Asianet Suvarna News Asianet Suvarna News

2019ರಲ್ಲಿ ಸದ್ದು ಮಾಡಿದ ಹನಿಟ್ರ್ಯಾಪ್ ಹಗರಣ: ಯಾರದ್ದೆಲ್ಲ ಹೆಸರು ಬಂತು!

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಧ್ಯಪ್ರದೇಶದ ಹನಿಟ್ರ್ಯಾಪ್ ಸ್ಕಾಂಡಲ್/ ಕರ್ನಾಟಕದಲ್ಲೂ ಸದ್ದು ಮಾಡಿದ್ದ ಹನಿಟ್ರ್ಯಾಪ್/ ಆರು ಜನ ಶಾಸಕರಿದ್ದಾರೆ ಎನ್ನಲಾದ ಹನಿಟ್ರ್ಯಾಪ್/ ಕೆಪಿಎಲ್ ಗೂ ತಟ್ಟಿದ ಹನಿಟ್ರ್ಯಾಪ್ ಕಳಂಕ

Recap 2019 Honey trap scandal Karnataka Madhya pradesh and kpl
Author
Bengaluru, First Published Dec 31, 2019, 2:15 PM IST

2019ಗೆ ಗುಡ್ ಬೈ ಹೇಳಿ 2020ಕ್ಕೆ ಕಾಲಿಡುತ್ತಿದ್ದೇವೆ. 2019ರಲ್ಲಿ ಅದೆಷ್ಟೋ ಸೆಕ್ಸ್ ಸ್ಕ್ಯಾಂಡಲ್ಗಳು ಸುದ್ದಿ ಮಾಡಿ ಮರೆಯಾಗಿವೆ. ಕೆಲವು ಇನ್ನೂ ಸುದ್ದಿಯಲ್ಲಿವೆ. ತನಿಖೆ ನಡೆಯುತ್ತಲೇ ಇದೆ. ಮಧ್ಯಪ್ರದೇಶದ ಹನಿಟ್ರ್ಯಾಪ್ ಇಡಿ ರಾಜಕಾರಣದ ವಲಯವನ್ನೇ ನಡುಗಿಸಿದ್ದು ಸುಳ್ಳಲ್ಲ. ರಾಜಕಾರಣ, ಅಪರಾಧ, ಸಾಹಿತ್ಯ, ರಂಗಭೂಮಿ,..ಹೀಗೆ ಎಲ್ಲ ಕ್ಷೇತ್ರಗಳಂತೆ ಇದರದ್ದೂ ಒಂದು ಹಿನ್ನೋಟ ನೋಡಿದರೆ ತಪ್ಪೇನು ಇಲ್ಲ. ವೈರಲ್ ಆದ ವಿಡಿಯೋಗಳಿಗೂ ಲೆಕ್ಕವಿಲ್ಲ.

ಮಧ್ಯಪ್ರದೇಶ ಹನಿಟ್ರ್ಯಾಪ್ :ಮಧ್ಯಪ್ರದೇಶದಲ್ಲಿ ಬಯಲಿಗೆ ಬಂದ ಪ್ರಕರಣ ರಾಜಕಾರಣ ವಲಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿ ಮಾಡಿತ್ತು.  ಹನಿಟ್ರ್ಯಾಪ್ ತಂಡದ ಬಳಿ ಇದ್ದ ಡೇಟಾ ಕಂಡು ಪೊಲೀಸರು ಹೌಹಾರಿದ್ದರು. 

ಅಕ್ಟೋಬರ್ ನಲ್ಲಿ ಬಯಲಿಗೆ ಬಂದ ಪ್ರಕರಣ ದೊಡ್ಡ ಸುದ್ದಿ ಮಾಡಿತ್ತು. ಬಿಜೆಪಿ, ಕಾಂಗ್ರೆಸ್ ಲೀಡರ್ ಗಳು ಇದ್ದಾರೆ ಎಂದು ಹೇಳಲಾಗಿದ್ದು ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವೇ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇತ್ತು,

