ಎಪಿಎಂಸಿ ಮಾರುಕಟ್ಟೆ ಅಂದ್ರೇನೆ ಒಂದಿಲ್ಲೊಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಅದೇ ರೀತಿ ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ಸ್ ಸಿಟಿಗೆ ಸಮೀಪದ ಸಿಂಗೇನ ಅಗ್ರಹಾರದ ಎಪಿಎಂಸಿ ಹಣ್ಣಿನ ಮಾರುಕಟ್ಟೆಯಲ್ಲಿ ಮಳಿಗೆಗಾಗಿ ಇಬ್ಬರ ನಡುವೆ ಜಟಾಪಟಿ ನಡೆಸಿರುವಂತಹ ಘಟನೆಗೆ ಸಾಕ್ಷಿಯಾಗಿದೆ.
ವರದಿ: ಟಿ.ಮಂಜುನಾಥ್, ಹೆಬ್ಬಗೋಡಿ
ಬೆಂಗಳೂರು (ಮೇ.02): ಎಪಿಎಂಸಿ ಮಾರುಕಟ್ಟೆ (APMC Market) ಅಂದ್ರೇನೆ ಒಂದಿಲ್ಲೊಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಅದೇ ರೀತಿ ಬೆಂಗಳೂರು (Bengaluru) ಹೊರವಲಯದ ಎಲೆಕ್ಟ್ರಾನಿಕ್ಸ್ ಸಿಟಿಗೆ ಸಮೀಪದ ಸಿಂಗೇನ ಅಗ್ರಹಾರದ ಎಪಿಎಂಸಿ ಹಣ್ಣಿನ ಮಾರುಕಟ್ಟೆಯಲ್ಲಿ ಮಳಿಗೆಗಾಗಿ ಇಬ್ಬರ ನಡುವೆ ಜಟಾಪಟಿ ನಡೆಸಿರುವಂತಹ ಘಟನೆಗೆ ಸಾಕ್ಷಿಯಾಗಿದೆ. ಹೌದು! ಸಿಂಗೇನ ಅಗ್ರಹಾರದ ಎಪಿಎಂಪಿ ಮಾರುಕಟ್ಟೆಯಲ್ಲಿನ C-52ನೇ ನಂಬರಿನ ಮಳಿಗೆಗೆ ಮೂರು ಅಗ್ರಿಮೆಂಟ್‌ಗಳಾಗಿ ಎರಡು ಬಾರಿ ಸೇಲ್ ಆಗಿದ್ದು, ಇದೀಗ ಮಳಿಗೆಗಾಗಿ (Shop) ಕಿತ್ತಾಟ (Quarrel) ಶುರುವಾಗಿದೆ.
2016 ರಲ್ಲಿ ಸೈಯದ್ ನಿಜಾಮ್ ಎಂಬುವವರಿಂದ ಬಸವನಗೌಡ ಎಂಬುವವರು ಅಗ್ರಿಮೆಂಟ್ ಮಾಡಿಸಿಕೊಂಡು ಮಳಿಗೆಯನ್ನ ಪಡೆದುಕೊಂಡಿರುತ್ತಾರೆ. ಆದರೆ ಮಳಿಗೆಯನ್ನ ಸ್ವಾಧೀನಕ್ಕೆ ನೀಡದೆ ಮತ್ತೋರ್ವ ವ್ಯಕ್ತಿಗೂ ಮಾರಾಟವಾಗಿ ಮೂರನೇ ವ್ಯಕ್ತಿ ವ್ಯಾಪಾರ ನಡೆಸುತ್ತಿದ್ದಾರೆ, ಬಸವನಗೌಡನನ್ನು ಒಳಗಡೆಗೂ ಬಿಡುತ್ತಿಲ್ಲ, ಇದೇ ರೀತಿ ಸೈಯದ್ ನಿಜಾಮ್ ಬೇರೆಯವರಿಗೂ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ. ಮಳಿಗೆಗಾಗಿ ಸುಮಾರು 80 ಲಕ್ಷ ರೂ ನೀಡಿ ಅಗ್ರಿಮೆಂಟ್ ಮಾಡಿಸಿಕೊಂಡಿದ್ದ ಬಸವನಗೌಡ ಎಂಬುವವರಿಗೆ ಇತ್ತ ಹಣವು ಇಲ್ಲದೆ ಅತ್ತ ಮಳಿಗೆಯು ಸಿಗದಂತಾಗಿದೆ.
Davanagere: ಜಿಮ್ ಟ್ರೈನರ್ ಹತ್ಯೆ ಪ್ರಕರಣ: ಬ್ರೂಟಲ್ ಮರ್ಡರ್ ಆರೋಪಿಗಳ ಬಂಧನ
ಒಪ್ಪಂದದಂತೆ ಮಳಿಗೆ ನೀಡಲಿ ಇಲ್ಲವೇ ಕೊಟ್ಡಿರುವ ಹಣವನ್ನಾದರೂ ಹಿಂತಿರುಗಿಸಲಿ ಎಂದು ಬಸವನಗೌಡ ಮಳಿಗೆಯ ಮುಂಭಾಗ ಆಗಮಿಸುತ್ತಿದ್ದಂತೆ ಸ್ವಾಧೀನದಲ್ಲಿದ್ದ ವ್ಯಕ್ತಿಯ ನಡುವೆ ಗಲಾಟೆ ನಡೆದು ಜಟಾಪಟಿಗೆ ಕಾರಣವಾಯಿತು. ಈ ವೇಳೆ ಮೋಸ ಹೋದ ಬಸವನಗೌಡ ಮಾತನಾಡಿ, ಸೈಯದ್ ನಿಜಾಮ್ ಅಗ್ರಿಮೆಂಟ್ ನಂತೆ ನಡೆದುಕೊಳ್ಳದೆ ಮತ್ತೊಬ್ಬರಿಗೆ ಮಳಿಗೆಯನ್ನ ಅಗ್ರಿಮೆಂಟ್ ಮಾಡಿಕೊಟ್ಟು ಹಣವನ್ನು ಹಿಂತಿರುಗಿಸದೆ, ಮಳಿಗೆಯನ್ನು ನೀಡದೆ ವಂಚಿಸುತ್ತಿದ್ದಾರೆ. ಈ ಬಗ್ಗೆ ಎಪಿಎಂಸಿ ಅಧಿಕಾರಿಗಳ ಗಮನಕ್ಕೆ ತಂದರು ಸಹ ಕಂಡು ಕಾಣದಂತೆ ಸುಮ್ಮನೆ ಇದ್ದಾರೆ.
PSI ನೇಮಕಾತಿ ಹಗರಣ: ಬಂಧಿತ ಉದ್ಯಮಿ ಕಾಶಿನಾಥ್ ಕಾಟೇಗಾಂವ್‌ಗೂ ಕಾಂಗ್ರೆಸ್ ನಂಟು
ಪೋಲೀಸ್ ಠಾಣೆಯ ಮೆಟ್ಟಿಲೇರಿದರೂ ಸಹ ನ್ಯಾಯ ಸಿಗುತ್ತಿಲ್ಲ ಕೊಟ್ಟಿರುವ 80 ಲಕ್ಷ ರೂ ಹಣವನ್ನಾದರೂ ನೀಡಲಿ ಇಲ್ಲವೇ ಮಳಿಗೆಯನ್ನಾದರೂ ಬಿಟ್ಟು ಕೊಡಲಿ ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸುತ್ತೇನೆ ಎಂದರು. ಎಪಿಎಂಸಿ ಜಾಣಕುರುಡನಂತೆ ವರ್ತಿಸುತ್ತಿದೆ, ಎಲ್ಲಾ ಗಲಾಟೆಗಳು ಗೊತ್ತಿದ್ದರೂ ಯಾವುದೇ ರೀತಿ ನಿರ್ಣಯ ಕೈಗೊಳ್ಳುತ್ತಿಲ್ಲ, ಸಿಂಗೇನಾ ಅಗ್ರಹಾರದಲ್ಲಿ 350ಕ್ಕೂ ಹೆಚ್ಚು ಮಳಿಗೆಗಳಿದ್ದು ದೇಶ- ವಿದೇಶಗಳಿಂದ ಹಣ್ಣಿನ ವ್ಯಾಪಾರ ವಹಿವಟು ನಡೆಯುತ್ತದೆ, ಇಂತಹ ಲೋಪಗಳು ನಡೆದಾಗ ಚ್ಯೂತಿ ಬಾರದಂತೆ ಇತ್ಯರ್ಥಪಡಿಸಬೇಕಿರುವವರು ಕೈಕಟ್ಟಿ ಕುಳಿತಿರುವುದರಿಂದ ಎಪಿಎಂಸಿ ಮಾರುಕಟ್ಟೆ ಕಪ್ಪುಚುಕ್ಕೆಯಾಗೋದನ್ನ ತಪ್ಪಿಸುತ್ತಾ ಕಾದು ನೋಡಬೇಕಿದೆ.
