Asianet Suvarna News Asianet Suvarna News

ಚಿಕ್ಕಬಳ್ಳಾಪುರ: ಬಡವರ ಹಣವನ್ನು ನುಂಗಿ‌ದ ಪೋಸ್ಟ್ ಮ್ಯಾನ್

ಚಿಕ್ಕಬಳ್ಳಾಪುರ: ಬಡವರ ಹಣವನ್ನು ನುಂಗಿ‌ದ ಪೋಸ್ಟ್ ಮ್ಯಾನ್
ಚಿಕ್ಕಬಳ್ಳಾಪುರ ‌ನಗರದ ಕಂದವಾರದಲ್ಲಿ ಘಟನೆ
ಮಹಿಳೆಯರು ‌ಉಳಿತಾಯ ಮಾಡಿದ್ದ ಹಣವನ್ನೇ ನುಂಗಿದ ಭೂಪ

postman  Cheating Rs 13 Lakh to Peoples at Chikkaballapura  rbj
Author
Bengaluru, First Published Apr 25, 2022, 11:13 PM IST

ವರದಿ: ರವಿಕುಮಾರ್ ವಿ

ಚಿಕ್ಕಬಳ್ಳಾಪುರ, (ಏ.25):
ಪೋಸ್ಟ್ ಆಪೀಸ್ ಕೇಂದ್ರ ಸರ್ಕಾರದ್ದು ಅಂತಾ ಜನರು ನಂಬಿಕೆಯಿಂದ ತಾವು ಕೂಲಿ ಮಾಡಿಕೊಂಡು ಸಂಪಾದನೆಯಲ್ಲಿ ಉಳಿಸಿಕೊಂಡಿದ್ದ ಹಣವನ್ನು ಡೆಪಾಸಿಟ್ ಮಾಡುತ್ತಿದ್ರು.. ಈ ಹಣದಿಂದ ಮಕ್ಕಳ ವಿದ್ಯಾಭ್ಯಾಸ, ಮದುವೆ ಹೀಗೆ ಕಷ್ಟ ಕಾಲದಲ್ಲಿ ಹಣವನ್ನು ಉಪಯೋಗಪಡಿಸಿಕೊಳ್ಳೋಣ ಅಂತಾ ಕನಸು ಕಂಡಿದ್ದ ಜನರಿಗೆ ಪೋಸ್ಟ್ ಮ್ಯಾನ್ ವೊಬ್ಬ ಪಂಗನಾಮ ಹಾಕಿರೋ ಘಟನೆ ಚಿಕ್ಕಬಳ್ಳಾಪುರ ನಗರದ ಕಂದವಾರ ಗ್ರಾಮದಲ್ಲಿ ನಡೆದಿದೆ.

ಕಂದವಾರ ಗ್ರಾಮದಲ್ಲಿ ನ ಪೋಸ್ಟ್ ಆಪೀಸ್ನಲ್ಲಿ ಪ್ರತಿದಿನ ತಾವು ದುಡಿದ ಹಣದಲ್ಲಿ ಬಡಮಧ್ಯಮ ವರ್ಗದ ಜನ ಒಂದಿಷ್ಟು ಅಂತ ಉಳಿತಾಯ ಮಾಡಿ ಠೇವಣಿ ಮಾಡ್ತಿದ್ರು. ಕಚೇರಿಯಲ್ಲಿದ್ದ ಪೋಸ್ಟ್ ಮ್ಯಾನ್ ಜನರಿಂದ ಹಣಕಟ್ಟಿಸಿಕೊಳ್ಳುತ್ತಿದ್ದ, ಆದ್ರೆ ಅವರ ಬಳಿ ಡೆಪಾಸಿಟ್ ವೇಳೆ ವಿತ್ ಡ್ರಾ ಪಾರಂಗೂ ಸಹಿಹಾಕಿಸಿಕೊಂಡು ಈತ ಗುಳುಂ ಮಾಡಿದ್ದಾನೆ.

ಚಾಮರಾಜನಗರ: ಜಮೀನು ಮಾರಿ ಸಾಲ ತೀರಿಸಿ ಎಂದು ಪಟ್ಟಿ ಮಾಡಿಟ್ಟು ಯುವಕ ಆತ್ಮಹತ್ಯೆ

ಪೋಸ್ಟ್ ಅಫೀಸ್‍ಗೆ ಹೋಗಿ ಹಣ ಡ್ರಾ ಮಾಡುವುದಕ್ಕೆ ಹೋದಾಗ ಖಾತೆಯ್ಲಲಿ ಹಣ ಇಲ್ಲದಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.. ಕಂದವಾರ ಗ್ರಾಮದ 30 ಜನರ ಬಳಿ ಸುಮಾರು 13 ಲಕ್ಷ ಹಣವನ್ನ ಸ್ವಂತಕ್ಕೆ ಬಳಸಿಕೊಂಡಿರೋ ಬಗ್ಗೆ ಜಯರಾಜ್ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಜಮೀನು ಮಾರಿ ಹಣ ವಾಪಾಸ್ ಮಾಡುವ ಬಗ್ಗೆಯೂ ಭರವಸೆ ನೀಡಿದ್ದಾನೆ. ಜಯರಾಜ್ ನ ಅಧಿಕಾರ ದುರುಪಯೋಗದ ವಿರುದ್ಧ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳೇ ಮೌನವಹಿಸಿರೋದು ದುರದೃಷ್ಟಕರ.. ಆದ್ರೆ ಹಣವನ್ನು ಕಳೆದುಕೊಂಡಿರೋ ಜನರೆಲ್ಲಾ ಈಗ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಜಯರಾಜ್ ವಿರುದ್ಧ ದೂರು ದಾಖಲಿಸಿದ್ದಾರೆ..

ಮಗಳ ಮದುವೆಗಾಗಿ ಇಟ್ಟಿದ್ದ ಹಣ ಮಂಗಮಾಯ
ಭೋಗನಧೀಶ್ವರ ದೇವಸ್ಥಾನದಲ್ಲಿ ಚಪ್ಪಲಿ ಬಿಡೋ ಜಾಗದಲ್ಲಿ ಕೆಲಸ ಮಾಡಿಕೊಂಡಿದ್ದ ಗೌರಮ್ಮ ಎಂಬಾಕೆ ತನ್ನ ಮಗಳ ಮದುವೆಗೆಂದು ಸಂಪಾದನೆ ಮಾಡಿಕೊಂಡಿದ್ದ ಹಣವನ್ನು ಪೋಸ್ಟ್ ಆಪೀಸ್ ನಲ್ಲಿ  ಡೆಪಾಸಿಟ್ ಮಾಡಿದ್ದರು.. ಆದ್ರೆ ಮಗಳ ಮದುವೆ ಹತ್ತಿರ ಬಂದಾಗ ಪೋಸ್ಟ್ ಆಪೀಸ್ ನಲ್ಲಿ ಡೆಪಾಸಿಟ್ ಮಾಡಿದ್ದ 2.20 ಲಕ್ಷ ಹಣ ಖಾತೆಯಿಂದ ಮಾಯವಾಗಿದೆ. ಮಗಳ ಮದುವೆಗೆ ವಡವೆ ಮಾಡಿಸಲೆಂದು ಹಣ ಇಟ್ಟಿದ್ದೆವು ಆದ್ರೆ ಈಗ ಈ ಕುಟುಂಬಕ್ಕೆ ದಿಕ್ಕುತೋಚದಂತಾಗಿದೆ.

ಡೆಪಾಸಿಟ್ ಮಾಡಿದ್ದ ಎಲ್ಲರು ಕೂಲಿ ಕಾರ್ಮಿಕರೇ
ಕಂದವಾರ ಪೋಸ್ಟ್ ಆಪೀಸ್ ನಲ್ಲಿ ಹಣ ಹೂಡಿಕೆ ಮಾಡುತ್ತಿದ್ದವರೆಲ್ಲರು ಕೂಡ ದಿನಗೂಲಿ ನೌಕರರೇ ಆಗಿದ್ದಾರೆ. ಗಾರೆ ಕೆಲಸ ಸೇರಿದಂತೆ ವಿವಿಧ ಕೆಲಸ ಮಾಡಿಕೊಂಡಿದ್ದ ಜನರು ಕುಟಂಬ ನಿರ್ವಹಣೆ ಮಾಡಿಕೊಂಡು ಉಳಿಸಿದ್ದ ಮಹಿಳೆಯರು ಪೋಸ್ಟ್ ಆಪೀಸ್ ನಲ್ಲಿ ಡೆಪಾಸಿಟ್ ಮಾಡಿದ್ದರು.

 ಎಲ್ಲಾ ಫಲಾನುಭವಿಗಳು ಮಹಿಳೆಯರೇ
ಪೋಸ್ಟ್ ಆಪೀಸ್ ನಲ್ಲಿ ಹಣ ಹೂಡಿಕೆ ಮಾಡಿದ್ದ 30 ಮಂದಿಯೂ ಮಹಿಳೆಯರೇ ಆಗಿದ್ದು, ಕುಟುಂಬ ಪೋಷಣೆಗಾಗಿ ಅಲ್ಪಸ್ವಲ್ಪ ಹಣ ಕೂಡಿಟ್ಟುಕೊಂಡಿದ್ದರು. ಈ ಹಣವನ್ನು ನಮ್ಮ ಬಳಿ ಇಟ್ಟುಕೊಂಡಿದ್ರೆ ಖರ್ಚಾಗುತ್ತೆ ಅಂತಾ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡೋ ಮೂಲಕ ಉಳಿತಾಯ ಮಾಡೋಣ ಅಂತಾ ಇದ್ದ ಬಡ ಮಹಿಳೆಯರು ಈಗ ಹಣವಿಲ್ಲದೇ ಕಂಗಾಲಾಗಿದ್ದಾರೆ.

