ಡಿ.ಕೆ. ಸುರೇಶ್ ತಂಗಿಯ ಹೆಸರಲ್ಲಿ ಚಿನ್ನ ವಂಚನೆ: ಐಶ್ವರ್ಯಳ ಐಷಾರಾಮಿ ಕಾರು, 29 ಕೆಜಿ ಬೆಳ್ಳಿ ವಶ
ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಐಶ್ವರ್ಯ ಗೌಡಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದು, ಬಿಎಂಡಬ್ಲ್ಯು, ಆಡಿ ಕಾರುಗಳು ಹಾಗೂ 29 ಕೆ.ಜಿ. ಬೆಳ್ಳಿ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆದರೆ, ವಂಚನೆ ಕೃತ್ಯಗಳು ಬಯಲಾದ ಬೆನ್ನಲ್ಲೇ ಎಚ್ಚೆತ್ತು ತನ್ನ ಮನೆಯಿಂದ ಬಂಗಾರದ ಒಡವೆಗಳನ್ನು ಸಾಗಿಸಿದ್ದಾಳೆ. ಹೀಗಾಗಿ 150 ಗ್ರಾಂ. ಮಾತ್ರ ಚಿನ್ನದ ಆಭರಣ ಸಿಕ್ಕಿದೆ.
ಬೆಂಗಳೂರು(ಜ.02): ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿ ಚಿನ್ನದ ವ್ಯಾಪಾರಿಗೆ 14 ಕೋಟಿ ರು. ವಂಚಿಸಿದ ಪ್ರಕರಣ ಸಂಬಂಧ ಆರೋಪಿ ಐಶ್ವರ್ಯ ಗೌಡಳ ಮನೆಗಳ ಮೇಲೆ ಬುಧವಾರ ಪೊಲೀಸರು ದಾಳಿ ನಡೆಸಿದ್ದು, ಆರೋಪಿ ಬಳಿ ಕೋಟ್ಯಂತರ ರು. ಮೌಲ್ಯದ ಐಷರಾಮಿ ಕಾರುಗಳು ಪತ್ತೆಯಾಗಿವೆ.
ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಐಶ್ವರ್ಯ ಗೌಡಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದು, ಬಿಎಂಡಬ್ಲ್ಯು, ಆಡಿ ಕಾರುಗಳು ಹಾಗೂ 29 ಕೆ.ಜಿ. ಬೆಳ್ಳಿ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆದರೆ, ವಂಚನೆ ಕೃತ್ಯಗಳು ಬಯಲಾದ ಬೆನ್ನಲ್ಲೇ ಎಚ್ಚೆತ್ತು ತನ್ನ ಮನೆಯಿಂದ ಬಂಗಾರದ ಒಡವೆಗಳನ್ನು ಸಾಗಿಸಿದ್ದಾಳೆ. ಹೀಗಾಗಿ 150 ಗ್ರಾಂ. ಮಾತ್ರ ಚಿನ್ನದ ಆಭರಣ ಸಿಕ್ಕಿದೆ.
ಬೆಂಗಳೂರು 14 ಕೆಜಿ ಚಿನ್ನ ವಂಚನೆ ಕೇಸ್: ಐಶ್ವರ್ಯಾ ಗೌಡ ವಿರುದ್ಧ ಡಿ.ಕೆ. ಸುರೇಶ್ ದೂರು
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹೆಸರನ್ನು ಬಳಸಿಕೊಂಡು ಚಿನ್ನದ ವ್ಯಾಪಾರಿ ವನಿತಾ ಐತಾಳ್ ಅವರಿಗೆ 14 ಕೋಟಿ ರು. ಮೌಲ್ಯದ ಚಿನ್ನ ಖರೀದಿಸಿ ವಂಚಿಸಿದ ಆರೋಪದ ಮೇರೆಗೆ ಐಶ್ವರ್ಯ ಗೌಡ ದಂಪತಿಯನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು, ಆರೋಪಿ ಮನೆ ಶೋಧನೆಗೆ ನಗರದ ಎಸಿಎಂಎಂ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿದ್ದರು.
ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಹಾಗೂ ತಲಘಟ್ಟಪುರದಲ್ಲಿರುವ ಐಶ್ವರ್ಯ ಗೌಡಳಿಗೆ ಸೇರಿದ ಎರಡು ಮನೆಗಳ ಮೇಲೆ ಬುಧವಾರ ದಿಢೀರ್ ದಾಳಿ ನಡೆಸಿ ಪೊಲೀಸರು ತಪಾಸಣೆ ನಡೆಸಿದರು. ಆ ವೇಳೆ ಐಷಾರಾಮಿ ಕಾರುಗಳು ಹಾಗೂ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರಲ್ಲಿ ಮತ್ತೊಂದು ವಂಚನೆ: ಐಶ್ವರ್ಯ ವಿರುದ್ಧ ಕೇಸ್
ಬೆಂಗಳೂರು: ಚಿನ್ನದಂಗಡಿ ಮಾಲಕಿಯಿಂದ 8.41 ಕೋಟಿ ರು. ಮೌಲ್ಯದ 14.6 ಕೆ.ಜಿ.ಚಿನ್ನ ಸಾಲ ಪಡೆದು ವಂಚನೆ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಐಶ್ವರ್ಯಾ ಗೌಡ ದಂಪತಿಯ ಮತ್ತೊಂದು ವಂಚನೆ ಬೆಳಕಿಗೆ ಬಂದಿದೆ.
ತಾನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಮಹಿಳೆಯ ಸ್ನೇಹ ಬೆಳೆಸಿ ಬಳಿಕ ಆಕೆಯಿಂದ 3.25 ಕೋಟಿ ರು. ಹಣ ಹಾಗೂ 450 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ ಆರೋಪದಡಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜರಾಜೇಶರಿನಗರ ನಿವಾಸಿ ಶಿಲ್ಪಾ ಗೌಡ ಎಂಬುವವರು ನೀಡಿದ ದೂರಿನ ಮೇರೆಗೆ ಐಶ್ವರ್ಯ ಗೌಡ, ಆಕೆಯ ಪತಿ ಹರೀಶ್ ಮತ್ತು ಬೌನರ್ ಗಜ ಎಂಬುವವರ ವಿರುದ ವಂಚನೆ, ಮೋಸ, ಐಶ್ವರ್ಯ ಗೌಡ ನಂಬಿಕೆ ದ್ರೋಹ, ಜೀವ ಬೆದರಿಕೆ ಸೇರಿ ವಿವಿಧ ಆರೋಪಗಳಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿ.ಕೆ.ಸುರೇಶ್ ಸಹೋದರಿ ಎಂದು ನಂಬಿಸಿ ಕೋಟ್ಯಂತರ ರೂ. ವಂಚನೆ: ಬಂಗಾರಿ ದಂಪತಿ ಬಂಧನ
ಏನಿದು ದೂರು?:
ಶಿಲ್ಪಾ ಗೌಡ ನೀಡಿದ ದೂರಿನ ಅನ್ವಯ, ನಮ್ಮ ಮನೆಯ ಪಕ್ಕದ ರಸ್ತೆಯ ನಿವಾಸಿಯಾದ ಐಶ್ವರ್ಯ ಗೌಡ ಎರಡು ವರ್ಷದ ಹಿಂದೆ ನನಗೆ ಪರಿಚಯವಾಗಿದ್ದರು. ಈ ವೇಳೆ ನಾನು ಡಿ.ಕೆ.ಸುರೇಶ್ ಅವರ ತಂಗಿ ಎಂದು ಹೇಳಿಕೊಂಡಿದ್ದ ಐಶ್ವರ್ಯ ಗೌಡ, ನಾನು ಗೋಲ್ಡ್ ಬಿಜಿನೆಸ್, ಚಿಟ್ ಫಂಡ್ ವ್ಯವಹಾರ, ವಿಲ್ಲಾ ನಿರ್ಮಾಣ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದೇನೆ. ಎಲ್ಲಾ ವ್ಯವಹಾರಗಳು ಲಾಭದಾಯಕವಾಗಿದ್ದು, ನೀವು ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಪಡೆಯಬಹುದು ಹೇಳಿದ್ದರು. ಹೀಗಾಗಿ ಅವರ ಮಾತನ್ನು ನಾನು ನಂಬಿದ್ದೆ. 3.25 ಕೋಟಿ ರು. ಹಣ ವರ್ಗಾವಣೆ: ಕೆಲ ದಿನಗಳ ಬಳಿಕ ಐಶ್ವರ್ಯಾ ಗೌಡ ತನ್ನ ಬಳಿ ಚಿನ್ನ ಖರೀದಿ ಮಾಡಿದರೆ ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಕೊಡಿಸುವುದಾಗಿ ಹೇಳಿದರು.
ಆಕೆಯ ಮಾತು ನಂಬಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಪಡೆದು ಸುಮಾರು 65 ಲಕ ರು. ನಗದು ಹಾಗೂ 2.60 ಕೋಟಿ ರು. ಹಣವನ್ನು ಶ್ವೇತಾ ಗೌಡ ನೀಡಿದ್ದ ಸಾಯಿದಾ ಬಾಬು, ಧನು, ಶೀತಲ್, ಚೇತನ್, ಲಕ್ಷ್ಮಿ, ಪ್ರವೀಣ್, ಮಹೇಶ್, ಹರೀಶ್ ಹಾಗೂ ಇತರರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದೆ. ಅಂದರೆ, 2022ರ ಜನವರಿಂದ ಈವರೆಗೆ ಐಶ್ವರ್ಯಾ ಗೌಡಗೆ ಒಟ್ಟು 3.25 ಕೋಟಿ ರು. ಹಣ ನೀಡಿದ್ದೇನೆ ಎಂದು ಶಿಲ್ಪಾ ಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.