ಪಾಕಿಸ್ತಾನ ಹನಿಟ್ರ್ಯಾಪ್‌ಗೆ ಕಾರವಾರ ನೌಕಾ ಸಿಬ್ಬಂದಿ ಟ್ರ್ಯಾಪ್

18 ವರ್ಷದ ಯುವತಿಯೊಬ್ಬಳು ಭೋಪಾಲ್ ನ ಪ್ರತಿಷ್ಠಿತ ಕ್ಲಬ್ ನಲ್ಲಿ ರೂಂ ಬುಕ್ ಮಾಡಿ ಹಿರಿಯ ಅಧಿಕಾರಿಗಳನ್ನು ಟ್ರಾಪ್ ಮಾಡುತ್ತಿದ್ದರು. ಕ್ಲಬ್ ನ ಸಿಸಿಟಿವಿಯ ದಶ್ಯ ಡಿಲೀಟ್ ಮಾಡುವ ಯತ್ನ ನಡೆಸಲಾಗಿತ್ತು ಎಂದು ಹೇಳಲಾಗಿತ್ತು.

ಎಲ್ಲಾ ಗ್ರೇಡ್ ನ ಅಧಿಕಾರಿಗಳು, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು, ಸೀನಿಯರ್ ಐಪಿಎಸ್ ಆಫಿಸರ್ ಸಹ ಈ ಗ್ಯಾಂಗ್ ಬಲೆಯೊಳಕ್ಕೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದ್ದು ಇನ್ನೂ ತನಿಖೆ ನಡೆಯುತ್ತಿದೆ.

ಕರ್ನಾಟಕ ಹನಿಟ್ರ್ಯಾಪ್: ಕರ್ನಾಟಕದ ಆರು ಜನ ಶಾಸಕರು ಇದ್ದಾರೆ ಎನ್ನಲಾದ ಹನಿಟ್ರ್ಯಾಪ್ ಪ್ರಕರಣ ಡಿಸೆಂಬರ್ ನಲ್ಲಿ ಕರ್ನಾಟಕದ ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ನಡುಕ ಹುಟ್ಟಿಸಿತ್ತು. ಕೆಲವು ರಾಜಕಾರಣಿಗಳು ತಮಗೆ ಏನೂ ಗೊತ್ತೆ ಇಲ್ಲ ಎಂದುಕೊಂಡು ಓಡಾಡಿದರು. ಪ್ರಕರಣಕ್ಕೆ ಸಂಬಂಧಿಸಿ ರಾಘವೇಂದ್ರ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.  ಕರ್ನಾಟಕದ ಒಬ್ಬ ಶಾಸಕರು ಇದ್ದಾರೆ ಎನ್ನಲಾದ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಹನಿಟ್ರ್ಯಾಪ್: ವ್ಯಾಪಾರಿ ವಿವಸ್ತ್ರಗೊಳಿಸಿ ಹಣ ದೋಚಿದ ದುಷ್ಟರು

ಕೆಪಿಎಲ್ ಹನಿಟ್ರ್ಯಾಪ್: ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ಮ್ಯಾಚ್ ಫಿಕ್ಕಿಂಗ್ ಗೆ ಸಂಬಂಧಿಸಿ ಕೆಲ ಆಟಗಾರರು ಹನಿಟ್ರ್ಯಾಪ್ ಗೆ ಒಳಗಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಕಿರುತೆರೆ ಮತ್ತು ಹಿರಿತೆರೆಯ ಕೆಲ ನಟಿಯರ ಹೆಸರು ಥಳುಕು ಹಾಕಿಕೊಂಡಿದ್ದು ತನಿಖೆ ಮುಂದುವರಿದಿದೆ.

ಇದು ಅಲ್ಲದೇ ಕೆಲ ಮಂಗಳೂರಿನ ಮೀನು ವ್ಯಾಪಾರಿಯನ್ನು ಹನಿಟ್ರ್ಯಾಪ್ ಗೆ ಸಿಲುಕಿಸಿ ಯುವತಿಯೊಬ್ಬಳು ಲಕ್ಷಾಂತರ ಹಣ ದೋಚಿದ್ದ ಪ್ರಕರಣ ಸಹ ವರ್ಷದ ಮಧ್ಯಭಾಗದಲ್ಲಿ ಸದ್ದು ಮಾಡಿತ್ತು.  ಹಿಮಾಚಲ ಪ್ರದೇಶದ ಬಿಜೆಪಿ ನಾಯಕಿಯೊಬ್ಬಳಲು ತನ್ನ ಬಾಯ್ ಫ್ರೆಂಡ್ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ವಿಡಿಯೋ ಸಹ ವೈರಲ್ ಆಗಿತ್ತು.

Follow Us:
Download App:
  • android
  • ios