ಪತ್ನಿ, ಮಗನ ಮಾತುಗಳಿಂದ ದರ್ಶನ್ ನಿರಾಳ, ಜೈಲಿನಲ್ಲಿ ಬೇಗ ನಿದ್ರೆಗೆ ಜಾರಿದ್ದ ನಟ!

ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ನಿನ್ನೆ ಜೈಲಿಗೆ ತೆರಳಿ ದರ್ಶನ್ ಭೇಟಿ ಮಾಡಿ ಧೈರ್ಯ ತುಂಬಿದ್ದರು. ಪತ್ನಿ , ಪುತ್ರನ ಆಗಮನದ ವೇಳೆ ಕಣ್ಣೀರು ಹಾಕಿದ್ದ ನಟ ಕೊಂಚ ನಿರಾಳರಾಗಿದ್ದಾರೆ. 
 

Renuka Swamy Murder case After meeting his wife and son Actor Darshan relaxed in Jail ckm

ಬೆಂಗಳೂರು(ಜೂ.25) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ಇದೀಗ ಜೈಲು ವಾಸದಲ್ಲಿದೆ. ಪೊಲೀಸ್ ಕಸ್ಟಡಿಯಿಂದ ನಟ ದರ್ಶನ್ ತೀವ್ರ ಪಶ್ಚಾತ್ತಾಪದಲ್ಲಿದ್ದಾರೆ. ಸಂಕಷ್ಟಗಳ ಸರಮಾಲೆಯಲ್ಲಿರುವ ದರ್ಶನ್‌ನ್ನು ಜೈಲಿನಲ್ಲಿ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಧೈರ್ಯದ ಮಾತುಗನ್ನಾಡಿದ್ದರು. ಪತ್ನಿ ಹಾಗೂ ಪುತ್ರನ ಆಗಮನದಿಂದ ಕಣ್ಣೀರಾಗಿದ್ದ ದರ್ಶನ್ ಬಳಿಕ ಕೊಂಚ ನಿರಾಳರಾಗಿದ್ದರು. ಪತ್ನಿ ಹಾಗು ಪುತ್ರನ ನೋಡಿ ಕಣ್ಣೀರು ಹಾಕಿದ ಬಳಿಕ ದರ್ಶನ್ ಮನಸ್ಸು ಕೊಂಚ ಹಗುರವಾಗಿದೆ. ಹೀಗಾಗಿ ಬೇಗನೆ ನಿದ್ದೆಗೆ ಜಾರಿದ್ದಾರೆ ಎಂದು ಜೈಲಾಧಿಕಾರಿ ಮೂಲಗಳು ಹೇಳಿವೆ.

ಜೈಲಿನಲ್ಲಿ ಚಡಪಡಿಸುತ್ತಿದ್ದ ನಟ ದರ್ಶನ್ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಜೊತೆಗೆ ನಿದ್ದೆಯೂ ಮಾಡುತ್ತಿರಲಿಲ್ಲ. ಏಕಾಂಗಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದರು. ಆದರೆ ವಿಜಯಲಕ್ಷ್ಮಿ ಆಗಮನದ ಬಳಿಕ ದರ್ಶನ್ ನಿರಾಳರಾಗಿದ್ದರು. ಕಳೆದ ಹೈದಿನೈದು ದಿನಗಳಿಂದ ನೋವು, ಹತಾಶೆ ಬೇಸರದಿಂದ ಕಳೆದಿದ್ದ ದರ್ಶನ್‌ಗೆ ಪತ್ನಿ ಹಾಗೂ ಮಗನ ಸಾಂತ್ವನ ಸಿಕ್ಕಿತ್ತು.

ಪತ್ನಿ ವಿಜಯಲಕ್ಷ್ಮಿ, ಮಗನ ಕಂಡು ಜೈಲಿನಲ್ಲಿ ದರ್ಶನ್‌ ಕಣ್ಣೀರು!

