ಉಚಿತ ಮೊಬೈಲ್ ಫೋನ್ ಭರವಸೆ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಸರ್ಕಾರಿ ಉದ್ಯೋಗಿ
ನೀರು ಸರಬರಾಜು ಇಲಾಖೆಯಲ್ಲಿ ಕ್ಯಾಷಿಯರ್ ಆಗಿದ್ದ ವ್ಯಕ್ತಿ, ಉಚಿತವಾಗಿ ಮೊಬೈಲ್ ಕೊಡಿಸುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆಯ ಸಂಬಂಧಿಕರು ಆರೋಪಿಸಿದ್ದಾರೆ.
ಜೈಪುರ (ಆಗಸ್ಟ್ 13, 2023): ರಾಜಸ್ಥಾನದ ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ವಿಭಾಗದ ಕ್ಯಾಷಿಯರ್ ಆಗಿರುವ 35 ವರ್ಷದ ವ್ಯಕ್ತಿಯೊಬ್ಬ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗುರುವಾರ ನಡೆದಿದೆ. ರಾಜ್ಯ ಸರ್ಕಾರದ ಯೋಜನೆಯೊಂದರಲ್ಲಿ ಉಚಿತವಾಗಿ ಮೊಬೈಲ್ ಕೊಡಿಸುವ ನೆಪದಲ್ಲಿ ಕೋಣೆಗೆ ಕರೆದೊಯ್ದು ಹದಿಹರೆಯದ ಹುಡುಗಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗುರುವಾರ ನಡೆದಿದೆ.
ನೀರು ಸರಬರಾಜು ಇಲಾಖೆಯಲ್ಲಿ ಕ್ಯಾಷಿಯರ್ ಆಗಿದ್ದ ವ್ಯಕ್ತಿ, ಉಚಿತವಾಗಿ ಮೊಬೈಲ್ ಕೊಡಿಸುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆಯ ಸಂಬಂಧಿಕರು ಆರೋಪಿಸಿದ್ದಾರೆ. ನಂತರ ಆಕ್ರೋಶಗೊಂಡ ಸ್ಥಳೀಯರು ಕ್ಯಾಷಿಯರ್‌ನನ್ನು ಹಿಡಿದು ನೀರು ಸರಬರಾಜು ಇಲಾಖೆಯ ಮುಖ್ಯ ಗೇಟ್ ಮುಂಭಾಗದ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಆರೋಪಿಯ ಮೇಲಿನ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನು ಓದಿ: ಬಿಜೆಪಿ ನಾಯಕನ ಜತೆಯ ರಾಸಲೀಲೆ ಫೋಟೋ ವೈರಲ್: ಕೇಸರಿ ಪಕ್ಷದ ನಾಯಕಿ ಸೂಸೈಡ್!
ಅದರೆ, ಸ್ಥಳೀಯರು ಆತನನ್ನು ಥಳಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸದೆ ಬಿಡುಗಡೆ ಮಾಡಿದ್ದಾರೆ. ನಂತರ, ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನು, ಈ ಸಂಬಂಧ ರಾಜಸ್ಥಾನದ ಕರೌಲಿ ಜಿಲ್ಲೆಯ ತೋಡಭೀಮ್ ಪೊಲೀಸ್ ಠಾಣೆಯಲ್ಲಿ ಆರೋಪಿ ಕ್ಯಾಷಿಯರ್ ವಿರುದ್ಧ ಸಂತ್ರಸ್ತ ಬಾಲಕಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ. ಆರೋಪಿ ಸರ್ಕಾರಿ ನೌಕರನನ್ನು ಸುನಿಲ್ ಕುಮಾರ್ ಜಂಗಿದ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಐಪಿಸಿಯ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಗಸ್ಟ್ 10 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬಾಲಕಿ ತನ್ನ ಮನೆಯಲ್ಲಿ ಒಬ್ಬಳೇ ಇದ್ದಳು, ಆಕೆಯ ತಾಯಿ ದಿನಗೂಲಿ ಕೆಲಸಕ್ಕಾಗಿ ಹೊರಗೆ ಹೋಗಿದ್ದರು ಮತ್ತು ಆಕೆಯ ತಂದೆ ಜೈಪುರದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆ ವೇಳೆ, ಸವಾಯಿ ಮಾಧೋಪುರ್ ಜಿಲ್ಲೆಯ ಗಂಗಾಪುರ ನಗರ ತಹಸಿಲ್‌ನ ಕುನ್ಸೆ ಗ್ರಾಮದ ನಿವಾಸಿ ಸುನೀಲ್ ಕುಮಾರ್ ಜಂಗಿದ್ ಎಂಬುವರು ಆಕೆಯ ಮನೆಗೆ ಬಂದು ಅಪ್ರಾಪ್ತ ವಯಸ್ಕರಿಗೆ ರಾಜ್ಯ ಸರ್ಕಾರವು ಮೊಬೈಲ್ ಫೋನ್‌ಗಳನ್ನು ಉಚಿತವಾಗಿ ನೀಡುತ್ತಿದೆ ಮತ್ತು ನಿನ್ನ ನಂಬರ್ ಯೋಜನೆಯಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ಫೋನ್ ಖಾಲಿಯಾಗುವುದರಿಂದ ಫೋನ್ ತಗೊಳ್ಳಲು ತನ್ನ ಕಾರಿನಲ್ಲಿ ಹೋಗೋಣವೆಂದು ಆತ ಅವಳಿಗೆ ಹೇಳಿದ್ದಾನೆ.
