gow
Author
First Published Jun 12, 2024, 6:51 PM IST

ಬೆಂಗಳೂರು (ಜೂ.11): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣ ಆರೋಪದ ಹಿನ್ನೆಲೆ ನಟ ದರ್ಶನ್ (Actor Darshan), ಆತನ ಎರಡನೇ ಪತ್ನಿ ಪವಿತ್ರಾ ಗೌಡ  (Darshan Second Wife Pavithra Gowda) ಸೇರಿ ಒಟ್ಟು 13 ಮಂದಿಯನ್ನುಈವರೆಗೆ ಬಂಧಿಸಲಾಗಿದ್ದು, 6 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.  ಆದರೆ ಈಗ  ಈ ಕೊಲೆ ಪ್ರಕರಣದಲ್ಲಿ 13 ಅಲ್ಲ 17 ಮಂದಿ ಆರೋಪಿಗಳಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಪ್ರಕರಣದಲ್ಲಿ 4 ಮಂದಿ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ತೀವ್ರ ಶೋಧ ನಡೆಯುತ್ತಿದೆ.

ಕೊಲೆ ಆರೋಪಿಗಳಾದ ದರ್ಶನ್, ಎರಡನೇ ಪತ್ನಿ ಪವಿತ್ರಾ ವಯಸ್ಸಿನ ಅಂತರದ ಬಗ್ಗೆ ಇನ್ನಿಲ್ಲದ ಹುಡುಕಾಟ!

ಈ ಭೀಭತ್ಸವಾದ ಕೊಲೆ ಪ್ರಕರಣದಲ್ಲಿ  33 ವರ್ಷದ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದರೆ, 47 ವರ್ಷದ ನಟ ದರ್ಶನ್ ಎರಡನೇ ಆರೋಪಿಯಾಗಿದ್ದರೆ. ಇದರಲ್ಲಿ ಎ6 ಆರೋಪಿಯಿಂದ ಹಿಡಿದು ಎ9 ರವರೆಗಿನ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅಂದರೆ ಕ್ರಮವಾಗಿ ಜಗದೀಶ್​ ಅಲಿಯಾಸ್ ಜಗ್ಗ, ಅನು, ರವಿ ಹಾಗು ರಾಜು ತಲೆ ಮರೆಸಿಕೊಂಡಿದ್ದಾರೆ.

ಕೊಲೆಯಾದ ರೇಣುಕಾಸ್ವಾಮಿಗೆ ಖೆಡ್ಡಾ ತೋಡಲು ಪವಿತ್ರಾ ಮತ್ತು ದರ್ಶನ್ ಗ್ಯಾಂಗ್ ನಿಂದ ಖತರ್ನಾಕ್ ಪ್ಲಾನ್!

ಆರೋಪಿಗಳ ಪಟ್ಟಿ ಇಂತಿದೆ.
A1.ಪವಿತ್ರಾಗೌಡ, A2.ದರ್ಶನ್, A3.ಪವನ್ ಅಲಿಯಾಸ್ ಪುಟ್ಟಸ್ವಾಮಿ ,A4.ರಾಘವೇಂದ್ರ ,A5.ನಂದೀಶ್,A6.ಜಗದೀಶ್  ಅಲಿಯಾಸ್ ಜಗ್ಗ(ಸಿಕ್ಕಿಲ್ಲ), A7.ಅನು (ಸಿಕ್ಕಿಲ್ಲ), A8.ರವಿ (ಸಿಕ್ಕಿಲ್ಲ), A9.ರಾಜು (ಸಿಕ್ಕಿಲ್ಲ), A10.ವಿನಯ್, A11.ನಾಗರಾಜು, A12.ಲಕ್ಷ್ಮಣ್, A13.ದೀಪಕ್, A14.ಪ್ರದೋಶ್, A15.ಕಾರ್ತಿಕ್, A16.ಕೇಶವ ಮೂರ್ತಿ, A17.ನಿಖಿಲ್ ನಾಯಕ್.

ಇಂದು ಕೊಲೆ ಮಾಡಿರುವ ಜಾಗ ಪಟ್ಟಣಗೆರೆಯ ನಿರ್ಜನ ಪ್ರದೇಶದ ಶೆಡ್‌ ಗೆ ಈವರೆಗೆ ಬಂಧಿತರಾಗಿರುವ 13 ಆರೋಪಿಗಳು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಯ್ತು. ಬಿಗಿ ಪೊಲೀಸ್‌ ಭದ್ರತೆಯಲ್ಲಿ ಆರೋಪಿಗಳನ್ನು ಕರೆದೊಯ್ದು ಇಂಚಿಚು ಮಾಹಿತಿ ಕಲೆ ಹಾಕಲಾಯ್ತು.

Latest Videos
Follow Us:
Download App:
  • android
  • ios