ರಾಯಚೂರು(ಏ. 09) ಕೊರೋನಾ ಅಟ್ಟಹಾಸದ ನಡುವೆ ಈ ಕುಟುಂಬಕ್ಕೆ ಮತ್ತೊಂದು ಅರಗಿಸಿಕೊಳ್ಳಲಾಗದ ಸುದ್ದಿ ಬಂದೆರಗಿದೆ. ನೀರು ತುಂಬಲು ಹೋದ ಮೂವರು ಮಕ್ಕಳು ನೀರು ಪಾಲಾಗಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲುಕಿನ ರೌಡಕುಂದಾ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ.

ನಾಗರಾಜ್ (10),ಕಾರ್ತಿಕ (8) ಹಾಗೂ ರವಿಕುಮಾರ್ (7)  ಕೆರೆಯಲ್ಲಿ ಕಾಲು ಜಾರಿಬಿದ್ದು ಮಕ್ಕಳು ಅಸುನೀಗಿದ್ದಾರೆ.  ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ಅಕ್ಕನ ಮಗಳನ್ನೇ ಕೊಂದ ತಂಗಿ

ಲಾಕ್ ಡೌನ್ ಕಾರಣ ಎಲ್ಲರೂ ಮನೆಯಲ್ಲೇ ಇದ್ದರೂ ಏನು ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಈ ಕುಟುಂಬದ ಮಟ್ಟಿಗೆ ಮಾತ್ರ ಕರಾಳ ದಿನವಾಗಿ ಮಾರ್ಪಟ್ಟಿದೆ.