ಹಳಿಯಾಳದಲ್ಲಿ ನಡೆದ ಜಾತ್ರೆ ಹಾಗೂ ಮಾರುಕಟ್ಟೆಗಳಲ್ಲಿ ಸಾರ್ವಜನಿಕರು ಮೊಬೈಲ್ ಕಳೆದುಕೊಂಡು ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಮೊಬೈಲ್ ಐಎಂಇಐ ನಂಬರ್ ಮೂಲಕ ಪತ್ತೆ ಮಾಡಿದ ಪೊಲೀಸರು. 

ಉತ್ತರಕನ್ನಡ(ಜ.03): ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಸಾರ್ವಜನಿಕರು ಕಳೆದುಕೊಂಡ ಮೊಬೈಲ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಲೆಬಾಳುವ ಒಟ್ಟು 20 ಮೊಬೈಲ್‌ಗಳನ್ನು ಪೊಲೀಸರು ಗೋವಾ, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆಯಿಂದ ವಶಕ್ಕೆ ಪಡೆದಿದ್ದಾರೆ. 

ಹಳಿಯಾಳದಲ್ಲಿ ನಡೆದ ಜಾತ್ರೆ ಹಾಗೂ ಮಾರುಕಟ್ಟೆಗಳಲ್ಲಿ ಸಾರ್ವಜನಿಕರು ಮೊಬೈಲ್ ಕಳೆದುಕೊಂಡು ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪೊಲೀಸರು ಮೊಬೈಲ್ ಐಎಂಇಐ ನಂಬರ್ ಮೂಲಕ ಪತ್ತೆ ಮಾಡಿದ್ದಾರೆ.

Accident: ಹೊಸ ವರ್ಷಕ್ಕೆ ಗೋವಾಕ್ಕೆ ಹೋದವರ ಕಾರು ಡಿಕ್ಕಿ: ತಮಿಳುನಾಡಿನ ನಾಲ್ವರು ಸಾವು

ಆದ್ರೆ ಕಳೆದುಹೋದ ಮೊಬೈಲ್‌ಗಳನ್ನು ಕೆಲವು ಕಡಿಮೆ ದರಕ್ಕೆ ಖರೀದಿಸಿ ಉಪಯೋಗಿಸುತ್ತಿದ್ದರು. ಸುಮಾರು 2 ಲಕ್ಷ 40 ಸಾವಿರ ರೂಪಾಯಿ ಮೌಲ್ಯದ ಮೊಬೈಲ್‌ಗಳನ್ನು ಕಳೆದುಕೊಂಡವರಿಗೆ ವಾಪಸ್ ನೀಡಲಾಗಿದೆ.