ಹುಬ್ಬಳ್ಳಿ(ಮೇ.17): ಇಲ್ಲಿನ ಹಳೆ ಬಾದಾಮಿ ನಗರದ ಯುವತಿ ಹೆಸರಿನಲ್ಲಿ ಎರಡು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಇತರರಿಗೆ ಅಶ್ಲೀಲ ಸಂದೇಶ ಕಳಿಸಿ ಯುವತಿ ಬಗ್ಗೆ ತಪ್ಪು ಕಲ್ಪನೆ ಬರುವಂತೆ ಮಾಡಿದ ಬಗ್ಗೆ ಇಲ್ಲಿನ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಯುವತಿಗೆ ಈ ಮೊದಲು ಪರಿಚಿತ ಯುವಕನ ಖಾತೆಯಿಂದ ಟ್ಯಾಗ್‌ ಮಾಡಿ ಪ್ರೀತಿಸುವುದಾಗಿ ಸಂದೇಶ ಕಳಿಸಿದ್ದರು. ಈ ಬಗ್ಗೆ ಪರಿಚಿತ ಯುವಕ ಹ್ಯಾಕ್‌ ಮಾಡಿ ಈ ರೀತಿ ಮಾಡಿದ್ದಾರೆ.

ಹುಬ್ಬಳ್ಳಿ: ಹಣಕಾಸಿನ ವಿಷಯಕ್ಕೆ ಗಲಾಟೆ, ಚಾಕು ಇರಿದು ಯುವಕನ ಕೊಲೆ

ತನಗೇನೂ ಗೊತ್ತಿಲ್ಲ ಎಂದು ಹೇಳಿದ್ದ. ಬಳಿಕ ಯುವತಿ ತನ್ನ ಎಫ್‌ಬಿ ಖಾತೆಯನ್ನು ಡಿಲಿಟ್‌ ಮಾಡಿಸಿದ್ದಳು. ಇದಾದ ಬಳಿಕ ಅಪರಿಚಿತರು ಯುವತಿ ಹೆಸರಲ್ಲಿ ಎರಡು ನಕಲಿ ಖಾತೆ ತೆರೆದು ಆಕೆಯ ಸಂಬಂಧಿಕರಿಗೆ, ಸಹೋದರನಿಗೆ ಕೂಡ ಅಶ್ಲೀಲ ಸಂದೇಶ ಕಳಿಸಿದ್ದಾರೆ ಎಂದು ದೂರಲ್ಲಿ ದಾಖಲಾಗಿದೆ. ಸೈಬರ್‌ ಪೊಲೀಸರು ತನಿಖೆ ಕೈಗೊಂಡಿದ್ದಾರೆ.