ಬೆಳಗಾವಿ: ಪಂಪ್‌ಸೆಟ್‌ ಕೇಬಲ್‌ ಕಳವು: ರೈತರು ಹೈರಾಣು

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಒಂದೆಡೆ ಅತಿವೃಷ್ಟಿ, ಇನ್ನೊಂದೆಡೆ ಅನಾವೃಷ್ಟಿಯಂತಹ ಪರಿಸ್ಥಿತಿ ಎದುರಾಗಿದೆ. ಮೊದಲೇ ರೈತರು ಸಂಕಷ್ಟದ ಸಂಕೋಲೆಯಲ್ಲಿ ಸಿಲುಕಿ ಇನ್ನೂ ಹೊರಬಂದಿಲ್ಲ. ತಮ್ಮ ಹೊಲಗದ್ದೆಗಳಲ್ಲಿ ಅಳವಡಿಸಿರುವ ಲಕ್ಷಾಂತರ ಮೌಲ್ಯದ ರೈತರ ಪಂಪ್‌ಸೆಟ್‌ಗಳ ತಾಮ್ರದ ತಂತಿ (ಕೇಬಲ್‌) ರಾತ್ರೋರಾತ್ರಿ ಕಳವಿಗೀಡಾಗುತ್ತಿವæ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.

Pumpset cable theft: Farmers in trouble at belgum rav

ಶ್ರೀಶೈಲ ಮಠದ

ಬೆಳಗಾವಿ (ಆ.7) :  ಗಡಿ ಜಿಲ್ಲೆ ಬೆಳಗಾವಿಯಲ್ಲಿ ಒಂದೆಡೆ ಅತಿವೃಷ್ಟಿ, ಇನ್ನೊಂದೆಡೆ ಅನಾವೃಷ್ಟಿಯಂತಹ ಪರಿಸ್ಥಿತಿ ಎದುರಾಗಿದೆ. ಮೊದಲೇ ರೈತರು ಸಂಕಷ್ಟದ ಸಂಕೋಲೆಯಲ್ಲಿ ಸಿಲುಕಿ ಇನ್ನೂ ಹೊರಬಂದಿಲ್ಲ. ತಮ್ಮ ಹೊಲಗದ್ದೆಗಳಲ್ಲಿ ಅಳವಡಿಸಿರುವ ಲಕ್ಷಾಂತರ ಮೌಲ್ಯದ ರೈತರ ಪಂಪ್‌ಸೆಟ್‌ಗಳ ತಾಮ್ರದ ತಂತಿ (ಕೇಬಲ್‌) ರಾತ್ರೋರಾತ್ರಿ ಕಳವಿಗೀಡಾಗುತ್ತಿವæ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.

ತಮ್ಮ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಾಲ ಮಾಡಿ ಹೊಲಗದ್ದೆಗಳಲ್ಲಿ ಪಂಪ್‌ಸೆಟ್‌ ಅಳವಡಿಸಿದ ರೈತರ ನೆಮ್ಮದಿಯನ್ನೇ ಹಾಳುಮಾಡುತ್ತಿದೆ. ಜಲಮೂಲ ಅರಸಿ, ತಮ್ಮ ಬೆಳೆಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ನದಿ ತೀರಗಳಲ್ಲಿ, ಹಳ್ಳ ಕೊಳ್ಳಗಲ್ಲಿ ರೈತರು ಅಳವಡಿಸಿರುವ ವಿದ್ಯುತ್‌ ಪಂಪ್‌ಸೆಟ್‌ಗಳ ತಾಮ್ರದ ವಿದ್ಯುತ್‌ ತಂತಿಯನ್ನು ಅವ್ಯಾಹತವಾಗಿ ಕಳವು ಮಾಡಲಾಗುತ್ತಿದೆ. ಇದು ರೈತರಿಗೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.

ಕೊಡೆಕಲ್ ಬಸವೇಶ್ವರ ದೇವಸ್ಥಾನದಲ್ಲಿ ಹುಂಡಿ ಹಣ ಕದ್ದ ಖದೀಮರು!

