ಖಿನ್ನತೆಗೆ ಮಿತಿ ಮೀರಿದ ಪ್ರಮಾಣದಲ್ಲಿ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದ ವಿದ್ಯಾರ್ಥಿ ಸಾವು
ಖಿನ್ನತೆ ಅನ್ನೋದು ಇತ್ತೀಚಿಗೆ ಹಲವರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ. ಡಿಪ್ರೆಶನ್ ಕಡಿಮೆಯಾಗಲು ಮೆಡಿಸಿನ್ ತೆಗೆದುಕೊಳ್ಳುವವರೂ ಇದ್ದಾರೆ. ಹೀಗೆಯೇ ಇಲ್ಲೊಬ್ಬ ವಿದ್ಯಾರ್ಥಿ ಖಿನ್ನತೆಗೆ ಔಷಧಿ ತೆಗೆದುಕೊಂಡು ಸಾವಿಗೆ ಕಾರಣನಾಗಿದ್ದಾನೆ.
ರಾಯ್‌ಪುರ: ರಾಯ್‌ಪುರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಎಐಐಎಂಎಸ್) ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬನ ಮೃತದೇಹ ಆತನ ಹಾಸ್ಟೆಲ್ ಕೋಣೆಯಲ್ಲಿ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಯನ್ನು 25 ವರ್ಷದ ರಂಜಿತ್ ಭೋಯರ್ ಎಂದು ಗುರುತಿಸಲಾಗಿದೆ. ಆತ ಎಂಬಿಬಿಎಸ್ (ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ) ಪಿಜಿ ಇಂಟರ್ನ್ ಆಗಿದ್ದನು.
ಒಡಿಶಾದ ಭುವನೇಶ್ವರ್ ಜಿಲ್ಲೆಯವನಾಗಿದ್ದು ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದನು. ಔಷಧಿಗಳನ್ನು ಮಿತಿಮೀರಿದ ಪ್ರಮಾಣದಲ್ಲಿ ಸೇವಿಸುತ್ತಿದ್ದದ್ದು ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಭೋಯರ್ ಸ್ನೇಹಿತರು ಆತನನ್ನು ಹುಡುಕಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಯೂಟ್ಯೂಬ್ ನೋಡಿ ಕ್ಯಾನ್ಸರ್ ಗುಣಪಡಿಸಿಕೊಳ್ಳಲು ಕ್ಯಾರೆಟ್ ಜ್ಯೂಸ್ ಕುಡಿದ ಮಹಿಳೆ, ಸ್ಥಿತಿ ಚಿಂತಾಜನಕ!
ರಂಜಿತ್ ಭೋಯರ್, ಹಾಸ್ಟೆಲ್‌ನಲ್ಲಿನ ತನ್ನ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದನ್ನು ನೋಡಿ ಸ್ನೇಹಿತರು ಹಾಸ್ಟೆಲ್ ವಾರ್ಡನ್‌ಗೆ ಮಾಹಿತಿ ನೀಡಿದರು. ನಂತರ ಅವರು ಪೊಲೀಸರಿಗೆ ಕರೆ ಮಾಡಿದರು. ಘಟನೆಯ ಸ್ಥಳದಿಂದ ಯಾವುದೇ ಆತ್ಮಹತ್ಯೆ ಟಿಪ್ಪಣಿ ಪತ್ತೆಯಾಗಿಲ್ಲ.
ಹೆಚ್ಚಿನ ಪ್ರಮಾಣದಲ್ಲಿ ಔಷಧಿ ಸೇವನೆಯಿಂದ ಸಾವು ಸಂಭವಿಸಿದೆ ಎಂದು ಪ್ರಾಥಮಿಕ ಸಂಶೋಧನೆಯ ನಂತರ ಪ್ರಕರಣವನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೇಟ್ ಎಕ್ಸ್‌ಪಯರಿ ಆದ ಮೆಡಿಸಿನ್‌ಗಳನ್ನು ತಿಂದ್ರೆ ಏನಾಗುತ್ತೆ?