ಪೋಷಕರ ದೂರಿಗೆ ನಕ್ಕು ಸುಮ್ಮನಾದ ಪೊಲೀಸ್, ಬಾಲಕನ ದುರಂತ ಅಂತ್ಯ ಘಟನೆ ಬಿಚ್ಚಿಟ್ಟ ಕುಟುಂಬ!
10ನೇ ತರಗತಿ ಬಾಲಕನಿಗೆ ಬೆದರಿಕೆ ಇದೆ ಎಂದು ದೂರು ನೀಡಿದಾಗ ಪೊಲೀಸರು ನಕ್ಕು ಈ ಬಾಲಕನಿಗಾ? ಎಂದು ಮರು ಪ್ರಶ್ನೆ ಹಾಕಿದ್ದರು. ಇದೀಗ ಬಾಲಕನ ದುರಂತ ಅಂತ್ಯಕ್ಕೆ ಯಾರು ಹೊಣೆ ಎಂದು ಕುಟುಂಬ ಕಣ್ಣೀರಿಡುತ್ತಿದೆ.
ಫರೀದಾಬಾದ್(ಡಿ.26) ವಾಗ್ವಾದ ವಿಚಾರದಲ್ಲಿ 10ನೇ ತರಗತಿ ಬಾಲಕನ ಮಾರುಕಟ್ಟೆಯಲ್ಲಿ 14 ಬಾರಿ ಚುಚ್ಚಿ ಕೊಂದ ಘಟನೆ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಹರ್ಯಾಣದ ಫರೀದಾಬಾದ್‌ನಲ್ಲಿ ನಡೆದ ಈ ಘಟನೆಯಲ್ಲಿ 10ನೇ ತರಗತಿ ಬಾಲಕ ಅಂಶುಲ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದಾರೆ. ಇತ್ತ ಕುಟುಂಬಸ್ಥರು ಬಾಲಕನ ಕಳೆದುಕೊಂಡು ಕಣ್ಣೀರಾಗಿದ್ದಾರೆ. ಪೊಲೀಸರು ಮೊದಲೇ ದೂರು ಗಂಭೀರವಾಗಿ ಪರಿಗಣಿಸಿದ್ದರೆ ಬಾಲಕನ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಂಶುಲ್ ಪೋಷಕರು ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ಕುಟುಂಬಸ್ಥರು ಬಾಲಕನಿಗೆ ಬೆದರಿಕೆ ಇದೆ ಅನ್ನೋ ದೂರು ನೀಡಿದಾಗ ಪೊಲೀಸರು ನಕ್ಕು ಸುಮ್ಮನಾಗಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಅಂಶುಲ್ ಹಾಗೂ ಇತರ ಗುಂಪಿನ ನಡುವೆ ವಾಗ್ವಾದ ನಡೆದಿತ್ತು. ಬುದ್ದಿವಾಳ ಹೇಳಲು ಮುಂದಾಗಿದ್ದ ಅಂಶುಲ್‌ಗೆ ಗತಿ ಕಾಣಿಸಲು ಇದು ಗುಂಪಿನ ಸದಸ್ಯರು ನಿರ್ಧರಿಸಿದ್ದರು. ಅಂಶುಲ್ ಹಾಗೂ ಆತನ ಸಹೋದರಿ ಮಾರುಕಟ್ಟೆಗೆ ತೆರಳಿದಾಗ 10ಕ್ಕೂ ಹೆಚ್ಚು ಮಂದಿ ದಾಳಿ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ಅಂಶುಲ್‌ನನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಕಾರಣ ದಾಳಿ ವೇಳೆ 14 ಬಾರಿ ಚುಚ್ಚಲಾಗಿತ್ತು.
ಮೊದಲ ರಾತ್ರಿಗೂ ಮುನ್ನ 3 ಬೇಡಿಕೆ ಇಟ್ಟ ವಧು, ಕಂಗಾಲದ ಹುಡುಗನ ನೆರವಿಗೆ ಬಂದ ಪೊಲೀಸ್!
