ಕಲಘಟಗಿ(ಫೆ.17): ಪಟ್ಟಣದ ಬಸ್‌ ನಿಲ್ದಾಣದ ಹತ್ತಿರ ಇರುವ ಅಂಚೆ ಕಚೇ​ರಿಗೆ ಸೋಮವಾರ ತಡ​ರಾ​ತ್ರಿ ಕನ್ನ ಹಾಕಿದ ಖದೀ​ಮರು 1.40 ಲಕ್ಷ ನಗದು ಹಾಗೂ ಸಿಸಿ ಕ್ಯಾಮೆರಾ ಡಿವಿ​ಆರ್‌ ಕಳ್ಳ​ತನ ಮಾಡಿ​ದ್ದಾರೆ.

ಅಂಚೆ ಕಚೇ​ರಿಯ ಹಿಂಬ​ದಿ​ಯ ಕಿಟ​ಕಿಯ ಕಬ್ಬಿ​ಣದ ಸರ​ಳು​ಗ​ಳನ್ನು ಮುರಿದು ಒಳ​ನುಗ್ಗಿ ಈ ಕಳ್ಳ​ತನ ಮಾಡಿ​ದ್ದಾರೆ. ಸಿಸಿ ಕ್ಯಾಮೆರಾಕ್ಕೆ ಬಟ್ಟೆ ಮುಸುಕು ಹಾಕಿ ಭದ್ರ​ತೆಯ ಕೊಠ​ಡಿ​ಯ​ಲ್ಲಿದ್ದ ಸೇಫ್‌ ಲಾಕರ್‌ ಒಡೆದು ಈ ಕಳ್ಳ​ತನ ನಡೆ​ಸಿ​ದ್ದಾ​ರೆ. ಜತೆಗೆ ಸುಳಿವು ಬಿಡ​ಬಾ​ರ​ದೆಂದು ಸಿಸಿ ಟಿವಿ ಡಿವಿ​ಆರ್‌ ಸಹ ಕದ್ದೊ​ಯ್ದಿ​ದ್ದಾರೆ.

ಪೊಲೀಸ್‌ ಠಾಣೆ ಪಕ್ಕದಲ್ಲೇ ವಾಸವಿದ್ದ ಎಟಿಎಂ ಕಳ್ಳ..!

ಈ ವಿಷಯ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಜಿಲ್ಲಾ ಉಪಪೊಲೀಸ್‌ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿಹಾಗೂ ಅಂಚೆ ಕಚೇ​ರಿಯ ಮೇಲಧಿಕಾರಿಗಳು ಬಂದು ಪರಿಶೀಲಿಸಿದರು. ಈ ಕುರಿತು ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಪ್ರಭು ಸೂರಿನ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.