Crime News: ದ್ರೋಹ ಬಗೆದ ಗೆಳತಿ ಕೊಂದು ಯುವಕ ಆತ್ಮಹತ್ಯೆ
Latest Crime News: ಎಎಸ್ಪಿ ಪ್ರಕಾರ, ದುರ್ಗ್ ನಿವಾಸಿ ಎಂದು ಗುರುತಿಸಲಾದ ವ್ಯಕ್ತಿ, ತನ್ನ ಗೆಳತಿಯನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿ ನಂತರ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ
ರಾಯಪುರ್ (ಜು. 14): 27 ವರ್ಷದ ಯುವಕ ತನ್ನ ಗೆಳತಿಯನ್ನು ಹರಿತವಾದ ಆಯುಧದಿಂದ ಕೊಂದು (Murder) ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಛತ್ತೀಸ್‌ಗಢದ ರಾಯ್‌ಪುರ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಂಗಳವಾರ ಮತ್ತು ಬುಧವಾರ ಮಧ್ಯರಾತ್ರಿ ನಗರದ ಪುರಾಣಿ ಬಸ್ತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಪಶ್ಚಿಮ) ಆಕಾಶ್ ರಾವ್ ಗಿರಿಪುಂಜೆ ಮಾಹಿತಿ ನೀಡಿದ್ದಾರೆ.
ಎಎಸ್ಪಿ ಪ್ರಕಾರ, ದುರ್ಗ್ ನಿವಾಸಿ ಎಂದು ಗುರುತಿಸಲಾದ ಯುವಕ, ತನ್ನ ಗೆಳತಿಯನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವ್ಯಕ್ತಿ ರಾಯ್‌ಪುರದಲ್ಲಿ ತುರ್ತು ಪ್ರತಿಕ್ರಿಯೆ ಸೇವೆ ಡಯಲ್-112 ನಲ್ಲಿ ಕರೆ ಟ್ರ್ಯಾಕರ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಒಂದೇ ಗ್ರಾಮದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಎಸ್ಪಿ ಗಿರಿಪುಂಜೆ ಮಾತನಾಡಿ, ''ಮಹಿಳೆ ಬೇರೆ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಾಳೆ ಎಂದು ಯುವಕ ಹೇಳಿರುವ ಆತ್ಮಹತ್ಯೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕಾರಣದಿಂದಲೇ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ" ಎಂದಿದ್ದಾರೆ.
ಬುಧವಾರ ಬೆಳಗ್ಗೆ ಮೃತರ ಶವಗಳು ಪತ್ತೆಯಾಗಿವೆ ಎಂದು ಗುರಿಪುಂಜೆ ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. "ನಾವು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ ಮತ್ತು ಎಲ್ಲಾ ಕೋನಗಳಿಂದ ತನಿಖೆ ನಡೆಯುತ್ತಿದೆ" ಎಂದು ಎಎಸ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಟೀನೇಜ್ ಲವ್‌ಗೆ ರೇಪ್ ಬಣ್ಣ: ಜೈಲು ಪಾಲಾದ ಇನಿಯನ ವಾಪಸ್ ಪಡೆಯಲು ಬೈಕ್ ಕದ್ದ ಯುವತಿ