ಪುಣೆ (ಮೇ 27) ಅತ್ತೆ-ಸೊಸೆ ಜಗಳಕ್ಕೆ ಶತಮಾನಗಳ ಇತಿಹಾಸವಿದೆ. ಇಲ್ಲೊಬ್ಬಳು ಕ್ರೂರಿ ಸೊಸೆ ಅತ್ತೆಯನ್ನು ಕೊಂದಿದ್ದು ಪೊಲೀಸರ  ಕೈಗೆ ಗಂಡನ ಸಮೇತ ಸಿಕ್ಕಿಬಿದ್ದಿದ್ದಾಳೆ.

ಕತ್ತು ಹಿಸುಕಿ ಅತ್ತೆಯನ್ನು  ಹತ್ಯೆ ಮಾಡಿದ ಸೊಸೆ ಗಂಡನ ಸಹಾಯದಿಂದ ಶವ ಹೊರಗೆ ಹಾಕಲು ಯತ್ನಿಸಿದ್ದಳು. ಅತ್ತೆ ಕೊಂದ ಆರೋಪದ ಮೇಲೆ 22  ವರ್ಷದ  ಪೂಜಾ ಮಿಲಿಂದ್ ಶಿಂಧೆಯನ್ನು ಬಂಧಿಸಲಾಗಿದೆ. ಆಕೆಯ ಪತಿ ಹತ್ಯೆಗೀಡಾದವಳ ಪುತ್ರ ಮಿಲಿಂದ್ ಗೌತಮ್ ಶಿಂಧೆಯನ್ನು ಬಂಧಿಸಲಾಗಿದೆ. ಅತ್ತೆ ಬೇಬಿ ಶಿಂಧೆಯನ್ನು ಹತ್ಯೆ ಮಾಡಲಾಗಿತ್ತು.

 ಜಮೀನಿಗಾಗಿ ದಾಯಾದಿ ಕಲಹ, ಉರುಳಿದ ಹೆಣಗಳೆಷ್ಟು? 

ಪುಣೆಯ ಪಿಂಪ್ರಿ ಚಿಂಚ್‌ವಾಡ್ ವ್ಯಾಪ್ತಿಯಲ್ಲಿರುವ ತಲೆಗಾಂವ್ ದಾಭಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೂಜಾ ಮತ್ತು ಮಿಲಿಂದ್ ಗೋಣಿ ಚೀಲದಲ್ಲಿ ಏನನ್ನೋ ಸಾಗಿಸುತ್ತಿರುವುದನ್ನು ಅಕ್ಕ-ಪಕ್ಕದವರು ಕಂಡು ಪೊಲೀಸರಿಗೆ ವರದಿ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಹತ್ತಿರದ ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಿ ದಂಪತಿ ವಶಕ್ಕೆ ಪಡೆದು ಪ್ರಶ್ನೆ ಕೇಳಿದಾಗ ಪ್ರಕರಣ ಹೊರಕ್ಕೆ ಬಂದಿದೆ. ಮನೆ ಹತ್ತಿರದ ಹೊಂಡವೊಂದರಲ್ಲಿ ಅತ್ತೆಯ ಶವ ಪತ್ತೆಯಾಗಿದೆ.

ಮೇ 21 ರಂದು ಪೂಜಾ ಮತ್ತು ಆಕೆಯ ಅತ್ತೆ  ನಡುವೆ ಜಗಳ ನಡೆದಿದೆ. ಕುಪ್ಪಸದಿಂದ ಅತ್ತೆಯ ಕುತ್ತಿಗೆ ಹಿಸುಕಿ ಸೊಸೆ ಹತ್ಯೆ ಮಾಡಿದ್ದಾಳೆ. ಇದಾದ ಮೇಲೆ ಶವ ಹೊರಕ್ಕೆ ಹಾಕುವ ಯತ್ನ ಮಾಡಿದ್ದರು.