ಪಂಜಾಬ್​(ಸೆ. 13) ಲಿವ್​ ಇನ್​ ರಿಲೇಷನ್​ನಲ್ಲಿ ಇದ್ದ ಪ್ರೇಮಿಗಳು 50 ಸಾವಿರ ರೂಪಾಯಿ ದಂಡ ಬೇಕಂತಲೆ ಹಾಕಿಸಿಕೊಂಡಿದ್ದಾರೆ. ಇವರು ಪ್ರೇಮಿಗಳು ಆದರೆ ಇಬ್ಬರಿಗೂ ಬೇರೆಯವರ ಜತೆ ಮದುವೆಯಾಗಿತ್ತು!

ತಮ್ಮ ಪತಿ-ಪತ್ನಿಗೆ ವಿಚ್ಛೇದನ ನೀಡದೆ ಲಿವ್​ ಇನ್​ ಸಂಬಂಧದಲ್ಲಿ ನಾಲ್ಕೈದು ವರ್ಷಗಳಿಂದ ಜೋಡಿ ವಾಸವಿದ್ದರು.  ಇಷ್ಟೆ ಆಗಿದ್ದರೆ ಪ್ರಪಂಚಕ್ಕೆ ವಿಚಾರ ಗೊತ್ತಾಗುತ್ತಿರಲಿಲ್ಲವೆನೋ?  ಆದರೆ ಇವರಿಬ್ಬರೂ ತಂತಮ್ಮ ಸಂಗಾತಿ ವಿರುದ್ಧ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು ವಿಚ್ಛೇದನ ಕೇಳಿದ್ದರು.

ಲಿವ್ ಇನ್ ಸಲಿಂಗಿಗಳು ಜತೆಯಿರಲು ಯಾವ ಅಡ್ಡಿ ಇಲ್ಲ

ಇದರ ವಿಚಾರಣೆ ವೇಳೆ ಲಿವ್ ಇನ್ ನಲ್ಲಿ ಇದ್ದ ಮಹಿಳೆ 2016ರಲ್ಲಿಯೇ ಗಂಡನನ್ನು ಬಿಟ್ಟು ಬಂದಿರುವ ವಿಷಯ ತಿಳಿದಿದೆ. ಇದಾದ ಮೇಲೆ ತನ್ನ ಪ್ರಿಯಕರನ ಜತೆ ಲಿವ್​ ಇನ್​ನಲ್ಲಿ ಇರುವ ಈಕೆ ಎರಡು ವರ್ಷ ಬಿಟ್ಟು ಗಂಡನ ವಿರುದ್ಧ ದೌರ್ಜನ್ಯದ ಅರ್ಜಿ ಸಲ್ಲಿಸಿದ್ದು ಗೊತ್ತಾಗಿದೆ.  ಪುರುಷ ಸಹ ತನ್ನ ಪತ್ನಿ ತೊರೆದಿದ್ದು ಬಹಿರಂಗವಾಗಿದೆ.

ಸಂಗಾತಿಯ ವಿರುದ್ಧ ಸುಳ್ಳು ದೌರ್ಜನ್ಯದ ಕೇಸು ಹಾಕಿದ್ದು ಅಲ್ಲದೇ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕೆ  ಜೋಡಿ ಕೋವಿಡ್ ಪರಿಹಾರ ನಿಧಿಗೆ 50 ಸಾವಿರ ರೂಪಾಯಿ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ.