ಚಿಕ್ಕಮಗಳೂರು: ಪೊಲೀಸರ ದಾಳಿ, 12.50 ಲಕ್ಷ ಮೌಲ್ಯದ 50 ಕೆ.ಜಿ ಗಾಂಜಾ ಜಪ್ತಿ
ಗಾಂಜಾ ಅಡ್ಡೆ ಮೇಲೆ ಪೊಲೀಸರ ದಾಳಿ| ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿ ಬೀಡು ಹೋಬಳಿಯ ಮೇಲು ಪೇಟೆ ಗ್ರಾಮದಲ್ಲಿ ನಡೆದ ದಾಳಿ| ನಾಲ್ವರ ಬಂಧನ| ವೇಳೆ ಒಂದು ಕಾರು, ಒಂದು ಬೈಕ್, ಪಿಕಪ್ ವಾಹನವನ್ನ ವಶಕ್ಕೆ ಪಡೆದ ಪೊಲೀಸರು|
ಚಿಕ್ಕಮಗಳೂರು(ಜು.11): ಗಾಂಜಾ ಅಡ್ಡೆ ಮೇಲೆ ದಾಳಿ ಮಾಡುವ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಗಾಂಜಾವನ್ನು ಪೋಲಿಸರು ವಶ ಪಡಿಸಿಕೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿ ಬೀಡು ಹೋಬಳಿಯ ಮೇಲು ಪೇಟೆ ಗ್ರಾಮದಲ್ಲಿ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ಸಿಇಎಸ್ ಪೋಲಿಸರು, ದಾಳಿ ಮಾಡಿ ಬರೋಬ್ಬರಿ 12.50 ಲಕ್ಷ ಮೌಲ್ಯದ 50 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದು, ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಂದಗಿ: ಅಕ್ರಮ ಗಾಂಜಾ ಸಾಗಾಟ, ಓರ್ವನ ಬಂಧನ
ಈ ವೇಳೆ ಮೊಹಿದ್ ಖಾನ್, ಅಕ್ಬರ್ ಪಾಷಾ, ಶಾಹೀದ್ ಖಾನ್, ಪ್ರಭ ಈ ನಾಲ್ಕು ಜನರನ್ನು ಪೋಲಿಸರು ಬಂಧಿಸಿದ್ದು, ಇವರಿಂದ ಜಿಲ್ಲೆಯಲ್ಲಿ ನಡೆಯುತ್ತಿದ್ದ ಗಾಂಜಾ ಮಾಫಿಯಾದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಹಾಸನದ ಸಕಲೇಶಪುರದಲ್ಲಿ ಮತ್ತು ವಿವಿಧ ಭಾಗದಲ್ಲಿ ಸುಮಾರು 30 ಕೆ.ಜಿ ಗಾಂಜಾ ಮಾರಾಟ ಮಾಡಿ ಉಳಿದ 50 ಕೆ.ಜಿ ಗಾಂಜಾವನ್ನು ಮಂಗಳೂರಿನಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವ ಉದ್ದೇಶದಿಂದ ಮೂಡಿಗೆರೆಯ ಮೇಲುಪೇಟೆಯ ಮಸೀದಿ ಬಳಿ ಬಂದಿದ್ದರು.
ಈ ವೇಳೆ ಸ್ಥಳೀಯರಿಗೆ ಗಾಂಜಾ ಮಾರಾಟ ಮಾಡುವ ವೇಳೆ ಈ ದಾಳಿ ನಡೆಸಿದ್ದು, ಈ ವೇಳೆ ಒಂದು ಕಾರು, ಒಂದು ಬೈಕ್, ಪಿಕಪ್ ವಾಹನವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ತಂಡ ಆಂಧ್ರ ಪ್ರದೇಶದಿಂದ ಗಾಂಜಾವನ್ನು ತಂದು ಶಿವಮೊಗ್ಗ, ಹಾಸನ, ಮಂಗಳೂರಿನಲ್ಲಿ ಮಾರಾಟ ಮಾಡುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ
ಇನ್ನು ಯಾವ ಯಾವ ಜಿಲ್ಲೆಯಲ್ಲಿ ಇವರು ಗಾಂಜಾ ಸರಬರಾಜು ಮಾಡುತ್ತಿದ್ದರು ಎಂಬುದನ್ನು ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಆದರೇ ಇದೇ ಮೊದಲ ಬಾರಿಗೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಚಿಕ್ಕಮಗಳೂರು ಪೋಲಿಸರು ದಾಳಿ ಮಾಡಿ, ದೊಡ್ಡ ಪ್ರಮಾಣದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಇನ್ನು ಪ್ರಗತಿಯಲ್ಲಿದ್ದು, ಆರೋಪಿಗಳಿಂದ ಹೆಚ್ಚಿನ ಮಾಹಿತಿಯನ್ನು ಸಿಇಎಸ್ ಪೋಲಿಸರು ಕಲೆ ಹಾಕುತ್ತಿದ್ದಾರೆ.
#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"