Asianet Suvarna News Asianet Suvarna News

6 ತಿಂಗಳ ಕಂದ ಸೇರಿ ಕುಟುಂಬದ ನಾಲ್ವರ ಬರ್ಬರ ಹತ್ಯೆ, ಹಳ್ಳ ಹಿಡಿದ ರಾಜಸ್ಥಾನ ಕಾನೂನು ಸುವ್ಯವಸ್ಥೆ!

6 ತಿಂಗಳ ಪುಟ್ಟ ಕಂದಮ್ಮ ಸೇರಿದಂತೆ ಒಂದೇ ಕುಟುಂಬ ನಾಲ್ವರನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ರಾಜಸ್ಥಾನದ ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನಿಸಿದೆ. ಭೀಕರ ಹತ್ಯೆ ಬೆನ್ನಲ್ಲೇ ರಾಜಸ್ಥಾನದ ಮಂತ್ರಿ ಸಂಬಂಧಿ ಹೊಟೆಲ್‌ನಲ್ಲಿ ದಾಂಧಲೆ ನಡೆಸಿರುವ ಸಿಸಿಟಿವಿ ದೃಶ್ಯಗಳು ಬಹಿರಂಗವಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚಾಗಿದೆ.
 

Rajasthan brutal Murder 6 month toddler among 4 of family member killed near jodhpur ckm
Author
First Published Jul 19, 2023, 7:16 PM IST

ಜೋಧಪುರ(ಜು.19) ಹಲವು ರಾಜ್ಯಗಳಲ್ಲಿ ಹತ್ಯೆ, ದಾಳಿ ಪ್ರಕರಣಗಳು ಹೆಚ್ಚಾಗುತ್ತಿದೆ. ಕೆಲ ಘಟನೆಗಳು ಆತಂಕ ತರುವಂತಿದೆ. ಇದೀಗ  ರಾಜಸ್ಥಾನದ ಜೋಧಪುರದಲ್ಲಿ ನಡೆದ ಹತ್ಯೆ ದೇಶವನ್ನೇ ಬೆಚ್ಚಿ ಬೀಳಿಸಿದೆ. 6 ತಿಂಗಳ ಹೆಣ್ಣ ಮಗು ಸೇರಿದಂತೆ ಒಂದೇ ಕುಟುಂಬ ನಾಲ್ವರನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಚೆರಿಯಾ ರಾಮನಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ. ಇಂದು ರಾಜಸ್ಥಾನದ ಕಾನೂನು ಸುವ್ಯವಸ್ಥೆ ಭಾರಿ ಟೀಕೆ ಎದುರಿಸುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ರಾಜಸ್ಥಾನ ಸರ್ಕಾರದ ಮಂತ್ರಿ ಸಂಬಂಧಿ ಹೊಟೆಲ್‌ಗೆ ನುಗ್ಗಿ ದಾಂಧಲೆ ನಡೆಸಿದ್ದಾನೆ. ಗೂಂಡಾಗಳ ಜೊತೆ ನುಗ್ಗಿ ದಾಂಧಲೆ ನಡೆಸಿದ ವಿಡಿಯೋ ಇದೀಗ ವೈರಲ್ ಆಗಿದೆ. 

55 ವರ್ಷದ ಪೂರ್ಣರಾಮ್, ಆತನ ಪತ್ನಿ 50 ವರ್ಷದ ಬನ್ವಾರಿ, 23 ವರ್ಷ ಸೊಸೆ ಧಾಪು ಹಾಗೂ ಧಾಪುವಿನ 6 ತಿಂಗಳ ಹೆಣ್ಣು ಕಂದಮ್ಮನ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಚೀರಾಟ, ನರಳಾಟ ಬೆನ್ನಲ್ಲೇ ಕೊಲೆಗಡುಕರು ನಾಲ್ವರ ದೇಹಕ್ಕೂ ಬೆಂಕಿ ಹಚ್ಚಿದ್ದಾರೆ. ಬೆಂಕಿ ಉರಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಭೀಕರ ಹತ್ಯೆ ನೋಡಿ ಆತಂಕಗೊಂಡಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಭೀಕರ ಹತ್ಯೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹೆಣ್ಣು, ಹಾವು, ಹೆಂಡ; ವಿಷ ಸರ್ಪ ಬಿಟ್ಟು ಉದ್ಯಮಿ ಕೊಲೈಗೆದ ಚಾಲಕಿ ತಂಡ!

ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‌ಪಿ ಧರ್ಮೇಂದ್ರ ಸಿಂಗ್ ಯಾದವ್, ಕುಟುಂಬ ಜಗಳ ಸೇರಿದಂತೆ ಇತರ ಕೆಲ ಕಾರಣಗಳು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಈ ಕುರಿತು ಇನ್ನಷ್ಟು ಸಾಕ್ಷ್ಯಗಳು ಕಲೆ ಹಾಕುತ್ತಿದ್ದೇವೆ. ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಬಂಧಿಸುವುದಾಗಿ ಯಾದವ್ ಹೇಳಿದ್ದಾರೆ. ಪೂರ್ಣರಾಮ್ ಕಲ್ಲು ಕ್ವಾರೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಘಟನೆಯಿಂದ ಕುಟುಂಬದಲ್ಲಿ ಬದುಕುಳಿದಿರುವ ಪೂರ್ಣರಾಮ್ ಪುತ್ರ ಆಘಾತಕ್ಕೊಳಗಾಗಿದ್ದಾನೆ. 

ಈ ಘಟನೆ ರಾಜಸ್ಥಾನದ ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನಿಸಿದೆ. ರಾಜಸ್ಥಾನದಲ್ಲಿ ಹತ್ಯೆ ಹಾಗೂ ದಾಳಿ ಸಂಖ್ಯೆಗಳು ಹೆಚ್ಚಾಗಿದೆ. ರಾಜಸ್ಥಾನ ಕಾಂಗ್ರೆಸ್ ಸರ್ಕಾರ ತಮ್ಮದೇ ರಾಜಕೀಯದಲ್ಲಿ ಬ್ಯೂಸಿಯಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದೆ. ಈ ಭೀಕರ ಘಟನೆ ಚರ್ಚೆ ನಡೆಯುತ್ತಿರುವಾಗಲೇ ರಾಜಸ್ಥಾನದ ಸಚಿವನ ಸಂಬಂಧಿಕನೊಬ್ಬ, ಗೂಂಡಾಗಳ ಜೊತೆ ಹೊಟೆಲ್‌ಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆಯೂ ಬೆಳಕಿಗೆ ಬಂದಿದೆ. ಈ ಎರಡು ಘಟನೆಗಳು ರಾಜಸ್ಥಾನ ಸರ್ಕಾರ ಕಾನೂನು ಸುವ್ಯವಸ್ಥೆಗೆ ಭಾರಿ ಹಿನ್ನಡೆ ತಂದಿದೆ.

Bengaluru : ಜನ್ಮವಿತ್ತ ತಂದೆ-ತಾಯಿಯನ್ನೇ ಕೊಲೆಗೈದು ಪರಾರಿಯಾದ ಸೈಕೋ ಪುತ್ರ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಶೆಹಜಾದ್, ಇದು ರಾಜಸ್ಥಾನದ ನಿಜವಾದ ಕಾನೂನು ಸುವ್ಯವಸ್ಥೆ ಪರಿಸಿತ್ಥಿ ಎಂದಿದ್ದಾರೆ. ಸರ್ಕಾರವೇ ಮಾಫಿಯಾಗಳನ್ನು ಪೋಷಿಸುತ್ತಿದೆ. ಕಾಂಗ್ರೆಸ್ ಅಂದರೆ ಮಾಫಿಯಾ ಹಾಗೂ ಕಾನೂನು ರಹಿತ ಗ್ಯಾರೆಂಟಿ. ಆಡಳಿತ ನಡೆಸುವವರೆ ಈ ದಾಂಧಲೆ ನಡೆಸಿದರೆ ಇನ್ನು ಕಿಡಿಗೇಡಿಗಳು, ದುರ್ಷರ್ಮಿಗಳು ಸುಮ್ಮನಿರುತಾರಾ ಎಂದು ಶೆಹಜಾದ್ ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios