Asianet Suvarna News Asianet Suvarna News

ಯಾದಗಿರಿ: ಪತ್ರಗಳನ್ನ ತಲುಪಿಸದೇ ನಿರ್ಲಕ್ಷ್ಯದಿಂದ ರಸ್ತೆಗೆ ಬಿಸಾಡಿದ್ರಾ ಪೋಸ್ಟ್‌ಮ್ಯಾನ್!?

ಅಂಚೆ ಪತ್ರಗಳನ್ನ ಸರಿಯಾದ ವಿಳಾಸಕ್ಕೆ ತಲುಪಿಸದೇ ಪೋಸ್ಟ್‌ಮ್ಯಾನ್ ರಸ್ತೆ ಮೇಲೆ ಬಿಸಾಡಿದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ನಡೆದಿದೆ. ವಿಶಾಲಾಕ್ಷಮ್ಮ, ಪತ್ರಗಳನ್ನು ಗ್ರಾಮದಲ್ಲಿ ವಿತರಿಸದೇ ರಸ್ತೆ ಪಾಲು ಮಾಡಿದ್ದಾರೆಂದು ಆರೋಪಿಸಲಾಗಿದೆ

Postman negligence Konkal villagers demand action against her at yadgir district rav
Author
First Published May 26, 2024, 1:00 PM IST

ಯಾದಗಿರಿ (ಮೇ.26): ಅಂಚೆ ಪತ್ರಗಳನ್ನ ಸರಿಯಾದ ವಿಳಾಸಕ್ಕೆ ತಲುಪಿಸದೇ ಪೋಸ್ಟ್‌ಮ್ಯಾನ್ ರಸ್ತೆ ಮೇಲೆ ಬಿಸಾಡಿದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ನಡೆದಿದೆ.

ವಿಶಾಲಾಕ್ಷಮ್ಮ, ಪತ್ರಗಳನ್ನು ಗ್ರಾಮದಲ್ಲಿ ವಿತರಿಸದೇ ರಸ್ತೆ ಪಾಲು ಮಾಡಿದ್ದಾರೆಂದು ಆರೋಪಿಸಲಾಗಿದೆ. ಕೊಂಕಲ್ ಗ್ರಾಮದಲ್ಲಿ ಪೋಸ್ಟ್‌ಮ್ಯಾನ್ ಆಗಿಕಾರ್ಯನಿರ್ವಹಿಸುತ್ತಿರುವ ಮಹಿಳೆ. ನಿನ್ನೆ ಸಂಜೆ ಅಂಚೆ ಕಚೇರಿಯಲ್ಲಿ ಪತ್ರಗಳನ್ನ ವಿತರಣೆ ಮಾಡುವಂತೆ ನೀಡಲಾಗಿತ್ತು. ಅದರಂತೆ ಗ್ರಾಮಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಪತ್ರಗಳನ್ನ ನೀಡಬೇಕಿತ್ತು. ಆದರೆ ನಿರ್ಲಕ್ಷ್ಯದಿಂದ ವಿತರಣೆ ಮಾಡದೇ ಅಂಚೆ ಪತ್ರಗಳನ್ನ ರಸ್ತೆ ಮೇಲೆ ಎಸೆದಿದ್ದಾರೆಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಬಿದ್ದಿರುವ ಪತ್ರಗಳು ಒಂದು ದಿನ ಕಳೆದರೂ ಅವುಗಳನ್ನು ಸಂಗ್ರಹಿಸಿ ತಲುಪಿಸದೇ ಸಂಪೂರ್ಣ ನಿರ್ಲಕ್ಷ್ಯ ಮಾಡಿರುವ ಮಹಿಳೆ. ರಸ್ತೆಯಲ್ಲಿ ಬಿದ್ದ ಅಂಚೆ ಪತ್ರಗಳನ್ನು ಸ್ಥಳೀಯರು ಸಂಗ್ರಹಿಸಿ ರಕ್ಷಣೆ ಮಾಡಿದ್ದಾರೆ. ನಿರ್ಲಕ್ಷ್ಯವಹಿಸಿದ ಪೋಸ್ಟ್‌ಮ್ಯಾನ್ ಮಹಿಳೆ ಮೇಲೆ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಯಾದಗಿರಿ: ಮಿನರಲ್ ವಾಟರ್ ಬಾಟೆಲ್‌ನಲ್ಲಿ ಸತ್ತ ಜಿರಳೆ ಪತ್ತೆ!

ಆಧುನಿಕ ಜಗತ್ತು ಎಷ್ಟೇ ಮುಂದುವರಿದರು. ಪಿಂಚಣಿ, ಸರ್ಕಾರದ ಕೆಲಸ ಕಾರ್ಯಗಳು, ಬ್ಯಾಂಕಿಂಗ್ ಸೇವೆಗಳು ಈಗಲೂ ಹೆಚ್ಚು ಅಂಚೆ ಇಲಾಖೆಯನ್ನೇ ಆವಲಂಬಿಸಿವೆ ಹೀಗಿರುವಾಗ ಅಂಚೆಪತ್ರಗಳನ್ನ ನಿರ್ಲಕ್ಷ್ಯ ಮಾಡುವಂತಿಲ್ಲ ಬಿಸಾಡುವಂತಿಲ್ಲ. ಆದರೆ ಈ ರೀತಿ ರಸ್ತೆ ಮೇಲೆ ಚೆಲ್ಲಾಪಿಲ್ಲಿ ಎಸೆದಿರುವುದು ಮತ್ತು ಒಂದು ದಿನವಾದರೂ ಪತ್ರಗಳನ್ನ ಸಂಗ್ರಹಿಸಿ ವಿಳಾಸಕ್ಕೆ ತಲುಪಿಸಿದಿರುವುದು ನಿರ್ಲಕ್ಷ್ಯ, ಕರ್ತವ್ಯಲೋಪ ಎಸೆಗಿರುವ ಪೋಸ್ಟ್ ಮ್ಯಾನ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.

Latest Videos
Follow Us:
Download App:
  • android
  • ios