ಗುಂಟೂರು(ಡಿ. 23) ಮೊದಲ ರಾತ್ರಿಗೆಂದು ಸಾಕಷ್ಟು ಕನಸು ಕಂಡಿದ್ದ ಈ ಯುವತಿಗೆ ನರಕವೇ ದರ್ಶನವಾಗಿದೆ. ಪಾಪಿ ಗಂಡ ಮಾಡಿದ ಕೆಲಸಕ್ಕೆ ಏನು ಮಾಡಲೂ ತೋಚದ ಸ್ಥಿತಿ ನಿರ್ಮಾಣವಾಗಿದೆ.

ಹೈದರಾಬಾದ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯಯರ್ ಆಗಿ ಕೆಲಸ ಮಾಡುತ್ತಿರುವ ಗುಂಟೂರು ಮೂಲದ ಯುವತಿ ಹೈದಾರಾಬಾದಿನಲ್ಲಿ ಇಂಜಿನಿಯರ್  ಆಗಿರುವ ಪ್ರಕಾಶಂ ಜಿಲ್ಲೆಯ ಯುವಕನನ್ನು ಒಬ್ಬರನ್ನು ಮದುವೆಯಾಗಿದ್ದಾರೆ. 

ಮೊದಲ ರಾತ್ರಿ ಬದ್ಮಾಷ್ ಗಂಡ ಮಾಕಡಿದ ಎಡವಟ್ಟು

ಮೊದಲ ರಾತ್ರಿ ಪತಿ ಸಾಂಗತ್ಯ ಬಯಸಿದ್ದ ವಧುವಿಗೆ ಪತಿಯ ವಿಚಿತ್ರ ವರ್ತನೆ ಕಂಡು ಏನೂ ಮಾಡಬೇಕೆಂದು ಗೊತ್ತಾಗಿಲ್ಲ.  ಹಾಗೂ ಹೀಗೂ ಒಂದು ತಿಂಗಳು ಕಳೆದಿದೆ. ಮತ್ತೆ ಎರಡು ಕುಟುಂಬದ  ಹಿರಿಯರು ಮೊದಲ ರಾತ್ರಿ ಶಾಸ್ತ್ರ ನಿಶ್ಚಯ ಮಾಡಿದ್ದಾರೆ.

ಈಗ ವಧು ಮತ್ತೆ ನರಕ ನೋಡಬೇಕಾದ ಸ್ಥಿತಿ ಬಂದಿದೆ.  ಪತ್ನಿಗೆ ಅರವಳಿಕೆ ಇಂಜೆಕ್ಷನ್ ನೀಡಿ ಬ್ಲೇಡ್  ನಿಂದ ಆಕೆಯ ಜನನಾಂಗದ ಬಳಿ ಗಾಯ ಮಾಡಿ ರಾಕ್ಷಸನಂತೆ ವರ್ತಿಸಿದ್ದಾನೆ. ತುಂಬಾ ಹೆದರಿದ ಯುವತಿ ಮರುದಿನ ಎಲ್ಲ ವಿಚಾರವನ್ನು ಹಿರಿಯರಿಗೆ ತಿಳಿಸಿದ್ದಾಳೆ.

ಪರಿಣಾಮ ವಧುವಿನ ತಂದೆ ದೂರು  ನೀಡಿದ್ದಾರೆ. ಇನ್ನೊಂದು ಕಡೆ ವರನ  ಕುಟುಂಬದವರು ನಮ್ಮ ಪುತ್ರ ತಪ್ಪಿಲ್ಲ. ನಿಮ್ಮ ಮಗಳೇ ಅಪ್ರಯೋಜಕಿ ಎಂದು ವಾದ ಮಾಡಿದ್ದಾರೆ. ಸದ್ಯ ಪ್ರಕರಣ ಪೊಲೀಸರ ಅಂಗಣದಲ್ಲಿದೆ.