ಮಂಡ್ಯ(ಫೆ. 02)  ಚಿಕಿತ್ಸೆ ನೀಡುವ ನೆಪದಲ್ಲಿ ಮತಾಂತರಕ್ಕೆ ಯತ್ನ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ.

ಆಸ್ಪತ್ರೆಗೆ ಬಂದ ರೋಗಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಆರೋಪ  ಮಂಡ್ಯದ ಸಾಂಜೋ ಆಸ್ಪತ್ರೆ ಮೇಲೆ ಕೇಳಿ ಬಂದಿದೆ.

ಮಹಿಳೆ ಮೈ ಮುಟ್ಟಿದ ಮಂಗಳಮುಖಿ ವೇಷಧಾರಿ

ಹೊಸ ಒಡಂಬಡಿಕೆ ಎಂಬ ಪುಸ್ತಕ ನೀಡಿ ಮತಾಂತರಕ್ಕೆ ಯತ್ನ ಮಾಡಲಾಗುತ್ತಿದೆ. ಈ ಪುಸ್ತಕ ನಿಮ್ಮ ಮನೆಯಲ್ಲಿ ಇಡಿ, ನಿಮ್ಮ ದೇವರಿಗಿಂತ ಇದು ಪವರ್ ಫುಲ್, ಇದನ್ನು ನಂಬಿ, ಇದು ಇದ್ದರೆ ಯಾವುದೇ ಕಾಯಿಲೆ ಬರಲ್ಲ ಎನ್ನುತ್ತಿರುವ ಆಡಳಿತ ಮಂಡಳಿ ಚಿಕಿತ್ಸೆಗೂ ಮುನ್ನ ಹಾಗೂ ಚಿಕಿತ್ಸೆ ನಂತರ ಪುಸ್ತಕ ಓದಿ ಎಂದು ಒತ್ತಡ ಹೇರುತ್ತಿದೆ.

ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ರೋಗಿಗಳು ಹಾಗೂ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದು ಆಸ್ಪತ್ರೆ ಆಡಳಿತ ಮಂಡಳಿ ಮುಖ್ಯಸ್ಥನನ್ನು  ಪೊಲೀಸರು ಕರೆದೊಯ್ದಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.