ಪತ್ನಿ ಹಾಗೂ ಮಗನ ಭೇಟಿ ಬಳಿಕ ದರ್ಶನ್ ರಾತ್ರಿ ಜೈಲೂಟ ಸೇವಿಸಿ 10 ಗಂಟೆಗೆ ನಿದ್ರೆಗೆ ಜಾರಿದ್ದಾರೆ. ರಾತ್ರಿ ದರ್ಶನ್ ಮುದ್ದೆ, ಚಪಾತಿ, ಅನ್ನ ಸಾಂಬಾರ್ ಮಜ್ಜಿಗೆ ಸೇವಿಸಿ ನಿದ್ರೆಗೆ ಜಾರಿದ್ದರು. ಇಂದು ಬೆಳಗ್ಗೆ ಕಾಫಿ ಬದಲು ಬಿಸಿ ನೀರು ಸೇವಿಸಿದ ದರ್ಶನ್ ಜೈಲಿನಲ್ಲಿ ಒಬ್ಬಂಟಿಯಾಗಿ ಕುಳಿತಿದ್ದಾರೆ. 

ರೇಣಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರು ನಟ ದರ್ಶನ್ ಹಾಗೂ ಆತನ ಗ್ಯಾಂಗ್ ವಿರುದ್ಧ ಹಲವು ಪ್ರಬಲ ಸಾಕ್ಷ್ಯಗಳು ಲಭ್ಯವಾಗಿದೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಬೆಂಗಳೂರಿಗೆ ತರಲಾಗಿತ್ತು. ಬಳಿಕ ಪಟ್ಟಣಗೆರೆಯ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಲಾಗಿತ್ತು. ದರ್ಶನ್ ಎರಡನೇ ಪತ್ನಿ ಎಂದೇ ಗುರುತಿಸಿಕೊಂಡಿರುವ ಪವಿತ್ರಾ ಗೌಡಗೆ ಅಶ್ಲೀಶ ಮೇಸೆಜ್ ಕಳುಹಿಸಿದ್ದಾನೆ ಅನ್ನೋ ಆರೋಪಕ್ಕೆ ದರ್ಶನ್ ಗ್ಯಾಂಗ್ ಈ ಕೃತ್ಯ ಎಸಗಿತ್ತು. ಕರೆಂಟ್ ಶಾಕ್, ಕೋಲುಗಳಿಂದ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲಾಗಿತ್ತು. ತೀವ್ರ ಹಲ್ಲೆಯಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದ. ಬಳಿಕ ಆತನ ಮೃತದೇಹವನ್ನು ಸುಮ್ಮನಹಳ್ಳಿ ಮೋರಿಗೆ ಎಸೆಯಲಾಗಿತ್ತು.

ನಟೋರಿಯಸ್ ರೌಡಿ ಭೇಟಿಗೆ ದುಂಬಾಲು ಬಿದ್ದ ದರ್ಶನ್! ನಟನಿಗೂ ರೌಡಿ ನಾಗನಿಗೂ ಇರುವ ಲಿಂಕ್‌ ಏನು?

ದರ್ಶನ್ ಅಂಡ್ ಗ್ಯಾಂಗ್‌ನಲ್ಲಾ ಎಲ್ಲಾ ಆರೋಪಿಗಳ ಪೈಕಿ ನಾಲ್ವರನ್ನು ಭದ್ರತೆ ಕಾರಣದಿಂದ ತುಮಕೂರು ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಆರೋಪಿಗಳಾದ ರವಿಶಂಕರ್, ಕಾರ್ತೀಕ್‌, ಕೇಶವ್ ಮತ್ತು ನಿಖಿಲ್ ಎಂಬ ನಾಲ್ವರನ್ನು ತುಮಕೂರಿಗೆ ಸ್ಥಳಾಂತರ ಮಾಡಲಾಗಿದೆ.  
 

Latest Videos
Follow Us:
Download App:
  • android
  • ios