ಯಲ್ಲಾಪುರದಲ್ಲಿ ಆಲದ ಮರ ಉರುಳಿ ಗರ್ಭಿಣಿ ಸಾವಿತ್ರಿ (೨೮) ಮೃತ್ಯು. ಏಳು ಮಕ್ಕಳಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ. ಹುಬ್ಬಳ್ಳಿಗೆ ಚಿಕಿತ್ಸೆಗೆ ರವಾನೆ. ಮನೆಗೆ ನಡೆದು ಹೋಗುವಾಗ ದುರ್ಘಟನೆ.
ಯಲ್ಲಾಪುರ (ಸೆ.9): ಹೆದ್ದಾರಿ ಬದಿಯ ಬೃಹತ್ ಆಲದಮರ ಉರುಳಿ ಗರ್ಭಿಣಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಡೊಮಗೆರೆ ಮತ್ತು ಕಿರವತ್ತಿ ನಡುವೆ ಸೋಮವಾರ ಸಂಜೆ ನಡೆದಿದೆ. ಘಟನೆಯಲ್ಲಿ ಅಂಗನವಾಡಿಯ ಏಳು ಮಕ್ಕಳಿಗೆ ಗಾಯಗಳಾಗಿವೆ. ೫ ತಿಂಗಳ ಗರ್ಭಿಣಿ ಸಾವಿತ್ರಿ ಬಾಬು ಖರಾತ್ (೨೮) ಮೃತರು. ಸ್ವಾತಿ ಬಾಬು ಖರಾತ್, ಘಾಟು ಲಕ್ಕು ಕೊಕರೆ, ಶ್ರಾವಣಿ ಬಾಬು ಖರಾತ್, ಶಾಂಭವಿ ಬಾಬು ಖರಾತ್ ಅವರಿಗೆ ಹೆಚ್ಚಿನ ಪೆಟ್ಟಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಸಾನ್ವಿ ಬಾಬು ಕೊಕರೆ, ವಿನಯ ಲಕ್ಕು ಖರಾತ್, ಅನುಶ್ರೀ ಮಾಂಬು ಕೊಕರೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸಂಜೆ ವೇಳೆ ನಡೆದುಕೊಂಡು ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ನಾಲ್ವರು ಮಕ್ಕಳಿಗೆ ಹೆಚ್ಚಿನ ಪೆಟ್ಟಾಗಿದ್ದು, ಉಳಿದವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಇದೇ ವೇಳೆ ಗರ್ಭಿಣಿ ಕೂಡ ಇದೇ ಮಾರ್ಗದಲ್ಲಿ ತೆರಳುತ್ತಿದ್ದು, ಮರದ ಕೆಳಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ನರೇಂದ್ರ ಪವಾರ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಸ್ಟೇಟಸ್ ಹಾಕಿ ಕಟ್ಟಡದಿಂದ ಜಿಗಿದು ಯುವತಿ ಆತ್ಮ೧ಹತ್ಯೆ!
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿ, ಯುವತಿಯೊಬ್ಬಳು ಕಟ್ಟಡದಿಂದ ಜಿಗಿದು ಆತ್ಮ೧ಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಂಗಳೂರಲ್ಲಿ ನಡೆದಿದೆ. ಆತ್ಮ೧ಹತ್ಯೆ ಮಾಡಿಕೊಂಡ ಯುವತಿಉ ಖುಷಿ ಎಂದು ಗುರುತಿಸಲಾಗಿದೆ. ‘ನನ್ನ ಮನೆಯವರೇ ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ, ಬೇರೆಯವರಿಂದ ನಿರೀಕ್ಷಿಸುವುದೇ ಸಾಧ್ಯವೇ?’ ಎಂದು ಜಾಲತಾಣದಲ್ಲಿ ಸ್ಟೇಟಸ್ ಹಾಕಿ ಬಳಿಕ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಯುವತಿ ಕಟ್ಟಡದಿಂದ ಜಿಗಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
