ಹೊಸದುರ್ಗ(ಆ.10): ಅಕ್ರಮವಾಗಿ ಬೆಳೆದಿದ್ದ ಸುಮಾರು 20 ಕೆ.ಜಿ.ಗಾಂಜಾ ಬೆಳೆಯನ್ನು ತಾಲೂಕಿನ ಸಿದ್ದಪ್ಪನಹಟ್ಟಿಯಲ್ಲಿ ಭಾನುವಾರ ಹೊಸದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿದ್ದಪ್ಪನಹಟ್ಟಿ ಗ್ರಾಮದ ಅಂಜನಪ್ಪ ಎಂಬಾತ ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದು, ಶೇಂಗಾ ಹಾಗೂ ಜೋಳದ ಬೆಳೆಯ ನಡುವೆ ಗಾಂಜಾ ಬೆಳೆದಿದ್ದ ಎನ್ನಲಾಗಿದೆ. ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿ ಆಧರಿಸಿ ಜಮೀನಿನ ಮೇಲೆ ದಾಳಿ ನಡೆಸಿದ ಪೊಲೀಸರು 20 ಕೆ.ಜಿ.ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. 

ಚಿಕ್ಕಮಗಳೂರು: ಪೊಲೀಸರ ದಾಳಿ, 12.50 ಲಕ್ಷ ಮೌಲ್ಯದ 50 ಕೆ.ಜಿ ಗಾಂಜಾ ಜಪ್ತಿ

ಆರೋಪಿ ಅಂಜನಪ್ಪ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್‌ ತಿಪ್ಪೆಸ್ವಾಮಿ, ಪಿಎಸ್‌ಐ ಶಿವಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.