ಎರಡು ತಿಂಗಳಲ್ಲಿ ಹಣ ವಾಪಸ್ ನೀಡೋದಾಗಿ ರಾಜಿ ಸಂಧಾನವಾಗಿತ್ತು. ತಮ್ಮ ಅಕೌಂಟ್ ಗಳಲ್ಲಿ ಹಣ ಮಂಗಮಾಯಾವಾಗಿರೋದು ಜನರ ಗಮನಕ್ಕೆ ಬರಿತಿದ್ದಂತೆ ಎಚೆತ್ತ ಜಯರಾಜ್ ಅಧಿಕಾರಿಗಳು ಹಾಗೂ ಕಂದವಾರ ಗ್ರಾಮಸ್ಥರೆಲ್ಲರು ಸೇರಿ ಸಂಧಾನ ಮಾಡಿದ್ದರು. ಈ ವೇಳೆ ಜಯರಾಜ್ ಹಾಗೂ ಕುಟುಂಬದವರೆಲ್ಲ ಬಂದು ಜಮೀನು ಮಾರಿ ನಿಮ್ಮ ಹಣ ವಾಪಸ್ಸು ನೀಡುವುದಾಗಿ ಹೇಳಿದ್ದರು, ಆದ್ರೆ ಎರಡು ತಿಂಗಳು ಕಳೆದ್ರು ಜನರಿಗೆ ಮಾತ್ರ ಜಯರಾಜ್ ಇನ್ನೂ ಹಣ ನೀಡಿಲ್ಲ.

ಪೋಸ್ಟ್ ಆಫೀಸ್ ಅಧಿಕಾರಿಗಳ ನಿರ್ಲಕ್ಷ್ಯ
ಪೊಸ್ಟ್ ಮ್ಯಾನ್ ವೊಬ್ಬ ತಮ್ಮ ಗ್ರಾಹಕರ ಸುಮಾರು 13 ಲಕ್ಷ ಹಣ ನುಂಗಿದ್ದರು.  ಇಂತಹ ಗಂಭೀರ ಪ್ರಕರಣವನ್ನು  ತಲೆಗೆ ಹಾಕಿಕೊಳ್ಳದಿರೋದು ಸಾರ್ವಜನಿಕರ ವಲಯದಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ವಿಚಾರ ಗಮನಕ್ಕೆ ಬಂದರು ಕೂಡ  ಕ್ರಮಜರುಗಿಸಿಲ್ಲದಿರೋದು ಅನುಮಾನ ಮೂಡಿಸಿದೆ.

60 ಸಾವಿರ ಡ್ರಾ ಮಾಡಿ 5 ಸಾವಿರ ಕೊಟ್ಟಿರೋ ಭೂಪ
ಓಂ ಶಕ್ತಿ ದೇವಸ್ಥಾನಕ್ಕೆ ಹೋಗಬೇಕು 5 ಸಾವಿರ ಹಣ ಬೆಕೆಂದು ಪೋಸ್ಟ್ ಆಪೀಸ್ ಗೆ  ಹೋದ್ರೆ ಜಯರಾಜ್ ಚೆಕ್ ತೆಗೆದುಕೊಂಡು ಬನ್ನಿ ಹಣ ಕೊಡ್ತೇನೆ ಎಂದು ಹೇಳಿದ್ರು. ಚೆಕ್ ಗೆ ಸಹಿಹಾಕಿಸಿಕೊಂಡು 5 ಸಾವಿರ ಹಣ ನೀಡಿದ್ದಾನೆ, ಆದ್ರೆ ಜಯರಾಜ್  ಸುಜಾತಮ್ಮ ಎಂಬುವರ ಹೆಸರಿನಲ್ಲಿ 5 ಸಾವಿರ ಹಣ ಬದಲು ಖಾತೆಯಲಿದ್ದ ಹಣವನ್ನು ಡ್ರಾ ಮಾಡಿಕೊಂಡು ಮಜಾ ಮಾಡಿದ್ದಾನೆ..

ಚಿಕ್ಕಬಳ್ಳಾಪುರ ‌ನಗರ‌ ಠಾಣೆಗೆ ದೂರು
ಎರಡು ತಿಂಗಳಲ್ಲಿ ‌ಹಣ ನೀಡುತ್ತೇನೆಂದು ಹೇಳಿ ರಾಜಿ ಮಾಡಿಕೊಂಡಿದ್ದ ಜಯರಾಜ್ ಈಗ ಹಣ ನೀಡದೇ ಸತಾಯಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹಿಳೆಯರು ‌ಜಯರಾಜ್ ವಿರುದ್ದ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Follow Us:
Download App:
  • android
  • ios