ಹೊಲಗದ್ದೆಗಳಲ್ಲಿರುವ ಪಂಪ್‌ಸೆಟ್‌ಗಳನ್ನು ಕಳವು ಮಾಡುತ್ತಿದ್ದ ಕಳ್ಳರು ಪಂಪ್‌ಸೆಟ್‌ಗಳಿಗೆ ಅಳವಡಿಸಿರುವ ತಾಮ್ರದ ವಿದ್ಯುತ್‌ ತಂತಿ (ಕೇಬಲ್‌)ಯನ್ನು ಬಿಡುತ್ತಿಲ್ಲ. ಇದರಿಂದಾಗಿ ರೈತರಿಗೆ ಲಕ್ಷಾಂತರ ಹಾನಿಯಾಗುತ್ತಿದೆ. ಮತ್ತೆ ಪಂಪ್‌ಸೆಟ್‌ಗಳಿಗೆ ತಾಮ್ರದ ತಂತಿ ಅಳವಡಿಸಿದರೆ, ಮತ್ತೆ ಅದನ್ನು ಕಳವು ಮಾಡಲಾಗುತ್ತಿದೆ. ಪಂಪ್‌ಸೆಟ್‌ಗಳಿಗೆ ಅಳವಡಿಸಿರುವ ತಾಮ್ರದ ತಂತಿಗೆ ತಾಮ್ರಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇದೆ. ಉತ್ತಮ ಬೆಲೆಯೂ ಇದೆ. ಹಾಗಾಗಿ, ಕಳ್ಳರು ತಾಮ್ರದ ತಂತಿಯನ್ನೇ ಗುರಿಯಾಗಿಸಿ, ಕಳ್ಳನತದಲ್ಲಿ ತೊಡಗಿದ್ದಾರೆ.

ಹೊಲಗದ್ದೆಗಳಲ್ಲಿ ಅಳವಡಿಸಿರುವ ಪಂಪ್‌ಸೆಟ್‌ಗಳ ಕಳವು ಪ್ರಕರಣಗಳು ಕೂಡ ವ್ಯಾಪಕವಾಗಿ ನಡೆಯುತ್ತಲೇ ಇವೆ. ಈ ಪ್ರಕರಣ ಸಂಬಂಧ ಪೊಲೀಸರು ಆಗಾಗ ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಆದರೆ, ತಾಮ್ರದ ವಿದ್ಯುತ್‌ ತಂತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಆರೋಪಿಗಳೇ ಸಿಕ್ಕಿಲ್ಲ. ಪಂಪ್‌ಸೆಟ್‌ಗಳ ವಿದ್ಯುತ್‌ ತಂತಿ ಕಳವು ಮಾಡುತ್ತಿರುವುದರಿಂದ ರೈತರು ಮರಳಿ ಪಂಪ್‌ಸೆಟ್‌ಗಳನ್ನು ಅಳವಡಿಸುವುದಕ್ಕೂ ಹಿಂದೆ- ಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಚಿತ್ರವೆಂದರೆ, ಕಾಗವಾಡ ಶಾಸಕ ರಾಜು ಕಾಗೆ ಅವರಿಗೆ ಸೇರಿದ ಜಮೀನಿನಲ್ಲಿ ಅಳವಡಿಸಿದ್ದ ಪಂಪ್‌ಸೆಟ್‌ನ .10 ಲಕ್ಷ ಮೌಲ್ಯದ ವಿದ್ಯುತ್‌ ಕೇಬಲ್‌ ಕಳವಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಳ್ಳರು ಜನಸಾಮಾನ್ಯರ ಮಾತ್ರವಲ್ಲ, ಜನಪ್ರತಿನಿಧಿಗಳನ್ನೂ ಬಿಟ್ಟಿಲ್ಲ.

ಪಂಪ್‌ಸೆಟ್‌ ತಂತಿ ಕಳವು ಏಕೇ?:

ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ಸೇರಿದಂತೆ ಮತ್ತಿತರ ನದಿ ತೀರಗಳಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಪಂಪ್‌ಸೆಟ್‌ ಅಳವಡಿಸಿದ್ದಾರೆ. ಪಂಪ್‌ಸೆಟ್‌ಗಳಿಗೆ ಲಕ್ಷಾಂತರ ಮೌಲ್ಯದ ತಾಮ್ರದ ತಂತಿಯನ್ನೇ ಬಳಸಲಾಗುತ್ತಿದೆ. ನದಿ ತೀರದಿಂದ ತಮ್ಮ ದೂರದಲ್ಲಿರುವ ಹೊಲ-ಗದ್ದೆಗಳವರೆಗೆ ಪಂಪ್‌ಸೆಟ್‌ಗೆ ವಿದ್ಯುತ್‌ ತಂತಿ ಅಳವಡಿಸಲಾಗುತ್ತಿದೆ. ತುಂಬಾ ದೂರದಲ್ಲಿ ಇರುವುದರಿಂದ ವಿದ್ಯುತ್‌ ತಂತಿ ಮೇಲೆ ನಿಗಾವಹಿಸುವುದು ಕಷ್ಟಸಾಧ್ಯ. ಪಂಪ್‌ಸೆಟ್‌ಗಳಿಗೆ ಅಳವಡಿಸಿರುವ ವಿದ್ಯುತ್‌ ತಂತಿ ತಾಮ್ರದ್ದಾಗಿರುತ್ತದೆ. ಈ ತಂತಿಗೆ ಮಾರುಕಟ್ಟೆಗೆ ಉತ್ತಮ ಬೆಲೆ ಇರುವುದರಿಂದಲೇ ಕಳವು ಮಾಡಲಾಗುತ್ತಿದೆ. ಕಳ್ಳರು ಹೊಲಗದ್ದೆಗಳಲ್ಲೇ ಕೇಬಲ್‌ ಅನ್ನು ಕಟ್‌ ಮಾಡಿ, ಸ್ಥಳದಲ್ಲೇ ಕೇಬಲ್‌ ಕೋಟಿಂಗ್‌ ಅನ್ನು ಸುಟ್ಟು ತೆರವುಗೊಳಿಸಿ, ಕೇವಲ ತಾಮ್ರದ ತಂತಿಯನ್ನು ಮಾತ್ರ ತೆಗೆದುಕೊಂಡು ಹೋಗುತ್ತಾರೆ. ವಿದ್ಯುತ್‌ ತಂತಿ ಕಳವುಕ್ಕೆ ಬ್ರೇಕ್‌ ಬಿದ್ದಿಲ್ಲ. ನಿರಾಂತಕವಾಗಿ ವಿದ್ಯುತ್‌ ತಂತಿ ಕಳವು ನಡೆಯುತ್ತಲೇ ಇದೆ.

 

ದಾವಣಗೆರೆ: ಘನತ್ಯಾಜ್ಯ ವಿಲೇವಾರಿ ಘಟಕದ ಶೀಟು ಕಳವು, ಕುಣಿಗಲ್‌ನಲ್ಲಿ ಕೊಳವೆ ಬಾವಿ ಕೇಬಲ್ ಕಳವು

ನದಿತೀರದಲ್ಲಿ ಪಂಪ್‌ಸೆಟ್‌ಗಳಿಗೆ ಅಳವಡಿಸಿರುವ ತಾಮ್ರದ ವಿದ್ಯುತ್‌ ಕೇಬಲ್‌ ಪ್ರಕರಣ ವ್ಯಾಪಕವಾಗಿ ನಡೆಯುತ್ತಿವೆ. ನಮ್ಮ ಜಮೀನಿನಲ್ಲಿದ್ದ ಸುಮಾರು . 10 ಲಕ್ಷ ಮೌಲ್ಯದ ವಿದ್ಯುತ್‌ತಂತಿಯನ್ನು ಕಳವು ಮಾಡಲಾಗಿದೆ. ಆದರೆ, ಈವರೆಗೂ ಆರೋಪಿಗಳು ಯಾರು ಎನ್ನುವುದು ಗೊತ್ತಾಗಿಲ್ಲ. ಕಾಗವಾಡ ತಾಲೂಕಿನಲ್ಲಿ ಕೃಷ್ಣಾ ನದಿ ತೀರದಲ್ಲಿ ಅಳವಡಿಸಿರುವ ರೈತರ ಪಂಪ್‌ಸೆಟ್‌ಗಳ ವಿದ್ಯುತ್‌ತಂತಿ ಕಳವು ಪ್ರಕರಣ ಮುಂದುವರೆದಿವೆ. ವಿದ್ಯುತ್‌ ಕೇಬಲ್‌ ಕಳ್ಳರನ್ನು ಸೆಡೆಬಡಿಯಲು ಪೊಲೀಸರು ಕ್ರಮ ಕೈಗೊಳ್ಳಬೇಕು.

- ರಾಜು ಕಾಗೆ ಶಾಸಕ, ಕಾಗವಾಡ ವಿಧಾನಸಭಾ ಕ್ಷೇತ್ರ

ಬೆಳಗಾವಿ ಜಿಲ್ಲೆಯಲ್ಲಿ ತಮ್ಮ ಹೊಲಗದ್ದೆಗಳಲ್ಲಿ ರೈತರು ಅಳವಡಿಸಿರುವ ಪಂಪ್‌ಸೆಟ್‌ ಕಳವುಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಿ,ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ರೈತರ ಪಂಪ್‌ಸೆಟ್‌ಗಳ ವಿದ್ಯುತ್‌ ಕೇಬಲ್‌ ಕಳವು ಪ್ರಕರಣ ಸಂಬಂಧ ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುವುದು.

- ಡಾ.ಸಂಜೀವ ಪಾಟೀಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Latest Videos
Follow Us:
Download App:
  • android
  • ios