ಅಯ್ಯೋ ಪಾಪಿ: ಬಾಲಕನ ಕೊಂದು ಶವವನ್ನು ಮನೆಯಲ್ಲೇ ಮಂಚದ ಕೆಳಗಿನ ಬಾಕ್ಸ್‌ನಲ್ಲಿ ಬಚ್ಚಿಟ್ಟ ಮಹಿಳೆ!

ಗುರುವಾರ ಆರೋಪಿ ಪೂಜಾ ಮನೆಗೆ ಬಂದು ಬಾಲಕನ ತಾಯಿ ಇಲ್ಲದ ವೇಳೆ 11 ವರ್ಷದ ಬಾಲಕನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.  

11 year old delhi boy strangled at home body shoved in bed box ash

ನವದೆಹಲಿ (ಆಗಸ್ಟ್‌ 12, 2023): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ದುರಂತ ಘಟನೆ ನಡೆದಿದೆ. ಪಶ್ಚಿಮ ದೆಹಲಿಯ ಇಂದರ್‌ಪುರಿ ಪ್ರದೇಶದಲ್ಲಿ ಮಹಿಳೆಯೊಬ್ಬರು 11 ವರ್ಷದ ಬಾಲಕನನ್ನು ಕತ್ತು ಹಿಸುಕಿ ಬೆಡ್‌ ಕೆಳಗಿನ ಸ್ಟೋರೇಜ್‌ ಬಾಕ್ಸ್‌ನಲ್ಲಿಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಉಪ ಪೊಲೀಸ್ ಆಯುಕ್ತ (ಪಶ್ಚಿಮ) ವಿಚಿತ್ರಾ ವೀರ್ ಪ್ರಕಾರ, ಶಂಕಿತ ಮಹಿಳೆಯನ್ನು ಪೂಜಾ ಎಂದು ಗುರುತಿಸಲಾಗಿದ್ದು, ಆಕೆ ಮೃತ ಬಾಲಕನ ಪೋಷಕರಿಗೆ ಪರಿಚಿತರಾಗಿದ್ದರು ಎಂದು ತಿಳಿದುಬಂದಿದೆ. 

ಗುರುವಾರ ಆರೋಪಿ ಪೂಜಾ ಮನೆಗೆ ಬಂದು ಬಾಲಕನ ತಾಯಿ ಇಲ್ಲದ ವೇಳೆ ಈ ಕೃತ್ಯ ಎಸಗಿದ್ದಾಳೆ ಎಂದು ಘಟನೆಯ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.
ಹುಡುಗನ ಶಿಕ್ಷಕರು ಅವನ ತಾಯಿಗೆ ಕರೆ ಮಾಡಿ ಹುಡುಗ ತನ್ನ ತರಗತಿಗೆ ಬಂದಿಲ್ಲ ಎಂದು ತಿಳಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಇದನ್ನು ಓದಿ: ಅಯ್ಯೋ ಇದೆಂತ ದುರಂತ: ತಾಯಿ ಅಂತ್ಯಸಂಸ್ಕಾರಕ್ಕೆ ಹೋಗ್ತಿದ್ದ ಪುತ್ರ ರಸ್ತೆಯಲ್ಲಿ ಹೆಣವಾದ!