ಇದನ್ನೂ ಓದಿ: ಅಯ್ಯೋ ಪಾಪಿ: ಬಾಲಕನ ಕೊಂದು ಶವವನ್ನು ಮನೆಯಲ್ಲೇ ಮಂಚದ ಕೆಳಗಿನ ಬಾಕ್ಸ್‌ನಲ್ಲಿ ಬಚ್ಚಿಟ್ಟ ಮಹಿಳೆ!
ಬಳಿಕ, ಹುಡುಗಿ ತನ್ನ ತಾಯಿಯೊಂದಿಗೆ ಮಾತನಾಡುವುದಾಗಿ ಹೇಳಿದ್ದಕ್ಕೆ, ಫೋನ್ ತೆಎದುಕೊಂಡುಬಂದ ಮೇಲೆ ತಾಯಿಯೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದನು. ನಂತರ ಸುನೀಲ್ ಕುಮಾರ್ ಜಂಗಿದ್ ತನ್ನ ವಾಹನದಲ್ಲಿ ಅಪ್ರಾಪ್ತೆಯನ್ನು ತೊಡಭೀಮ್ ಕಡೆಗೆ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ನಂತರ ಸಂತ್ರಸ್ತೆಯನ್ನು ಈದ್ಗಾ ಮಾರ್ಗದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿರುವ ಬಗ್ಎಗ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ, ಆಕೆ ಕಿರುಚಲು ಆರಂಭಿಸಿದಾಗ ಆರೋಪಿ ತನ್ನ ತೋಳುಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ತನ್ನನ್ನು ಬಿಡುವಂತೆ ಪದೇ ಪದೇ ಹೇಳಿದರೂ ಪಟ್ಟು ಬಿಡದ ಆತ ಚಾಕುವಿನಿಂದ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ. ನಂತರ ಮನೆಗೆ ಬಂದು ನಡೆದ ಘಟನೆಯನ್ನು ತಾಯಿಗೆ ಹೇಳಿದ್ದಾಳೆ. ಸಂಜೆ ತಂದೆ ಮನೆಗೆ ಹಿಂದಿರುಗಿದಾಗ ಸಂತ್ರಸ್ತೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಅಯ್ಯೋ ಇದೆಂತ ದುರಂತ: ತಾಯಿ ಅಂತ್ಯಸಂಸ್ಕಾರಕ್ಕೆ ಹೋಗ್ತಿದ್ದ ಪುತ್ರ ರಸ್ತೆಯಲ್ಲಿ ಹೆಣವಾದ!
ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಂತ್ರಸ್ತೆಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆರೋಪಿಯನ್ನು ಇಲಾಖೆಯಲ್ಲಿ ಕಾರ್ಯಪಾಲಕ ಎಂಜಿನಿಯರ್‌ಗೆ ಹಿರಿಯ ಸಹಾಯಕರಾಗಿ ನಿಯೋಜಿಸಲಾಗಿದ್ದು, ಘಟನೆ ಬೆಳಕಿಗೆ ಬಂದ ನಂತರ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಮಗಳನ್ನು ಕೊಂದು ಮೃತದೇಹ ಬೈಕ್‌ಗೆ ಕಟ್ಟಿ, ರಸ್ತೆಯಲ್ಲಿ ಎಳೆದೊಯ್ದ: ಕೊನೆಗೆ ರೈಲ್ವೆ ಹಳಿ ಮೇಲೆ ಎಸೆದ ಪಾಪಿ ತಂದೆ