ಘಟನೆ ಕುರಿತು ದೂರು ನೀಡಿರುವ ಸಹೋದರಿ ಅಂಜಲಿ ಮಾಧ್ಯಮದ ಮುಂದೆ ನೋವು ತೋಡಿಕೊಂಡಿದ್ದಾರೆ. ಹಾಡಹಗಲೇ ದಾಳಿಯಾಗಿದೆ. ಯಾರಿಗಿದೆ ಸುರಕ್ಷತೆ? ಕೆಲ ಗುಂಪುಗಳು ಮಾದಕ ವಸ್ತು ಸೇರಿದಂತೆ ಇತರ ಅಕ್ರಮ ಚಟುವಟಿಕೆಯಲ್ಲಿ ನಿರಂತರವಾಗಿದೆ. ಇದು ಪೊಲೀಸರಿಗೆ ಗೊತ್ತಿಲ್ಲದ ವಿಚಾರವಲ್ಲ. ಆದರೆ ಕ್ರಮ ಕೈಗೊಳ್ಳುತ್ತಿಲ್ಲ. ಕೆಲ ದಿನಗಳ ಹಿಂದೆ ಅಂಶುಲ್ ಹಾಗೂ ಗುಂಪಿನ ನಡುವೆ ನಡೆದ ವಾಗ್ವಾದ ನಡೆದಿತ್ತು ಅನ್ನೋದು ಪೊಲೀಸರಿಗೆ ಗೊತ್ತಿತ್ತು. ಇಷ್ಟೇ ಅಲ್ಲ ವಾಗ್ವಾದ ಬಳಿಕ ಅಂಶುಲ್‌ಗೆ ಬೆದರಿಕೆಗಳು ಬಂದಿತ್ತು. ಈ ಕುರಿತು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಗಿತ್ತು.
10ನೇ ತರಗತಿ ಬಾಲಕನಿಗೆ ಬೆದರಿಕೆ? ಎಂದು ಮರು ಪ್ರಶ್ನಿಸಿದ ಪೊಲೀಸ್ ಎಲ್ಲರೂ ನಕ್ಕು ಸುಮ್ಮನಾಗಿದ್ದರು. ಪೊಲೀಸರಿಗೆ ಪ್ರತಿ ದಿನ ಬರುವ ದೂರಿನಲ್ಲಿ ಮತ್ತೊಂದು ಆಗಿರಬಹುದು. ಎಲ್ಲಾ ದೂರುಗಳನ್ನು ಲಘುವಾಗಿ ಪರಿಗಣಿಸಿದರೆ ಹೇಗೆ? ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಇದಕ್ಕೆಲ್ಲಾ ಯಾರು ಹೊಣೆ ಎಂದು ಅಂಜಲಿ ಪ್ರಶ್ನಿಸಿದ್ದಾರೆ.
ಬೆದರಿಕೆ ಬಂದ ಬೆನ್ನಲ್ಲೇ ಪೊಲೀಸರಿಗೆ ತಿಳಿಸಿದ್ದೇವೆ. ಅಂದೇ ಕ್ರಮ ಕೈಗೊಂಡಿದ್ದರೆ, ಆರೋಪಿಗಳನ್ನು ವಶಕ್ಕೆ ಪಡೆದಿದ್ದರೆ ಒಂದು ಅಮೂಲ್ಯ ಜೀವ ಉಳಿಯುತ್ತಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು ಈ ರೀತಿ ನಿರ್ಲಕ್ಷ್ಯವಹಿಸಿದ್ದಾರೆ. ಒಂದು ಸಣ್ಣ ಕ್ರಮ ಸಮಾಜದಲ್ಲಿ ಮಹತ್ತರ ಬದಲಾವಣೆಗೆ ನಾಂದಿ ಹಾಡುತ್ತಿತ್ತು. ಆದರೆ ಪೊಲೀಸರು ಸೇವೆ ಮಾಡುತ್ತಿಲ್ಲ. ಮಾಡುತ್ತಿದ್ದರೆ ಈ ಘಟನೆ ನಡೆಯುತ್ತಲೇ ಇರಲಿಲ್ಲ ಎಂದು ಅಂಜಲಿ ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಸಂಬಂಧ 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರೆ. ಆದರೆ ಈ ಗುಂಪು ಹಲವು ಕೃತ್ಯಗಳಲ್ಲಿ ಭಾಗಿಯಾಗಿದೆ ಅನ್ನೋ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಅನ್ನೋ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಕುಟುಂಬದ ಪ್ರೀತಿ ಪರಿಶೀಲಿಸಲು ತನ್ನದೇ ಕಿಡ್ನಾಪ್ ನಾಟಕ, ಮುಂದೇ ನಡೆದಿದ್ದೇ ರೋಚಕ!