“ನಾನು ನನ್ನ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ನನ್ನ ಮಗನ ಶಿಕ್ಷಕರು ಅವನು ತರಗತಿಗೆ ಬಂದಿಲ್ಲ ಎಂಬ ಕರೆ ಸ್ವೀಕರಿಸಿದೆ. ಮನೆ ತಲುಪಿದಾಗ ಹೊರಗಿನಿಂದ ಬೀಗ ಹಾಕಿರುವುದು ಕಂಡು ಬಂತು. ನಾನು ಬೀಗವನ್ನು ತೆರೆದು ಒಳಗೆ ಹೋಗಿ ನೋಡಿದಾಗ ಇಡೀ ಮನೆಯನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು ಮತ್ತು ಕೆಲವು ವಸ್ತುಗಳು ಹಾಸಿಗೆಯ ಮೇಲೆ ಬಿದ್ದಿದ್ದವು’’ ಎಂದು ಮೃತ ಬಾಲಕನ ತಾಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತನ್ನ ಮಗನನ್ನು ನೋಡದ ಕಾರಣ ತನ್ನ ಇಡೀ ಮನೆಯನ್ನು ಹುಡುಕಿದಾಗ, ಮಂಚದ ಮೇಲೆ ಹಾಸಿಗೆ ಸರಿಯಾದ ಸ್ಥಳದಲ್ಲಿಲ್ಲ ಎಂದು ಗಮನಿಸಿದಳು. ಅನುಮಾನ ಬಂದು ಬೆಡ್ ಬಾಕ್ಸ್ ತೆರೆದು ನೋಡಿದಾಗ ಅದರೊಳಗೆ ಮಗ ನಿರ್ಜೀವವಾಗಿ ಬಿದ್ದಿರುವುದು ಕಂಡು ಬಂತು. ಬಳಿಕ, ಆಕೆ ತನ್ನ ಮಗನನ್ನು ಆಸ್ಪತ್ರೆಗೆ ಕರೆದೊಯ್ದಳು, ಅಲ್ಲಿ ಅವನು ಸತ್ತಿದ್ದಾನೆ ಎಂದು ಘೋಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮಗಳನ್ನು ಕೊಂದು ಮೃತದೇಹ ಬೈಕ್‌ಗೆ ಕಟ್ಟಿ, ರಸ್ತೆಯಲ್ಲಿ ಎಳೆದೊಯ್ದ: ಕೊನೆಗೆ ರೈಲ್ವೆ ಹಳಿ ಮೇಲೆ ಎಸೆದ ಪಾಪಿ ತಂದೆ

ಪೊಲೀಸರು ಹೇಳಿದ್ದೇನು?
ಈ ಸಂಬಂಧ ಅನೇಕ ತಂಡಗಳನ್ನು ರಚಿಸಲಾಗಿದೆ ಮತ್ತು ಶಂಕಿತ ಆರೋಪಿಯ ಸಂಭಾವ್ಯ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ದೆಹಲಿ ಉಪ ಪೊಲೀಸ್ ಆಯುಕ್ತ (ಪಶ್ಚಿಮ) ವಿಚಿತ್ರಾ ವೀರ್ ತಿಳಿಸಿದ್ದಾರೆ. ಗುರುವಾರ ರಾತ್ರಿ 8.30ರ ಸುಮಾರಿಗೆ ಬಿಎಲ್‌ಕೆ ಆಸ್ಪತ್ರೆಯಿಂದ ಬಾಲಕನನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಆತನ ಕುತ್ತಿಗೆಯಲ್ಲಿ ಕತ್ತು ಹಿಸುಕಿದ ಗುರುತುಗಳಿರುವ ಬಗ್ಗೆ ಪೊಲೀಸರು ಮಾಹಿತಿ ಪಡೆದ ಬಳಿಕ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಇನ್ನು, ಬಾಲಕನ ಪೋಷಕರು ಜಿತೇಂದರ್ ಮತ್ತು ನೀಲು ಕೆಲವು ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದೂ ಪೊಲೀಸರು ಹೇಳಿದ್ದಾರೆ.

ನೀಲು ತನ್ನ ಹೇಳಿಕೆಯಲ್ಲಿ, “ನಾನು ನನ್ನ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದೇನೆ. ಅಷ್ಟರಲ್ಲಿ ಆತನಿಗೆ ಮಹಿಳೆಯೊಬ್ಬಳು ಕರೆ ಮಾಡಿ ಬೆದರಿಕೆ ಹಾಕಿದ್ದಾಳೆ’’ ಎಂದು ತಿಳಿಸಿರುವ ಬಗ್ಗೆ ಪೊಲೀಸರು ಹೇಳಿದ್ದಾರೆ. ಈ ಕೇಸ್‌ ಸಂಬಂಧ ಇಂದರ್‌ಪುರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್‌ಎಂಎಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಡಿಸಿಪಿ ವಿಚಿತ್ರಾ ವೀರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಲಿಂಗಿ ಎಂದು ಹೀಯಾಳಿಸ್ತಿದ್ದ ಸೀನಿಯರ್ಸ್‌: ಹಾಸ್ಟೆಲ್‌ ಬಾಲ್ಕನಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ

Latest Videos
Follow Us:
Download App:
  • android
  • ios